ಬಂಟ್ವಾಳ:ದ.ಕ ಜಿಲ್ಲಾ ಪೋಲೀಸ್ ವರಿಷ್ಠಾಧಿಕಾರಿ ಹೃಷಿಕೇಶ್ ಸೋನಾವಣೆ ಅವರು ಸ್ವತಃ ಪೀಲ್ಡಿಗಿಳಿದು ವಾಹನ ತಪಾಸಣೆ ನಡೆಸಿದ ಘಟನೆ ಬಿಸಿರೋಡು ಮತ್ತು ಪರಂಗಿ
.
ಕೊರೊನಾ ಲಾಕ್ ಡೌನ್ ನಿಯಮ ಪಾಲನೆ ಮಾಡದೆ ಅನಗತ್ಯವಾಗಿ ತಿರುಗಾಟ ನಡೆಸುತ್ತಿದ್ದ ವಾಹನಗಳ ತಪಾಸಣೆ ನಡೆಸಿ ಬುದ್ದಿ ಮಾತು ಹೇಳಿದ್ದಾರೆ.
ಮಾಸ್ಕ್ ಧರಿಸದೆ ಹಾಗೂ ಅನಗತ್ಯ ವಾಗಿ ತಿರುಗಾಟ ನಡೆಸುವ ವಾಹನಗಳನ್ನು ತಪಾಸಣೆ ನಡೆಸಿ ದಂಡ ವಿಧಿಸಿ ಬಿಸಿ ಮುಟ್ಟಿಸಿದ ಅವರು ಸರಕಾರದ ನಿಯಮಗಳನ್ನು ಪಾಲಿಸಿ ಎಂದು ಅವರು ವಾಹನ ಸವಾರರಿಗೆ ತಿಳಿಸಿದರು.
ಕೊರೊನಾ ಎರಡನೇ ಅಲೆಯ ನಿಯಂತ್ರಣಕ್ಕಾಗಿ ಸರಕಾರ ನಿಯಮಗಳನ್ನು ಮಾಡಿದ್ದಾರೆ ಪಾಲನೆ ಮಾಡುವ ಜವಬ್ದಾರಿಪ್ರತಿಯೊಬ್ಬ ನಾಗರೀಕನ ಮೇಲಿದೆ ಎಂಬ ಸಂದೇಶ ವಾಹನ ಸವಾರ ರಿಗೆ ದಂಡ ವಿಧಿಸುವ ಮೂಲಕ ರವಾನಿಸಿದ್ದಾರೆ.