ಮುಂಬಯಿ (ಆರ್‌ಬಿಐ), ಜೂ.೦೩: ಕರ್ಣಾಟಕ ಬ್ಯಾಂಕ್‌ನ ನಿರ್ದೇಶಕರಾದ ಡಿ.ಸುರೇಂದ್ರ ಕುಮಾರ್ ಅವರ ಜನ್ಮದಿನದ ನಿಮಿತ್ತ ಧರ್ಮಸ್ಥಳದಲ್ಲಿ ಬ್ಯಾಂಕ್‌ನ ಸಿಇಒ ಮಹಾಬಲೇಶ್ವರ ರಾವ್ ಅವರು ಶಾಲು ಹೊದಿಸಿ, ಸ್ಮರಣಿಕೆಯನ್ನಿತ್ತು ಅರ್ಪಿಸಿ ಶುಭಾಶಯ ಸಲ್ಲಿಸಿದರು.
ಬ್ಯಾಂಕ್‌ನ ಪ್ರಗತಿ ಮತ್ತು ಸಾಧನೆಯಲ್ಲಿ ಧರ್ಮಾಧಿಕಾರಿ ಡಾ| ಡಿ.ವೀರೇಂದ್ರ ಹೆಗ್ಗಡೆ ಅವರ ಮಾರ್ಗದರ್ಶನ ಮತ್ತು ಪ್ರೋತ್ಸಾಹವನ್ನು ಅವರು ಕೃತಜ್ಞತೆಯಿಂದ ಸ್ಮರಿಸಿದರು. ಹಾಗೂ ಇದೇ ಶೌಭಾವಸರದಲ್ಲಿ ಬ್ಯಾಂಕ್‌ನ ನಿರ್ದೇಶಕರಾಗಿ ಸಹಕರಿಸಿದ ಡಿ. ಸುರೇಂದ್ರ ಕುಮಾರ್ ಅವರನ್ನೂ ಅಭಿನಂದಿಸಿದರು.
ಈ ಸಂದರ್ಭದಲ್ಲಿ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆ, ಹೇಮಾವತಿ ವಿ. ಹೆಗ್ಗಡೆ, ಅನಿತಾ ಸುರೇಂದ್ರ ಕುಮಾರ್, ಡಿ. ಹರ್ಷೇಂದ್ರ ಕುಮಾರ್, ಬ್ಯಾಂಕ್‌ನ ಕಂಪೆನಿ ಕಾರ್ಯದರ್ಶಿ ಪ್ರಸನ್ನ ಪಾಟೀಲ್, ಶ್ರದ್ಧಾ ಅಮಿತ್, ಶ್ರುತಾ ಜಿತೇಶ್, ನಂದೀಶ್ ಮತ್ತು ಮೈತ್ರಿ ನಂದೀಶ್ ಉಪಸ್ಥಿತರಿದ್ದು ಸುರೇಂದ್ರ ಕುಮಾರ್ ಅವರಿಗೆ ಹುಟ್ಟುಹಬ್ಬದ ಅಭಿನಂದನೆಗಳನ್ನು ಸಲ್ಲಿಸಿದರು.