Wednesday, April 10, 2024

ನರಿಕೊಂಬು ಬಿರ್ವೆರ್ ಸೇವಾ ಟ್ರಸ್ಟ್ ವತಿಯಿಂದ ಗ್ರಾಮದ 1ಸಾವಿರಕ್ಕಿಂತಲೂ ಅಧಿಕ ಬಡ ಕುಟುಂಬಗಳಿಗೆ ಅಕ್ಕಿವಿತರಣೆ

ಬಂಟ್ವಾಳ: ಬಿರ್ವೆರ್ ಸೇವಾ ಟ್ರಸ್ಟ್ ನರಿಕೊಂಬು ಇದರ ವತಿಯಿಂದ ಲಾಕ್‌ಡೌನ್ ವೇಳೆ ಸಂಕಷ್ಟಕ್ಕೀಡಾದ ನರಿಕೊಂಬು ಗ್ರಾಮದ 1 ಸಾವಿರಕ್ಕಿಂತಲೂ ಅಧಿಕ ಬಡಕುಟುಂಬಗಳಿಗೆ ಹಾಗೂ 8 ಮಂದಿ ಆಶಾಕಾರ್ಯಕರ್ತಯರಿಗೆ ತಲಾ 10 ಕೆ.ಜಿಯಂತೆ ಅಕ್ಕಿಯನ್ನು ಭಾನುವಾರ ವಿತರಿಸಲಾಯಿತು.

ಟ್ರಸ್ಟ್‌ನ ಕಚೇರಿಯಲ್ಲಿ ಆರೋಗ್ಯ ಸಹಾಯಕಿ ಸಹಿತ ಆಶಾಕಾರ್ಯಕರ್ತಯರಿಗೆ ನರಿಕೊಂಬು ಗ್ರಾಮ ಪಂಚಾಯತಿ ಉಪಾಧ್ಯಕ್ಷ ಪ್ರಕಾಶ್ ಮಡಿಮುಗೇರು ಅಕ್ಕಿ ವಿತರಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಈ ಸಂದರ್ಭ ಟ್ರಸ್ಟಿ ಕೇಶವ ಶಾಂತಿ ಮಾತನಾಡಿ ಬ್ರಹ್ಮಶ್ರೀ ನಾರಾಯಣ ಗುರುಗಳ ತತ್ವ ಸಂದೇಶದಂತೆ ಬಿರ್ವೆರ್ ಸೇವಾ ಟ್ರಸ್ಟ್ ಮೂಲಕ ನರಿಕೊಂಬು ಗ್ರಾಮದ ಸರ್ವ ಜಾತಿ, ಧರ್ಮಗಳ ಜನರಿಗೆ ಅಕ್ಕಿ ವಿತರಿಸುವ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದೇವೆ. ಕಳೆದ ವರ್ಷ ಕರೋನಾ ಒಂದನೇ ಅಲೆ ಬಾಧಿಸಿದಾಗಲೂ ಬಡವರಿಗೆ ಅಕ್ಕಿ ವಿತರಿಸಿದ್ದೇವೆ, ಈ ಸಂದರ್ಭದಲ್ಲೂ ನಮ್ಮ ಸೇವಾ ಕಾರ್ಯವನ್ನು ಮುಂದುವರೆಸಿದ್ದೇವೆ ಎಂದು ತಿಳಿಸಿದರು.

ಈ ಸಂದರ್ಭ ಟ್ರಸ್ಟ್‌ನ ಅಧ್ಯಕ್ಷ ದಿನೇಶ್ ಭಾಗೀರಥಿ ಕೋಡಿ, ಕಾರ್ಯದರ್ಶಿ ಸಂಜೀವ ಎನ್., ಕೋಶಾಧಿಕಾರಿ ಸದಾಶಿವ, ಜೊತೆಕಾರ್ಯದರ್ಶಿ ಸತೀಶ್ ಎನ್., ಸಂಘಟನಾ ಕಾರ್ಯದರ್ಶಿ ಮನೋಜ್ ಪೂಜಾರಿ ನಿರ್ಮಲ್, ಟ್ರಸ್ಟಿಗಳಾದ ಕೇಶವ ಶಾಂತಿ, ಶ್ರೀಧರ ಪೂಜಾರಿ, ಕೃಷ್ಣಪ್ಪ ಪೂಜಾರಿ, ಯೋಗೀಶ್ ಅಮೀನ್, ನಾರಾಯಣ ಪೂಜಾರಿ, ಸೀತಾರಾಮ, ಶಿವಶಂಕರ್, ಯಜ್ಞಶ್ರೀ, ವೀಣಾ, ರಾಜೇಶ್ ಬೋಳಂತೂರು, ಗೌರವ ಸಲಹೆಗಾರ ಪುರುಷೋತ್ತಮ ಸಾಲ್ಯಾನ್ ನರಿಕೊಂಬು, ಬೃಹತ್ ಮತು ಮಧ್ಯಮಕೈಗಾರಿಕೆ ಖಾತೆ ಸಚಿವರ ಆಪ್ತ ಕಾರ್ಯದರ್ಶಿ ಜಗನ್ನಾಥ ಬಂಗೇರ ನಿರ್ಮಲ್, ಪ್ರಮುಖರಾದ ರಮೇಶ್ ಬೋರುಗುಡ್ಡೆ, ಉಮೇಶ್ ನೆಲ್ಲಿಗುಡ್ಡೆ, ಹರೀಶ್ ಅಂಚನ್ ನರಿಕೊಂಬು, ಪ್ರಕಾಶ್ ಕೋಡಿಮಜಲು, ಸಂಚಾಲಕರಾದ ಚೇತನ್ ಏಲಬೆ, ಮಹೇಶ್ ರಾಯಸ, ದಿವಾಕರ ಅರೆಬೆಟ್ಟು, ಮೋಹನ್ ಕಲ್ಯಾರ್, ಸುರೇಶ್ ಕೋಟ್ಯಾನ್ ಸಜಂಕ್ಪಾಲಿಕೆ, ಮಾಧವ ಕರ್ಬೆಟ್ಟು, ಉದಯ ಶಾಂತಿ ಮೊದಲಾದವರು ಉಪಸ್ಥಿತರಿದ್ದರು. ಬಳಿಕ ಟ್ರಸ್ಟ್ ಸದಸ್ಯರು ನರಿಕೊಂಬು ಗ್ರಾಮದ ಮನೆ ಮನೆಗೆ ತೆರಳಿ ಅಕ್ಕಿ ವಿತರಿಸಿದರು.

More from the blog

ಮರು ಮೌಲ್ಯಮಾಪನಕ್ಕೆ ಅರ್ಜಿ ಸಲ್ಲಿಸುವುದು ಹೇಗೆ….?​ ಇಲ್ಲಿದೆ ಮಾಹಿತಿ

ಬೆಂಗಳೂರು: ಈ ಬಾರಿಯ ದ್ವಿತೀಯ ಪಿಯುಸಿ ಪರೀಕ್ಷೆ ಫಲಿತಾಂಶ ಪ್ರಕಟಗೊಂಡಿದ್ದು, ಶೇ 81.15 ಮಂದಿ ಉತ್ತೀರ್ಣಗೊಂಡಿದ್ದಾರೆ. 2024ನೇ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಕಲಾ ವಿಭಾಗದಲ್ಲಿ 1,28,448 ವಿದ್ಯಾರ್ಥಿಗಳು ಪಾಸ್ ಆಗಿದ್ದಾರೆ. ವಾಣಿಜ್ಯ ವಿಭಾಗದಲ್ಲಿ...

ದ್ವಿತೀಯ ಪಿಯು ಫಲಿತಾಂಶ ಪ್ರಕಟ : ದಕ್ಷಿಣ ಕನ್ನಡ ಜಿಲ್ಲೆಗೆ ಮೊದಲ ಸ್ಥಾನ

ಬೆಂಗಳೂರು: ಮಾರ್ಚ್ 1ರಿಂದ ಮಾರ್ಚ್ 22ರವರೆಗೆ ನಡೆದಿದ್ದ ದ್ವಿತೀಯ ಪಿಯುಸಿ ಪರೀಕ್ಷೆ ಫಲಿತಾಂಶ ಬುಧವಾರ ಪ್ರಕಟಗೊಂಡಿದೆ. ಬೆಂಗಳೂರಿನಲ್ಲಿ ಶಿಕ್ಷಣ ಇಲಾಖೆ ಸುದ್ದಿಗೋಷ್ಠಿ ನಡೆಸಿ ಫಲಿತಾಂಶ ಪ್ರಕಟಿಸಿದೆ. ಈ ಬಾರಿ, ಶೇ 81.15 ಮಂದಿ ಉತ್ತೀರ್ಣರಾಗಿದ್ದಾರೆ....

ಶಾಲಾ ಸಮುದಾಯದತ್ತ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ

ಮಾಣಿ: ಶೈಕ್ಷಣಿಕ ವಿಚಾರಗಳ ಸಂಬಂಧಿತವಾದ ಒಳ್ಳೆಯ ಚಚೆ೯ಗಳು ಮೂಡಿಬಂದಾಗ ವಿದ್ಯಾರ್ಥಿಗಳ ಶೈಕ್ಷಣಿಕ ಅಭಿವೃದ್ಧಿಗೆ ಪೂರಕವಾದ ಕೆಲಸಗಳು ಮೂಡಲು ಸಾಧ್ಯ ‌. ಪ್ರತಿಯೊಬ್ಬ ವಿದ್ಯಾರ್ಥಿ, ಪೋಷಕರು,ತನ್ನ ಶಾಲೆಯ ಬಗ್ಗೆ ಒಳ್ಳೆಯ ಭಾವನೆ, ಸಂಬಂಧ ಇರಬೇಕು...

ಮೈಟ್ ಎಜುಕೇಶನ್ ಸಂಸ್ಥೆಯ ವತಿಯಿಂದ 2024ರ ಪ್ರಾಕ್ಟಿಕಲ್ ಪರೀಕ್ಷೆ

ಮಂಗಳೂರು ಹಾಗೂ ಬಿಸಿರೋಡ್ ನಲ್ಲಿ ಕಾರ್ಯನಿರ್ವಹಿಸುತ್ತಿರುವ ಮೈಟ್ ಎಜುಕೇಶನ್ ಸಂಸ್ಥೆಯ ವತಿಯಿಂದ 2024ರ ಪ್ರಾಕ್ಟಿಕಲ್ ಪರೀಕ್ಷೆ ಸೋಮವಾರ ಬಿಸಿರೋಡ್ ಶಾಖೆಯಲ್ಲಿ ನಡೆಯಿತು. ಟೀಚರ್ಸ್ ಟ್ರೈನಿಂಗ್ ವಿಭಾಗದ ವಿದ್ಯಾರ್ಥಿನಿಯರಿಂದ ಪ್ರಸ್ತುತ ವರ್ಷದಲ್ಲಿ ತಯಾರಿಸಿದ ಎಲ್ಲಾ ಕಲಿಕಾ...