ರಾಷ್ಟ್ರೀಕೃತ ಬ್ಯಾಂಕ್ ಹಾಗೂ ಸೊಸೈಟಿಗಳ 18-44 ವರ್ಷದೊಳಗಿನ ಸಿಬ್ಬಂದಿ ಗಳಿಗೆ ಕೋವಿಡ್ ಲಸಿಕೆ ನೀಡುವ ಕಾರ್ಯಕ್ರಮ ಬಿ.ಸಿ.ರೋಡಿನ ಲಯನ್ಸ್ ಸೇವಾ ಮಂದಿರದಲ್ಲಿ ಶನಿವಾರ ನಡೆಯಿತು.
ಸಂಸದ ನಳಿನ್ ಕುಮಾರ್ ಕಟೀಲು ಕಾರ್ಯಕ್ರಮ ವನ್ನು ಉದ್ಘಾಟಿಸಿ ಶುಭ ಹಾರೈಸಿದರು.
ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಉಪಸ್ಥಿತರಿದ್ದರು.
ಲಯನ್ಸ್ ಕ್ಲಬ್ ಬಂಟ್ವಾಳ ಸಹಯೋಗದಲ್ಲಿ ನಿರಂತರವಾಗಿ ವಿವಿಧ ಇಲಾಖೆಗಳಿಗೆ ವ್ಯಾಕ್ಸಿನೇಷನ್ ನೀಡುವ ಶಿಬಿರ ನಡೆಯಲಿದೆ.
ಈ ಸಂದರ್ಭದಲ್ಲಿ ಬಂಟ್ವಾಳ ತಹಶಿಲ್ದಾರ್ ರಶ್ಮಿ. ಎಸ್. ಆರ್, ತಾಲೂಕು ಪ್ರಭಾರ ಆರೋಗ್ಯಾಧಿಕಾರಿ ಡಾ| ಜಯಪ್ರಕಾಶ್, ಮಾಜಿ ಶಾಸಕ ಪದ್ಮನಾಭ ಕೊಟ್ಟಾರಿ, ಕೆನರಾ ಬ್ಯಾಂಕ್ ಡಿ.ಜಿ.ಎಮ್, ಯೋಗೀಶ್ ಆಚಾರ್ಯ, ಕೆನರಾ ಬ್ಯಾಂಕ್ ಆಫೀಸರ್ ಆಸೊಸಿಯೇಶನ್ ಡೆಪ್ಯುಟಿ ಜನರಲ್ ಸಕ್ರೇಟರಿ ರಮೇಶ್ ನಾಯಕ್, ಕ್ಯಾನರಾ ಬ್ಯಾಂಕ್ ರೀಜನಲ್ ಆಫೀಸರ್ ಮಹೇಶ್ ಕುಮಾರ್ ಎಸ್. ಸ್ವಾಮಿ, ಮ್ಯಾನೇಜರ್ ಆಶೀರ್ವಾದ್ ಆಚಾರ್ಯ, ಬ್ಯಾಂಕ್ ಆಪ್ ಬರೋಡ ಕಲ್ಲಡ್ಕ ಶಾಖೆಯ ಮ್ಯಾನೇಜರ್ ಪ್ರಣಾಮ್, ಲಯನ್ಸ್ ಅಧ್ಯಕ್ಷ ಎಮ್ ಕೃಷ್ಣ ಶ್ಯಾಮ್, ಲಯನ್ಸ್ ವಿಶೇಷ ಮಕ್ಕಳ ಶಾಲಾ ಸಂಚಾಲಕ ದಾಮೋದರ ಬಿ.ಎಮ್, ವಲಯ ಅಧ್ಯಕ್ಷ ಶ್ರೀನಿವಾಸ ಪೂಜಾರಿ, ಲಯನೆಸ್ದೇವಿಕಾ ದಾಮೋದರ, ಕೋಶಾಧಿಕಾರಿ ದಿಶಾಆಶ್ರೀವಾದ, ಮಾಜಿ ಅಧ್ಯಕ್ಷ ಲಕ್ಮನ್ ಕುಲಾಲ್, ಜೊತೆ ಕೋಶಾಧಿಕಾರಿ ರಾಘವೇಂದ್ರ ಕಾರಂತ್ ಹಾಜರಿದ್ದರು.