ಬಂಟ್ವಾಳ ಬ್ಲಾಕ್ ಕಾಂಗ್ರೆಸ್ ಹಾಗೂ ವಲಯ ಕಾಂಗ್ರೆಸ್ ಸಂಗಬೆಟ್ಟು , ಕುಕ್ಕೀಪಾಡಿ, ರಾಯಿ ಇದರ ವತಿಯಿಂದ ಮಾಡಮೆ ನಾಯರ ಮತ್ತು ಇಂಡಿಯನ್ ಆಯಿಲ್ ಸಂಗಬೆಟ್ಟು ಪೆಟ್ರೋಲ್ ಪಂಪ್ ಮುಂಬಾಗ ಕೇಂದ್ರದ ಬಿಜೆಪಿ ಸರಕಾರ ಹಾಗೂ ರಾಜ್ಯ ಬಿಜೆಪಿ ಸರಕಾರದ ಪೆಟ್ರೋಲ್,ಡೀಸಲ್ ಮತ್ತು ಗ್ಯಾಸ್ ಬೆಲೆ ಏರಿಕೆ ವಿರುದ್ಧ ಬ್ರಹತ್ ಪ್ರತಿಭಟನೆ ನಡೆಯಿತು.
ಕೂಡಲೇ ತೈಲ ಬೆಲೆ ಇಳಿಸಿ ಜನಸಾಮಾನ್ಯರ ಕಷ್ಟಕ್ಕೆ ಸ್ಪಂದಿಸುವಂತೆ ಒತ್ತಾಯಿಸಲಾಯಿತು. ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಉಪಾಧ್ಯಕ್ಷ ಜಗದೀಶ್ ಕೊಯಿಲ ಮತ್ತು ಕೂಕ್ಕಿಪ್ಪಾಡಿ ತಿಮ್ಮಪ್ಪ ಪೂಜಾರಿ ಸಭೆಯನ್ನು ಉದ್ದೇಶಿಸಿ ಮಾತನಾಡಿದರು. ಯುವ ಕಾಂಗ್ರೆಸ್ ಅಧ್ಯಕ್ಷ ಸುರೇಶ್ ಪೂಜಾರಿ ಜೋರ ವಲಯ ಕಾಂಗ್ರೆಸ್ ಅಧ್ಯಕ್ಷರಾದ ದಿನೇಶ್ ಶೆಟ್ಟಿಗಾರ್, ಸುರೇಶ್ ಶೆಟ್ಟಿ ಮುಖಂಡರಾದ ದೇವಪ್ಪ ಕರ್ಕೇರಾ ಕರ್ಪೇ, ಸೀತಾರಾಮ ಶೆಟ್ಟಿ, ದೇವರಾಜ್ ಸಾಲ್ಯಾನ್, ಅಶೋಕ್ ಆಚಾರ್ಯ, ಜಯಕರ ಶೆಟ್ಟಿ, ಮೊಹಮ್ಮದ್ ಝೂಬಿ, ರಮೇಶ್ ಮಂಜೀಲಾ,ದಾಮೋದರ್ ಪೂಜಾರಿ, ವಿಜಯರಾಜ್ ಜೈನ್, ಅಶೋಕ್ ಪೂಜಾರಿ, ಜೋಸ್ಲಿ, ದಿನೇಶ್ ಸುಂದರ ಶಾಂತಿ, ಅಮರನಾಥ್ ನಾಯ್ಕ, ನವೀನ್ ಮಂಜಿಲ್, ಮೋಹನ್ ಪೂಜಾರಿ, ಹೃಷಿಕೇಶ್, ಜಯಪ್ರಕಾಶ್, ರುಕ್ಕಯ್ಯ ಬಂಗೇರ ಉಪಸ್ಥಿತರಿದ್ದರು.