ಬಂಟ್ವಾಳ: ವೀಕೆಂಡ್ ಕರ್ಪ್ಯೂ ಬಂಟ್ವಾಳ ತಾಲೂಕಿನ ಅಂಗಡಿ ಮುಗ್ಗಟ್ಟು ಸಂಪೂರ್ಣ ಬಂದ್ ಆಗಿದೆ.
ಕೋವಿಡ್ ನಿಯಂತ್ರಣ ಮಾಡಲು ಸರಕಾರ ವಾರದ ಐದು ಲಾಕ್ ಡೌನ್ ಸಡಿಲಿಕೆ ಮಾಡಿ ಶುಕ್ರವಾರ ರಾತ್ರಿಯಿಂದ ಸೋಮವಾರ 5 ಗಂಟೆಯವರೆಗೆ ಕರ್ಪ್ಯೂ ವಿಧಿಸಿದೆ.
ಈ ಹಿನ್ನೆಲೆಯಲ್ಲಿ ಬಂಟ್ಚಾಳ ತಾಲೂಕಿನಲ್ಲಿ ಪೋಲೀಸರು ಬಿಗಿ ತಪಾಸಣೆ ನಡೆಸುತ್ತಿದ್ದಾರೆ.
ಬೆಳಿಗ್ಗೆ ಮುಂಜಾನೆಯಿಂದಲೇ ಬಂಟ್ಚಾಳ ಪೋಲೀಸರು ವೀಕೆಂಡ್ ಕರ್ಪ್ಯೂ ನ ವೇಳೆ ಅನಗತ್ಯವಾಗಿ ಯಾರು ಮನೆಯಿಂದ ಹೊರಬರಬೇಡಿ ಎಂದು ವಿನಂತಿ ಮಾಡಿದ್ದಲ್ಲದೆ, ಪೋಲೀಸರ ಮನವಿ ದಿಕ್ಕರಿಸಿ ಸುತ್ತಾಡಿದ ವಾಹನ ಸವಾರರಿಗೆ ಬಿಸಿಮುಟ್ಟಿಸಿದ್ದಾರೆ.