ಬಂಟ್ವಾಳ: ಬಂಟ್ವಾಳ ತಾಲೂಕಿನ ಚೆನ್ನೈತ್ತೋಡಿ ಗ್ರಾ.ಪಂ..ಒಂದು ವಾರಗಳ ಕಾಲ ಸಂಪೂರ್ಣ ಸೀಲ್ ಡೌನ್ ಗೆ ಜಿಲ್ಲಾಧಿಕಾರಿ ಅದೇಶ ಹೊರಡಿಸಿದ್ದಾರೆ.
ಚೆನ್ನೈತ್ತೋಡಿ ಗ್ರಾ.ಪಂ. ನಾಳೆ ಸೋಮವಾರ ಜೂನ್ ( 14) ಬೆಳಿಗ್ಗೆ 9. ಗಂಟೆ ಯಿಂದ ಜೂನ್ 21 ರ ಸೋಮವಾರದ ವರೆಗೆ ಒಂದು ವಾರಗಳ ಕಾಲ ಸಂಪೂರ್ಣ ಸೀಲ್ ಡೌನ್ ಗೆ ಜಿಲ್ಲಾಧಿಕಾರಿ ಆದೇಶ ನೀಡಿದ್ದಾರೆ.
ಕೋವಿಡ್ ಸೊಂಕು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ನಿಯಂತ್ರಣ ಸಾಧಿಸುವ ನಿಟ್ಟಿನಲ್ಲಿ ಟಾಸ್ಕ್ ಫೋರ್ಸ್ ಸಮಿತಿಯ ನಿರ್ಣಯ ದಂತೆ ಜಿಲ್ಲಾಧಿಕಾರಿ ಅದೇಶ ಮಾಡಿದ್ದಾರೆ.
ಸೋಮವಾರ 14 ರ ಬೆಳಿಗ್ಗೆ 9 ಗಂಟೆ ವರೆಗೆ ಅಗತ್ಯ ವಸ್ತುಗಳ ಖರೀದಿಗೆ ಅವಕಾಶ ನೀಡಲಾಗಿದೆ.
ಮುಂದಿನ ಸೋಮವಾರದ ವರಗೆ ಸೀಲ್ ಡೌನ್ ಮಾಡಿರುವ ಸಂದರ್ಭದಲ್ಲಿ ತುರ್ತು ಅಗತ್ಯ ವಸ್ತುಗಳ ಬೇಕಾದಲ್ಲಿ ಸ್ಥಳೀಯ ಗ್ರಾ.ಪಂ.ನ ಸಂಪರ್ಕ ಮಾಡಲು ಅವಕಾಶ ನೀಡಲಾಗಿದೆ.
ಚೆನ್ನೈತ್ತೋಡಿ ಗ್ರಾಮ ಪಂಚಾಯತ್ ವ್ಯಾಪ್ತಿ ಒಂದು ವಾರ ಸೀಲ್ ಡೌನ್ – ಹೇಗಿದೆ ಪಂಚಾಯತ್
ಮಾರ್ಗದರ್ಶಿ
ಬಂಟ್ವಾಳ ತಾಲೂಕಿನ ಚೆನ್ನೈತೋಡಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಕೋರೋನ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನಲೆಯಲ್ಲಿ ಜೂನ್ 14ರ ಬೆಳಿಗ್ಗೆ 6 ಗಂಟೆಯಿಂದ ಜೂನ್ 20ರವರೆಗೆ ಸೀಲ್ ಡೌನ್ ಘೋಷಿಸಿದ್ದು. ಗ್ರಾಮ ಪಂಚಾಯತ್ ಹೊಸ ಮಾರ್ಗ ಸೂಚಿಯನ್ನು ಬಿಡುಗಡೆಗೊಳಿಸಿದೆ
1. ಕೂಲಿಕಾರ್ಮಿಕರು ಪಂಚಾಯತ್ ಮುಖ್ಯರಸ್ತೆಯಲ್ಲಿ ಕೆಲಸಕ್ಕೆ ತೆರಳಲು 9 ಗಂಟೆ ಒಳಗೆ ಮತ್ತು ಮನೆಗೆ ಹಿಂದಿರುಗಲು ಸಂಜೆ 5 ರಿಂದ 6 ಗಂಟೆ ಒಳಗೆ ಅವಕಾಶ ಇರುತ್ತದೆ
2. ಕಾರ್ಖಾನೆ ಮತ್ತು ಮಹಿಳಾ ಮತ್ತು ಮಕ್ಕಳ ಪೌಷ್ಟಿಕ ಆಹಾರ ಉತ್ಪಾದನಾ ಕೇಂದ್ರ ಗಳಲ್ಲಿ ಶೇ. 50ರಷ್ಟು ಕಾರ್ಮಿಕರಿಗೆ ಮಾತ್ರ ಅವಕಾಶವಿರುತ್ತದೆ (ಜಿಲ್ಲಾಡಳಿತ ಆದೇಶದ ಮೇರೆಗೆ)
3. ನಂದಿನಿ ಹಾಲು ಮತ್ತು ದಿನಪತ್ರಿಕೆಗಳನ್ನು ಅವಕಾಶವಿರುವ ಡೀಲರ್ ಮಾತ್ರ 9 ಗಂಟೆಯೊಳಗೆ ಮಾರಾಟ ಮಾಡುವ ಅವಕಾಶವಿರುತ್ತದೆ
4. ಹೈನುಗಾರಿಕೆಗೆ ಸಂಬಂಧಿಸಿದ ವಸ್ತುಗಳ ವಹಿವಾಟನ್ನು 9 ಗಂಟೆಯೊಳಗೆ ವ್ಯವಹರಿಸಲು ಸಂಜೆ 4 ಗಂಟೆಯಿಂದ ಆರು ಗಂಟೆವರೆಗೆ ಅವಕಾಶವಿದೆ
5. ದಿನಸಿ ಮಾರಾಟವನ್ನು ಪಂಚಾಯತ್ ನಿಂದ ಅನುಮತಿ ಪಡೆದ ಅಂಗಡಿ ಮಾಲೀಕರು ಮಾತ್ರ ನಿಗದಿಪಡಿಸಿದ ಗ್ರಾಮಗಳಿಗೆ ತಮ್ಮ ದ್ವಿಚಕ್ರ ವಾಹನದಲ್ಲಿ ಗ್ರಾಹಕರಿಗೆ ತಲುಪಿಸಲು ಅವಕಾಶವಿದೆ
6. ಮೀನು ಮಾರಾಟಗಾರರು ಮಂಗಳವಾರ,ಗುರುವಾರ ಮತ್ತು ಶನಿವಾರ ಮಾತ್ರ ಮಧ್ಯಾಹ್ನ 12ಗಂಟೆಯೊಳಗೆ ಮನೆಮನೆಗೆ ತೆರಳಿ ಮಾರಾಟ ಮಾಡಲು ಅವಕಾಶವಿದೆ
7. ಗ್ಯಾಸ್ ಅಂಗಡಿ ಮಾಲೀಕರು ಅಂಗಡಿಯನ್ನು ತೆರೆಯದೆ ಆನ್ಲೈನ್ ಮೂಲಕ ಬುಕ್ ಮಾಡಿದವರಿಗೆ ತಮ್ಮ ವಾಹನದಲ್ಲಿ ಸರಬರಾಜು ಮಾಡಲು ಅವಕಾಶವಿದೆ
8. ಅಗತ್ಯವಸ್ತುಗಳ ಕಾಯ್ದೆಯನ್ವಯ ಪೆಟ್ರೋಲ್ ಬಂಕ್ ಮತ್ತು ಪಡಿತರ ಅಂಗಡಿಯವರು ಸರಬರಾಜು ಮಾಡಲು ಅವಕಾಶವಿರುತ್ತದೆ
9. ವೈದ್ಯಕೀಯ ಚಿಕಿತ್ಸೆ ಮತ್ತು ಇನ್ನಿತರ ತುರ್ತು ವ್ಯವಹಾರಕ್ಕಾಗಿ ಸೂಕ್ತ ದಾಖಲೆಗಳನ್ನು ತೋರಿಸಿ ಸಂಚರಿಸಲು ಅವಕಾಶವಿರುತ್ತದೆ