ಬಂಟ್ವಾಳ: ಪಾಣೆಮಂಗಳೂರು ವಾರ್ಡ್ ನ ಬೀಟ್ ಪೋಲೀಸ್ ಪ್ರವೀಣ್ ಅವರ ಸಾಮಾಜಿಕ ಕಳಕಳಿಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್.
ಮೂಲತಃ ಹಾವೇರಿ ಜಿಲ್ಲೆಯ ಹಾನಗಲ್ ತಾಲೂಕಿನ ಶಿವಪುರ ನಿವಾಸಿ ಪ್ರವೀಣ್ ಅವರು ಬಂಟ್ವಾಳ ನಗರ ಠಾಣೆಯ ಪೋಲೀಸ್ ಆಗಿದ್ದು ಇವರ ಜನಪರ ಕಾಳಜಿ ಸೇವೆ ಇತರರಿಗೆ ಮಾದರಿ.
ಬೀಟ್ ಪೋಲೀಸ್ ಪ್ರವೀಣ್ ಅವರು ಲಾಕ್ ಡೌನ್ ಅವಧಿಯಲ್ಲಿ
ಪಾಣೆಮಂಗಳೂರು ಸಮೀಪ ಇರುವ ಜೈನರಪೇಟೆ ಪರಿಸರದಲ್ಲಿ ಸುತ್ತಾಡುವ ವೇಳೆ ಇವರ ಕಣ್ಣಿಗೆ ಬಿದ್ದ ಎರಡು ಮನೆಯ ಸ್ಥಿತಿ ಮನಸ್ಸಿಗೆ ತುಂಬಾ ಬೇಸರ ತಂದಿತ್ತು. ಅದಿನವೇ ಅವರಿಗೇನಾದರೂ ಸಹಾಯಮಾಡಬೇಕು ಎಂದು ನಿಶ್ಚಯಮಾಡಿದ್ದರು.
ಈ ಹಿನ್ನೆಲೆಯಲ್ಲಿ ಸ್ಥಳೀಯ ಪುರಸಭಾ ಸದಸ್ಯ ಇದ್ರೀಸ್ ಅವರಿಗೆ ತಿಳಿಸಿ ಜೈನರ ಪೇಟೆ ವಾರ್ಡ್ ನಲ್ಲಿ ಅರ್ಥಿಕ ವಾಗಿ ತೀರಾ ಬಡತನದಲ್ಲಿ ರುವ ಕುಟುಂಬಗಳನ್ನು ಗುರುತಿಸುವಂತೆ ಹೇಳಿದ ಪ್ರಕಾರ ಸದಸ್ಯರು ಒಟ್ಟು ಹತ್ತು ಮನೆಗಳನ್ನು ಗುರುತಿಸಿದರು.
ಸದಸ್ಯ ಗುರುತಿಸಿ ದ ಮನೆಗಳಿಗೆ ಪ್ರವೀಣ್ ಅವರು ಸ್ವತಃ ವೈಯಕ್ತಿಕ ನೆಲೆಯಲ್ಲಿ ದೈನಂದಿನ ಆಹಾರದ ಕಿಟ್ ಗಳನ್ನು ಮನೆಗಳಿಗೆ ತಲುಪಿಸಿದ್ದಾರೆ.
ಇದೀಗ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಅಗುತ್ತಿದೆ.ಬಂಟ್ವಾಳ ಪೋಲೀಸ್ ಠಾಣೆಯ ಜೈನರ ಪೇಟೆ ವಾರ್ಡ್ ನ ಬೀಟ್ ಪೋಲೀಸ್ ಪ್ರವೀಣ್ ರ ಸಮಾಜ ಸೇವೆ ದೇಶದ ಎಲ್ಲಾ ಪೋಲೀಸರಿಗೂ ಮಾದರಿಯಾಗಲಿ ಎಂಬ ಬರಹದ ಮೂಲಕ ವೀಡಿಯೋ ಶೇರ್ ಮಾಡಲಾಗಿದೆ.
ಶುದ್ಧ ಹಸ್ತದ ಓರ್ವ ಅಪರೂಪದ ಪೋಲೀಸ್ ಪ್ರವೀಣ್ ಅವರು ಅಂದು ಹೇಳಿದರೆ ಯಾರು ನಂಬಲು ಅಸಾಧ್ಯ.
ಅತ್ಯಂತ ಬಡತನದಲ್ಲಿ ಶಿಕ್ಷಣ ಮುಗಿಸಿ ಪೋಲೀಸ್ ಕೆಲಸ ಸೇರಿದ ಪ್ರವೀಣ್ ಅವರದ್ದು ಭಿನ್ನ ವಾದ ಅಲೋಚನೆ.
ಪೋಲೀಸ್ ನಲ್ಲಿ ನಾನು ಬದಲಾದಾಗ ಮಾತ್ರ ಸಮಾಜ ಬದಲಾಗುತ್ತದೆ.
ಹಾಗಾಗಿ ನಾವು ಶುದ್ಧ ವಾಗಿರಬೇಕು ಅವಾಗ ಸಮಾಜ ಸ್ವಚ್ಚವಾಗಿರಬೇಕು ಎಂಬುದು ಅವರ ಮಾತು.
ತಂದೆಯ ಅನಾರೋಗ್ಯದ ಮಧ್ಯೆಯೂ ಸಮಾಜಕ್ಕೆ ತಾನು ಏನಾದರೂ ನೀಡಬೇಕು ಎಂಬುದು ಇವರ ಹಂಬಲ , ಅದು ತಾನು ಸ್ವತಃ ದುಡಿದ ಹಣದಲ್ಲಿ ಮಾತ್ರ ಎಂಬುದು ಇವರ ಸಿದ್ದಾಂತ.