ಮಡಂತ್ಯಾರು ಹಾಲು ಉತ್ಪಾದಕರ ಸಹಕಾರಿ ಸಂಘದ ವ್ಯಾಪ್ತಿಯ ಎಲ್ಲಾ ಸದಸ್ಯರುಗಳ ಹಸುಗಳಿಗೆ 2021-22 ನೇ ಸಾಲಿನ ಹೊಸ ವಿಮೆಯನ್ನು ಮಾಡುವ ಅಭಿಯಾನಕ್ಕೆ ಚಾಲನೆ.
ದಕ್ಷಿಣ ಕನ್ನಡ ಜಿಲ್ಲಾ ಹಾಲು ಉತ್ಪಾದಕರ ಒಕ್ಕೂಟದ ವ್ಯಾಪ್ತಿಯ ಸಂಘಗಳ ಹಾಲು ಉತ್ಪಾದಕರ ಸದಸ್ಯರುಗಳ ಹಸುಗಳು ಮರಣ ಹೊಂದಿದ ಸಂದರ್ಭದಲ್ಲಿ ಹೈನುಗಾರರಿಗೆ ಆರ್ಥಿಕ ನಷ್ಟವಾಗುತ್ತಿದ್ದು, ಇದರಿಂದ ಹೈನುಗಾರಿಕೆಯಲ್ಲಿ ತೊಡಗಿಸಿಕೊಳ್ಳಲು ಕಷ್ಟವಾಗುತ್ತದೆ ಎಂಬ ಉದೇಶದಿಂದ ಹಾಗೂ ಹೈನುಗಾರಿಕೆಯನ್ನು ಉತ್ತೇಜಿಸುವ ದೃಷ್ಟಿಯಿಂದ ಒಕ್ಕೂಟವು ಪ್ರತಿ ಸದಸ್ಯರುಗಳ ಹಸುಗಳಿಗೆ ಶೇಕಡಾ 75 ರಿಯಾಯಿತಿಯಲ್ಲಿ ವಿಮೆ ಮಾಡಲು ತೀರ್ಮಾನಿಸಿದ್ದು, ಇದರಂತೆ ಮಡಂತ್ಯಾರು ಹಾಲು ಉತ್ಪಾದಕರ ಸಹಕಾರಿ ಸಂಘದ ವ್ಯಾಪ್ತಿಯ ಪ್ರತಿ ಸದಸ್ಯರುಗಳ ಮನೆಮನೆಗಳಿಗೆ ಆಯಾಯ ವ್ಯಾಪ್ತಿಯ ಆಡಳಿತ ಮಂಡಳಿಯ ನಿರ್ದೇಶಕರು ಮತ್ತು ಸಿಬ್ಬಂದಿ ವರ್ಗ ತೆರಳಿ ವಿಮೆಯನ್ನು ಮಾಡುವುದರ ಮುಖಾಂತರ ಚಾಲನೆ ನೀಡಲಾಯಿತು.
ಕೋವಿಂದ್ – 19 ದೇಶಾದ್ಯಂತ ವ್ಯಾಪಕವಾಗಿ ಹರಡುತ್ತಿರುವ ಈ ವಿಷಮ ಸ್ಥಿತಿಯಲ್ಲಿ ಸರಕಾರದ ನಿಯಮಗಳನ್ನು ಪಾಲಿಸುವುದರೊಂದಿಗೆ, ಸಂಘದ ಸದಸ್ಯರುಗಳಿಗೆ ಯಾವುದೇ ತೊಂದರೆಯಾಗದೆ ಈ ಯೋಜನೆಯ ಸೌಲಭ್ಯ ದೊರೆಯಬೇಕು ಎಂಬ ಸದುದ್ದೇಶದಿಂದ ಆಡಳಿತ ಮಂಡಳಿಯು ಈ ತೀರ್ಮಾನವನ್ನುಕೈಗೊಂಡಿದೆ. ಸದಸ್ಯರುಗಳಿಂದ ಪ್ರತಿ ರಾಸುಗಳಿಗೆ ಶೇ. 25 ಭಾಗವನ್ನು ಮಾತ್ರ ವಿಮಾ( ಛಾಯಾಚಿತ್ರ, ಇತರ ಬಾಬ್ತು ಹೊರತುಪಡಿಸಿ) ಮೊತ್ತವಾಗಿ ತುಂಬಿಕೊಳಲಾಗುತ್ತಿದೆ. ಈ ಅಭಿಯಾನದಲ್ಲಿ ಸಂಘದ ಅಧ್ಯಕ್ಷರಾದ ಸದಾಶಿವ ಶೆಟ್ಟಿ ಮುಗೆರೋಡಿ, ಉಪಾಧ್ಯಕ್ಷರಾದ ಎಂ ರಾಮಕೃಷ್ಣ ಹೆಬ್ಬಾರ್, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜಿ ಬಾಲಕೃಷ್ಣ, ಹರಿಪ್ರಸಾದ್ ಶೆಟ್ಟಿ ಪದೆಂಜಿಲ, ಸಂಜೀವ ಶೆಟ್ಟಿ ಉರೆಸಾಗು, ರವಿರಾಜ್ ಶೆಟ್ಟಿ ಪಾತಿಲ, ಕಾಂತಪ್ಪ ಗೌಡ ಹಟ್ಟತ್ತೋಡಿ, ಎಂ. ಮಂಜಯ್ಯ ಶೆಟ್ಟಿ ಮೂಡಬೆಟ್ಟು, ಪುರುಷೋತ್ತಮ ನಡಿಬೆಟ್ಟು, ಅಶೋಕ್ ಕುಮಾರ್ ಬಸವನಗುಡಿ, ಅಗ್ನೇಸ್ ಫ್ರ್ಂಕ್ ಬರ್ನ, ಸೌಮ್ಯ ಅಲೆಕ್ಕಿ, ಗಿರಿಯಪ್ಪ ನಾಯ್ಕ ಒಳಗುಡ್ಡೆ, ವಿಜಯ ಕೋಟೆ, ಹಾಗೂ ಸಿಬ್ಬಂದಿ ವರ್ಗ ಪಾಲ್ಗೊಂಡರು.