Wednesday, October 18, 2023

ಬಿ.ಸಿ.ರೋಡು – ಮೂಡುಬಿದಿರೆ ರಸ್ತೆ ಬಂದ್. ಬದಲಿ ರಸ್ತೆ ಮೂಲಕ ಸಂಚಾರಕ್ಕೆ ಅವಕಾಶ ಬೈಪಾಸ್ ರಸ್ತೆ ಕಾಂಕ್ರೀಟ್ ಕಾಮಗಾರಿ ಹಿನ್ನೆಲೆಯಲ್ಲಿ ತಾತ್ಕಾಲಿಕವಾಗಿ ಮೂಡಬಿದಿರೆಯ ರಸ್ತೆಗೆ ಮಣ್ಣು ಹಾಕಿ ಬಂದ್

Must read

ಬಂಟ್ವಾಳ: ಬಿಸಿರೋಡಿನಿಂದ ಜಕ್ರಿಬೆಟ್ಟುವರೆಗೆ ರಸ್ತೆ ಕಾಂಕ್ರೀಟ್ ಕರಣ ಕಾಮಗಾರಿ ಹಿನ್ನೆಲೆಯಲ್ಲಿ ಮೂಡಬಿದಿರೆಯ ಸಂಪರ್ಕದ ರಸ್ತೆ ಸದ್ಯಕ್ಕೆ ಬಂದ್ ಮಾಡಲಾಗಿದೆ.

ಬಿ.ಸಿ.ರೋಡಿನಿಂದ ಪುಂಜಾಲಕಟ್ಟೆ ವರೆಗಿನ ಹೆದ್ದಾರಿ ಅಭಿವೃದ್ಧಿಯ ಕಾಮಗಾರಿ ಹಿನ್ನೆಲೆಯಲ್ಲಿ ಬಂಟ್ವಾಳ ಬೈಪಾಸ್ ರಸ್ತೆಯ ಕಾಂಕ್ರೀಟ್ ಕಾಮಗಾರಿಗೆ ಭರದಿಂದ ಸಾಗುತ್ತಿದೆ.

ಬೈಪಾಸು ರಸ್ತೆ ಕಾಂಕ್ರೀಟ್ ಕರಣ ಕಾಮಾಗರಿ ನಡೆಯುತ್ತಿರುವ ಹಿನ್ನೆಲೆಯಲ್ಲಿ ಬೈಪಾಸ್ ಮೂಲಕ ಮೂಡಬಿದಿರೆ ರಸ್ತೆಯನ್ನು ತಾತ್ಕಾಲಿಕ ವಾಗಿ ಬಂದ್ ಮಾಡಿದ್ದಾರೆ.

ಬಂಟ್ವಾಳದಿಂದ ಮೂಡಬಿದಿರೆಗೆ ಸಂಪರ್ಕದ ಬಂಟ್ವಾಳ ಬೈಪಾಸ್ ಜಂಕ್ಸನಲ್ಲಿ ಪ್ರಸ್ತು ರಸ್ತೆ ಕಾಂಕ್ರೀಟಿಕರಣ ಕಾಮಗಾರಿ ನಡೆಯುತ್ತಿರುವ ಹಿನ್ನಲೆಯಲ್ಲಿ ಕಾಮಗಾರಿ ವೇಗ ಹೆಚ್ಚಿಸುವ ಸಲುವಾಗಿ ಮೂಡಬಿದಿರೆ ರಸ್ತೆ ಸಂಪರ್ಕದ ರಸ್ತೆಯನ್ನು ಬಂದ್ ಮಾಡಲಾಗಿದ್ದು , ಮೂಡಬಿದಿರೆಗೆ ಬಂಟ್ವಾಳದಿಂದ ತೆರಳುವ ವಾಹನಗಳು ಪರ್ಯಾಯ ರಸ್ತೆಯ ಮೂಲಕ ಸಂಚರಿಸಬೇಕಿದೆ.

ಬಿ.ಸಿ.ರೋಡು-ಜಕ್ರಿಬೆಟ್ಟು ಮಧ್ಯೆ ಬಹುತೇಕ ಪ್ರದೇಶದಲ್ಲಿ ಚತುಷ್ಪಥ ಕಾಂಕ್ರೀಟ್ ರಸ್ತೆ ಕಾಮಗಾರಿ ಪೂರ್ಣಗೊಂಡಿದ್ದು, ಆದರೆ ಬೈಪಾಸ್ ಭಾಗದಲ್ಲಿ ಭೂಸ್ವಾಧೀನ ಪ್ರಕ್ರಿಯೆ ಪೂರ್ಣಗೊಳ್ಳದೆ ಕಾಮಗಾರಿ ನಡೆದಿರಲಿಲ್ಲ. ಪ್ರಸ್ತುತ ಹೆದ್ದಾರಿಯ ಒಂದು ಬದಿಯ ಭೂಸ್ವಾಧೀನ ಪೂರ್ಣಗೊಂಡು ಹಿಂದಿನ ರಸ್ತೆಯನ್ನು ಅಗೆದು ಕಾಂಕ್ರೀಟ್ ಕಾಮಗಾರಿಗೆ ಸಿದ್ಧತೆ ನಡೆಸಲಾಗುತ್ತಿದೆ.

ಬೈಪಾಸ್ ಜಂಕ್ಷನ್‌ನಲ್ಲಿ ಕಾಂಕ್ರೀಟ್ ಕಾಮಗಾರಿ ನಡೆದು, ಕನಿಷ್ಠ 20 ದಿನಗಳ ಕಾಲ ಕ್ಯೂರಿಂಗ್ ನಡೆಯಬೇಕಿರುವುದರಿಂದ ಮೂಡಬಿದಿರೆ ರಸ್ತೆಯನ್ನು ಮಣ್ಣು ಹಾಕಿ ಬಂದ್ ಮಾಡಲಾಗಿದೆ. ಅಲ್ಲೇ ಪಕ್ಕದಲ್ಲಿ ಪರ್ಯಾಯ ರಸ್ತೆ ನಿರ್ಮಿಸಿ ಸಂಪರ್ಕ ಕಲ್ಪಿಸುವುದಕ್ಕೆ ಪ್ರಯತ್ನಿಸಿದರೂ, ಮಳೆಯಿಂದ ಅದು ಸಾಧ್ಯವಾಗಿಲ್ಲ ಎಂದು ಕಾಮಗಾರಿ ನಿರ್ವಹಿಸುವ ಸಂಸ್ಥೆಯವರು ತಿಳಿಸಿದ್ದಾರೆ.

ಹೀಗಾಗಿ ಬಿ.ಸಿ.ರೋಡು ಭಾಗದಿಂದ ಮೂಡಬಿದಿರೆ ರಸ್ತೆಯಲ್ಲಿ ಸಂಚರಿಸುವವರು ಬೈಪಾಸ್ ಜಂಕ್ಷನ್ ಬಳಿಯಿಂದ ಸ್ವಲ್ಪ ಮುಂದಕ್ಕೆ ಸಾಗಿ ಎಡಕ್ಕೆ ತೆರಳಿರುವ ರಸ್ತೆಯಲ್ಲಿ ಸಾಗಿದರೆ ಅದು ವಿದ್ಯಾಗಿರಿಯ ಬಳಿ ಮೂಡಬಿದಿರೆ ರಸ್ತೆಯನ್ನು ಸೇರುತ್ತದೆ. ಆದರೆ ಈ ರಸ್ತೆಯು ಕಿರಿದಾಗಿರುವುದರಿಂದ ಘನ ವಾಹನಗಳು ತೆರಳುವುದು ಅಸಾಧ್ಯ.

ಹೀಗಿರುವಾಗ ಜಕ್ರಿಬೆಟ್ಟುನಿಂದ ಅಗ್ರಹಾರ ಮೂಲಕ ತೆರಳಿರುವ ರಸ್ತೆಯು ಲೊರೆಟ್ಟೊದಲ್ಲಿ ಮೂಡಬಿದಿರೆ ರಸ್ತೆಯನ್ನು ಸೇರುತ್ತದೆ. ಈ ರಸ್ತೆಯು ಕೊಂಚ ಅಗಲ ಇರುವುದರಿಂದ ಎಲ್ಲಾ ರೀತಿಯ ವಾಹನಗಳು ತೆರಳುವುದಕ್ಕೆ ಸಹಕಾರಿಯಾಗಿದೆ. ಪ್ರಸ್ತುತ ಲಾಕ್‌ಡೌನ್ ಇರುವುದರಿಂದ ವಾಹನಗಳ ಓಡಾಟ ತೀರಾ ಕಡಿಮೆ ಇದ್ದು, ಬೆಳಗ್ಗಿನ ಹೊತ್ತು ಮಾತ್ರ ಕೊಂಚ ತೊಂದರೆ ಉಂಟಾಗಲಿದೆ. ಉಳಿದಂತೆ ಪರ್ಯಾಯ ರಸ್ತೆಗಳ ಮೂಲಕ ವಾಹನಗಳು ಸರಾಗವಾಗಿ ಓಡಾಟ ನಡೆಸಬಹುದು.

ಸಾರ್ವಜನಿಕ ರಿಗೆ ಯಾವುದೇ ತೊಂದರೆ ಯಾಗದಂತೆ ಪರ್ಯಾಯ ರಸ್ತೆಯ ವ್ಯವಸ್ಥೆ ಇದೆ ಎಂದು ಅವರು ತಿಳಿಸಿದ್ದಾರೆ.

ಲಾಕ್ ಡೌನ್ ಅವಧಿಯಾದ್ದರಿಂದ ಬಸ್ ಸಹಿತ ಘನವಾಹನಗಳ ಓಡಾಟ ತೀರಾ ಕಡಿಮೆ.

ಆದರೂ ಸಾರ್ವಜನಿಕರು ಕಾಮಗಾರಿ ನಡೆಯುತ್ತಿರುವ ವೇಳೆ ಸಂಚಾರದಲ್ಲಿ ಅದಲು ಬದಲು ಆಗಿದ್ದರಿಂದ ಸಹಕಾರ ನೀಡುವಂತೆ ಮನವಿ ಮಾಡಿದ್ದಾರೆ.

ಮಳೆ ಆರಂಭವಾದ್ದರಿಂದ ಶೀಘ್ರದಲ್ಲೇ ಕಾಮಗಾರಿ‌ ಪೂರ್ಣಗೊಳಿಸಬೇಕಾದ ಅನಿವಾರ್ಯತೆ ಕೂಡ ಇದೆ.

ಭೂ ಸ್ವಾಧೀನ ಪ್ರಕ್ರಿಯೆ ವಿಚಾರದಲ್ಲಿ ಬಾಕಿಯಾಗಿದ್ದಬೈಪಾಸ್ ಜಂಕ್ಷನ್ ನಲ್ಲಿ ರಸ್ತೆ ಅಗಲೀರಣಗೊಂಡು ರಸ್ತೆ ಕಾಮಗಾರಿಯು ಈಗಾಗಲೇ ಆರಂಭವಾಗಿದ್ದು ಎರಡು ದಿನದಲ್ಲಿ ಕಾಮಗಾರಿ ಮುಗಿಯಲಿದೆ.

ಒಂದಷ್ಟು ದಿನಗಳ ಕಾಲ ಕ್ಯೂರಿಂಗ್ ಗಾಗಿ ಕಾಯಬೇಕು ಎಂದು ತಿಳಿಸಿದ್ದಾರೆ.

More articles

Latest article