ಮುಂಗಾರು ಮಳೆ ಆಗಮನದಿಂದ ರೈತಾಪಿ ವರ್ಗದ ಖುಷಿಯ ಮಧ್ಯೆ ಬಂಟ್ವಾಳ ತಾಲೂಕಿನಲ್ಲಿ ಹಡಿಲು ಬಿದ್ದ ಗದ್ದೆಗಳಲ್ಲಿ ಭತ್ತದ ಕೃಷಿ ಚಟುವಟಿಕೆಗೆ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಅವರ ನೇತ್ರತ್ವದಲ್ಲಿ ರೂಪಿಸಿದ ಯೋಜನೆ ಕಾರ್ಯರೂಪಕ್ಕೆ ತರುವ ನಿಟ್ಟಿನಲ್ಲಿ ಪ್ರಥಮವಾಗಿ ಅಮ್ಮುಂಜೆ ಮತ್ತು ಕರಿಯಂಗಳ ಗ್ರಾಮದ ಕೃಷಿಕರ ಜೊತೆ ಇಲಾಖಾ ಅಧಿಕಾರಿಗಳು ಹಾಗೂ ಸ್ಥಳೀಯ ವ್ಯವಸಾಯ ಸೇವಾ ಸಹಕಾರಿ ಸಂಘದ ಉಪಸ್ಥಿತಿ ಯಲ್ಲಿ ಸಭೆ ಪೊಳಲಿ ಶ್ರೀರಾಜರಾಜೇಶ್ವರಿ ದೇವಳದ ಸರ್ವಮಂಗಳ ಸಭಾ ಭವನದಲ್ಲಿ ನಡೆಯಿತು.

ದ.ಕ.ಜಿಲ್ಲೆಯಲ್ಲಿ ಹಡಿಲು ಬಿದ್ದ ಗದ್ದೆ ಯಲ್ಲಿ ಭತ್ತದ ಕೃಷಿ ಕಾರ್ಯದ ಮೂಲಕ ಕೃಷಿಗೆ ಹೆಚ್ಚು ಉತ್ತೇಜನ ನೀಡುವ ಹೊಸ ಕಲ್ಪನೆಗೆ ಪೂರಕವಾಗಿ ಭತ್ತದ ಕೃಷಿ ಚಟುವಟಿಕೆಗಳಿಗೆ ವೇಗ ನೀಡುವ ಉದ್ದೇಶದಿಂದ ಶಾಸಕರು ಸಭೆ ನಡೆಸಿದ್ದಾರೆ.

ಈ ಸಂದರ್ಭದಲ್ಲಿ ಮಾತನಾಡಿದ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಅವರು ಬಂಟ್ವಾಳ ತಾಲೂಕಿನ ಹಡಿಲು ಬಿದ್ದ ಗದ್ದೆಗಳಲ್ಲಿ ಭತ್ತದ ಕೃಷಿ ಮಾಡುವ ಹೊಸ ಯೋಜನೆಗೆ ಶಾಸಕರ ತಂಡ ,ಆಸಕ್ತ ಕೃಷಿಕರು, ಸ್ಥಳೀಯ ಸೊಸೈಟಿ ಹಾಗೂ ಕೃಷಿ ಇಲಾಖೆಯ ಸಹಕಾರದಿಂದ ತಯಾರಿ ಮಾಡಲಾಗಿದೆ.

ಪ್ರಸ್ತುತ ಅಮ್ಮುಂಜೆ ಮತ್ತು ಕರಿಯಂಗಳ ಗ್ರಾಮದಲ್ಲಿರುವ ಹಡಿಲು ಬಿದ್ದ ಗದ್ದೆಗಳಲ್ಲಿ ಕೃಷಿ ಚಟುವಟಿಕೆಗೆ ಕ್ರಮಕೈಗೊಳ್ಳಲಾಗಿದ್ದು, ಸ್ಥಳೀಯ ವ್ಯವಸಾಯ ಸೇವಾ ಸಹಕಾರಿ ಸಂಘ ನೆರವು ನೀಡಲಿದೆ. ಹಾಗೂ ಯಾಂತ್ರಿಕ ಉಪಕರಣಗಳನ್ನು ಪಡೆಯಲು ಕಡಿಮೆ ಬಡ್ಡಿದರದಲ್ಲಿ ಸಾಲ ನೀಡುವ ಭರವಸೆ ನೀಡಿದರು.

ಜೊತೆಗೆ ಉತ್ತಮ ಗುಣಮಟ್ಟದ ಬೀಜ , ಕಡಿಮೆ ಬಾಡಿಗೆಯಲ್ಲಿ ಯಂತ್ರೋಪಕರಣ ಹಾಗೂ ನರ್ಸರಿ ಭತ್ತದ ಕೃಷಿಗೆ ಬೇಕಾದ ಸಕಲ ವ್ಯವಸ್ಥೆ ಗಳನ್ನು ಕೃಷಿ ಇಲಾಖೆ ಮಾಡಲು ಸಿದ್ದವಿದೆ ಎಂದು ಅವರು ತಿಳಿಸಿದರು.

ಈ ಸಂದರ್ಭದಲ್ಲಿ ಪೊಳಲಿ ವ್ಯವಸಾಯ ಸೇವಾ ಸಹಕಾರಿ ಬ್ಯಾಂಕ್ ಸಂಪತ್ ಕುಮಾರ್ ಶೆಟ್ಟಿ , ಉಪಾಧ್ಯಕ್ಷ ವೆಂಕಟೇಶ ನಾವುಡ , ನಿರ್ದೇಶಕ ರಾದ ದೇವದಾಸ್ ಹೆಗ್ಡೆ, ಸಿ‌ಒ.ವಿಜಯರವಿ ಪೆರ್ನಾಂಡಿಸ್, ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ಚೆನ್ನಕೇಶವ ಅಮ್ಮುಂಜೆ ಮತ್ತು ಕರಿಯಂಗಳ ಗ್ರಾಮದ ಕೃಷಿ ಕರು ಉಪಸ್ಥಿತರಿದ್ದರು.

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here