Saturday, April 6, 2024

ಸುರಕ್ಷತಾ ಕ್ರಮ ಕೈಗೊಳ್ಳದೆ ಕಾಮಗಾರಿ : ಕಾರ್ಮಿಕನ ಸಾವು. ಕಾರ್ಮಿಕನ ಸಾವಿಗೆ ಮಾಲಕನ ನಿರ್ಲಕ್ಷ್ಯ ತನ ಕಾರಣ ಸುರಕ್ಷತಾ ಕ್ರಮವಿಲ್ಲದೆ ಕೆಲಸ ಮಾಡಿದ ಕಾರ್ಮಿನ ಸಾವಿಗೆ ಕಾರಣವಾದ ಮಾಲಕನ ಮೇಲೆ ಕಾನೂನು ಕ್ರಮ ಕೈಗೊಳ್ಳಲು ದೂರು

ಬಂಟ್ವಾಳ: ಮಾಲಕನ ನಿರ್ಲಕ್ಷ್ಯ ದಿಂದ ಕೆಲಸಗಾರನೋರ್ವ ಮೃತಪಟ್ಟ ಘಟನೆ ನಡೆದಿದೆ , ಹಾಗಾಗಿ ಕಾರ್ಮಿಕನ ಸಾವಿಗೆ ಮಾಲಕನೇ ಕಾರಣವಾಗಿದ್ದು ಆತನ ಮೇಲೆ ಕಾನೂನು ಕ್ರಮಕೈಗೊಳ್ಳಿ ಎಂದು ಬಂಟ್ವಾಳ ಗ್ರಾಮಾಂತರ ಪೋಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಪ್ಲೈ ವುಡ್ ಫ್ಯಾಕ್ಟರಿಗೆ ಸಿಮೆಂಟ್ ಸೀಟು ಹಾಕುವ ವೇಳೆ ಓರ್ವ ಕಾರ್ಮಿಕ ಸೀಟು ತುಂಡಾಗಿ ಬಿದ್ದು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟರೆ ಇನ್ನೊಬ್ಬ ಕಾರ್ಮಿಕ ನಿಗೆ ಕೈಗೆ ಗಾಯಗೊಂಡಿದೆ.

ಘಟನೆಯ ಲ್ಲಿ ಅಬೂಬಕ್ಕರ್ ಸಿದ್ದಿಕ್‌(68) ಮೃತಪಟ್ಟ ವ್ಯಕ್ತಿಯಾಗಿದ್ದು , ಗಾಯಾಳು

ನಂದಾವರ ನಿವಾಸಿ ಇಬ್ರಾಹಿಂ ಖಲೀಲ್ (24) ಬಂಟ್ವಾಳ ಗ್ರಾಮಾಂತರ ಪೋಲೀಸ್ ಠಾಣೆಯ ಲ್ಲಿ ದೂರು ನೀಡಿದ್ದಾರೆ.

ಮಾಲಕ ಆರೋಪಿ ಬಿ ಅಬ್ದುಲ್ ಸಲಾಂ ಮೇಲೆ ಕಾನೂನು ಕ್ರಮಕೈಗೊಳ್ಳಿ ಎಂದು ಅವರು ದೂರಿನಲ್ಲಿ ತಿಳಿಸಿದ್ದಾರೆ.

 *ಘಟನೆಯ ವಿವರ* 

ಅಬೂಬಕ್ಕರ್ ಸಿದ್ದಿಕ್, ಸುಜಯ್ ರಾಕಿಬ್ ಮತ್ತು ಸಿನಾನ್ ರೊಂದಿಗೆ ತುಂಬೆ ಬಿ.ಎ ಟಿಂಬರ್ & ಮ್ಯಾನ್ಯುಫ್ಯಾಕ್ಚರಿಂಗ್ ಫ್ಲೈವುಡ್ ಫ್ಯಾಕ್ಟರಿಯಲ್ಲಿ ಸುಮಾರು 6 ದಿನಗಳಿಂದ ಸಿಮೆಂಟ್ ಶೀಟ್ ಹಾಕುವ ಕೆಲಸವನ್ನು ಮಾಡಿಕೊಂಡಿದ್ದು, ಈ ದಿನ ಜೂನ್ 02 ರಂದು ಬೆಳಿಗ್ಗೆ 08.30 ಗಂಟೆಗೆ ಎಂದಿನಂತೆ ಎಲ್ಲರೂ ಕೆಲಸ ಮಾಡುತ್ತಿದ್ದ ಸಮಯ ಅಬೂಬಕ್ಕರ್ ಸಿದ್ದಿಕ್ (68) ಮತ್ತು ಖಲೀಲ್ ಫ್ಲೈವುಡ್ ಫ್ಯಾಕ್ಟರಿಯ ಮೇಲೆ ಸಿಮೆಂಟ್ ಶೀಟ್ ಹಾಕುತ್ತಿದ್ದ ವೇಳೆ ಸುಮಾರಯ 11.30 ಗಂಟೆಗೆ ಅಬೂಬಕ್ಕರ್ ಸಿದ್ದಿಕ್ ರವರು ಸಿಮೆಂಟ್ ಶೀಟ್ ನ ಮೇಲೆ ಕಾಲಿಟ್ಟಾಗ ಸಿಮೆಂಟ್ ಶೀಟ್ ನ ಮಧ್ಯ ಭಾಗ ತುಂಡಾಗಿ ಫ್ಲೈವುಡ್ ಫ್ಯಾಕ್ಟರಿಯ ಸ್ಟೀಮ್ ಪೈಪ್ ನ ಮೇಲೆ ಬಿದ್ದು, ಅವರ ಜೊತೆಯಲ್ಲಿ ಖಲೀಲ್ ಕೂಡಾ ಕೆಳಗೆ ಬಿದ್ದು, ಎಡಕೈಗೆ ಗುದ್ದಿದ ಗಾಯವಾಗಿದೆ, ಆದರೆ ಅಬೂಬಕ್ಕರ್ ಸಿದ್ದಿಕ್ ರವರಿಗೆ ತಲೆಯ ಹಿಂಬದಿಗೆ ತೀವ್ರ ಸ್ವರೂಪದ ಗಾಯವುಂಟಾಗಿದ್ದು, ಖಲೀಲ್ ಮತ್ತು ಅಬೂಬಕ್ಕರ್ ಸಿದ್ದಿಕ್ ರವರನ್ನು ಫ್ಲೈವುಡ್ ಫ್ಯಾಕ್ಟರಿಯ ಕೆಲಸದವರು ತುಂಬೆ ಫಾದರ್ ಮುಲ್ಲರ್ಸ್ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದರು.ಆದರೆ ತಲೆಗೆ ಗಂಭೀರ ಗಾಯವಾಗಿದ್ದ

ಅಬೂಬಕ್ಕರ್ ಸಿದ್ದಿಕ್ ರವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರು ಹೈಲ್ಯಾಂಡ್ ಆಸ್ಪತ್ರೆಯಲ್ಲಿ ದಾಖಲಿಸಲಾಗಿತ್ತು‌

ಗಂಭೀರ ಗಾಯಗೊಂಡ ಸಿದ್ದೀಕ್ ಅವರು ಚಿಕಿತ್ಸೆ ಫಲಕಾರಿಯಾಗದೇ ಸುಮಾರು 3.30 ಗಂಟೆಗೆ ಮೃತಪಟ್ಟಿರುವುದಾಗಿ ಪೋಲೀಸರು ಮಾಹಿತಿ ನೀಡಿದ್ದಾರೆ.

ಫ್ಲೈವುಡ್ ಫ್ಯಾಕ್ಟರಿಗೆ ಅಳವಡಿಸಿದ ಸಿಮೆಂಟ್ ಶೀಟ್ ಹಳೇಯದಾಗಿದ್ದು, ಸಿಮೆಂಟ್ ಶೀಟನ್ನು ಸಮಯಕ್ಕೆ ಸರಿಯಾಗಿ ಬದಲಾವಣೆ ಮಾಡದೇ ಅಲ್ಲದೇ, ಕೆಲಸದವರಿಗೆ ಕೆಲಸ ಮಾಡುತ್ತಿದ್ದ ಸಮಯ ಯಾವುದೇ ಸುರಕ್ಷತಾ ಕ್ರಮವನ್ನು ಅಳವಡಿಸದೇ ಕೆಲಸ ಮಾಡಿಸುತ್ತಿದ್ದುದರಿಂದ ಫ್ಲೈವುಡ್ ಫ್ಯಾಕ್ಟರಿಯ ಮಾಲಕರಾದ ಬಿ ಅಬ್ದುಲ್ ಸಲಾಂ ರವರ ನಿರ್ಲಕ್ಷತನದಿಂದ ಅಬೂಬಕ್ಕರ್ ಸಿದ್ದಿಕ್ ರವರು ಕೆಲಸ ಮಾಡುತ್ತಿರುವಾಗ ಸಿಮೆಂಟ್ ಶೀಟ್ ನ ಮೇಲೆ ಕಾಲಿಡುವ ಸಮಯ ಸಿಮೆಂಟ್ ಶೀಟ್ ತುಂಡಾಗಿ ಕೆಳಗೆ ಬಿದ್ದು ಮೃತಪಡಲು ಕಾರಣವಾಗಿದೆ, ಆದುದರಿಂದ ಫ್ಲೈವುಡ್ ಫ್ಯಾಕ್ಟರಿಯ ಮಾಲಕ ಬಿ ಅಬ್ದುಲ್ ಸಲಾಂ ರವರ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ದೂರು ನೀಡಲಾಗಿದೆ.

More from the blog

ದಿನದಿಂದ ದಿನಕ್ಕೆ ಏರುತ್ತಿದೆ ತಾಪಮಾನ : ಕಡಬ, ಅಜೆಕಾರಿನಲ್ಲಿ ದಾಖಲೆಯ ಉಷ್ಣಾಂಶ

ಮಂಗಳೂರು: ಮುಂದಿನ ಎರಡು ದಿನಗಳ ಕಾಲ ಬಿಸಿಲಿನ ಶಾಕ ಮತ್ತಷ್ಟು ಹೆಚ್ಚಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ ಕರಾವಳಿ ಭಾಗದಲ್ಲಿ ತಾಪಮಾನ ದಿನದಿಂದ ದಿನಕ್ಕೆ ಏರಿಕೆ ಕಾಣುತ್ತಿದ್ದು, ಎ. 4ರಿಂದ 5ರ...

ಮತದಾನ ಜಾಗೃತಿ ಅಂಗವಾಗಿ ಸೆಲ್ಫಿ, ಸಹಿ ಅಭಿಯಾನಕ್ಕೆ ಚಾಲನೆ

ಮತದಾರರರಲ್ಲಿ ಮತದಾನ ಜಾಗೃತಿ ಮೂಡಿಸುವ ಸಲುವಾಗಿ ಬಂಟ್ವಾಳ ತಾಲೂಕು ಪಂಚಾಯತ್, ತಾಲೂಕು ಆಡಳಿತ ಮತ್ತು ತಾಲೂಕು ಸ್ವೀಪ್ ಸಮಿತಿ ವತಿಯಿಂದ ಎ‌.5ರಂದು ಸೆಲ್ಫಿ, ಸಹಿ ಅಭಿಯಾನಕ್ಕೆ ಚಾಲನೆ ನೀಡಲಾಯಿತು. ...

ಬಂಟ್ವಾಳ ವಿಧಾನಸಭಾ ಕ್ಷೇತ್ರದ ಪ್ರಮುಖರ ಮನೆಗೆ ಲೋಕಸಭಾ ಅಭ್ಯರ್ಥಿ ಬ್ರಿಜೇಶ್ ಚೌಟ ಭೇಟಿ

ಬಂಟ್ವಾಳ: ರಾಷ್ಟ್ರದ ಹಿತಾಸಕ್ತಿಯ ದೃಷ್ಟಿಯಿಂದ, ವಿಕಸಿತ ಭಾರತದ ಸಂಕಲ್ಪಕ್ಕೆ ಮತ್ತೊಮ್ಮೆ ಮೋದಿಯವರು ಪ್ರಧಾನಿಯಾಗಬೇಕು, ಈ ನಿಟ್ಟಿನಲ್ಲಿ ರಾಜ್ಯದ ಪ್ರತಿಯೊಂದು ಕ್ಷೇತ್ರದಲ್ಲಿ ಬಿಜೆಪಿಯ ಅಭ್ಯರ್ಥಿ ಗೆಲುವು ಸಾಧಿಸಬೇಕಾಗಿದೆ ಎಂದು ಮಂಗಳೂರು ಲೋಕಸಭಾ ಅಭ್ಯರ್ಥಿ ಬ್ರಿಜೇಶ್...

ವಿದ್ಯುತ್ ಕಂಬಕ್ಕೆ ಬೈಕ್ ಡಿಕ್ಕಿ : ಇಬ್ಬರು ಗಂಭೀರ

ಬಂಟ್ವಾಳ: ಮುಂಜಾನೆ ವೇಳೆ ರಾಷ್ಟ್ರೀಯ ಹೆದ್ದಾರಿಯ ಬಿಸಿರೋಡಿನ ಕೈಕಂಬ ಎಂಬಲ್ಲಿ ಬೈಕ್ ಒಂದು ವಿದ್ಯುತ್ ಕಂಬಕ್ಕೆ ಡಿಕ್ಕಿಯಾದ ಪರಿಣಾಮ ಸವಾರ ಹಾಗೂ ಸಹಸವಾರ ಇಬ್ಬರು ಕೂಡ ಗಂಭೀರವಾಗಿ ಗಾಯಗೊಂಡಿದ್ದು, ಮಂಗಳೂರು ಖಾಸಗಿ ಆಸ್ಪತ್ರೆಯಲ್ಲಿ...