ಬಂಟ್ವಾಳ: ಅನಾರೋಗ್ಯದಿಂದ ಬಳಲುತ್ತಿರುವ ವ್ಯಕ್ತಿಗೆ ಮುಖ್ಯಮಂತ್ರಿ ಪರಿಹಾರ ನಿಧಿಯ ಚೆಕ್ ವಿತರಿಸಿದ ಶಾಸಕ ರಾಜೇಶ್ ನಾಯ್ಕ್.
ನರಿಕೊಂಬು ಗ್ರಾಮದ ನಿವಾಸಿ ಕುಷಿತ್ ಬಾಲ್ಯದಿಂದಲೇ ಅಪರೂಪದ ಎಲುಬು ಕಾಯಿಲೆಯಿಂದ ಬಳಲುತ್ತಿದ್ದು ಇವರಿಗೆ ಬಂಟ್ವಾಳ ಶಾಸಕರಾದ ರಾಜೇಶ್ ನಾಯ್ಕ್ ಉಳಿಪ್ಪಾಡಿಯವರ ಶೀಫಾರಸ್ಸಿನ ಮೇರೆಗೆ ಬಿ.ಎಸ್ ಯಡಿಯೂರಪ್ಪರವರು ಪರಿಹಾರ ನಿಧಿಯಾಗಿ ರೂ 3,00,000 ಮಂಜೂರು ಮಾಡಿದ್ದು ಈ ಚೆಕ್ ನ್ನು ಪೋಷಕರಾದ ಜಯಂತಿ ಎಂಬುವವರಿಗೆ ಕಚೇರಿಯಲ್ಲಿ ಶಾಸಕರು ಹಸ್ತಾಂತರಿಸಿದರು.ಈ ಸಂದರ್ಭದಲ್ಲಿ ಯಶೋಧರ್ ಕರ್ಬೆಟ್ಟು ಉಪಸ್ಥಿತರಿದ್ದರು.