ಬಂಟ್ವಾಳ: ಚಾಲಕನ ನಿಯಂತ್ರಣ ತಪ್ಪಿ ಘನಗಾತ್ರ ದ ಲಾರಿ ಧರೆಗೆ ಡಿಕ್ಕಿ ಹೊಡೆದು ಚಾಲಕ ಹಾಗೂ ನಿರ್ವಾಹಕ ಗಾಯಗೊಂಡು ಆಸ್ಪತ್ರೆಗೆ ದಾಖಲಾದ ಘಟನೆ ಬಂಟ್ವಾಳದಲ್ಲಿ ಗುರುವಾರ ಮುಂಜಾನೆ ನಡೆದಿದೆ.
ಶಿವಮೊಗ್ಗ ಜಿಲ್ಲೆಯಿಂದ ಪುತ್ತೂರಿಗೆ ಅಕ್ಕಿ ಚೀಲಗಳನ್ನು ತುಂಬಿಸಿ ಕೊಂಡು ಹೋಗುತ್ತಿದ್ದ ಲಾರಿ ಬಂಟ್ವಾಳ ಎಸ್. ವಿ.ಎಸ್.ವಿದ್ಯಾ ಗಿರಿ ಶಾಲಾ ಬಳಿ ತಲುಪಿದ ವೇಳೆ ಚಾಲಕನ ನಿಯಂತ್ರಣ ಕಳೆದು ಲಾರಿ ರಸ್ತೆಯನ್ನು ಬಿಟ್ಟು ಬದಿಗೆ ಹೋಗಿ ಧರೆಗೆ ಡಿಕ್ಕಿಹೊಡೆದಿದೆ .
ಡಿಕ್ಕಿಯ ರಭಸಕ್ಕೆ ಲಾರಿ ಚಾಲಕ ಹಾಗೂ ನಿರ್ವಾಹಕ ನಿಗೆ ಗಾಯಗಳಾಗಿದ್ದು ಮಂಗಳೂರು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಘಟನಾ ಸ್ಥಳಕ್ಕೆ ಮೆಲ್ಕಾರ್ ಟ್ರಾಫಿಕ್ ಪೋಲೀಸರು ಬೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.