ಬಂಟ್ವಾಳ : ಕೊರೋನಾ ಮಹಾಮಾರಿಯನ್ನು ಎದುರಿಸಲು ಲಸಿಕೆಯ ಜೊತೆಗೆ ಮಾನಸಿಕ ಧೈರ್ಯವೂ ಅಗತ್ಯ, ಈ ಕಾರ್ಯ ಕೊರೋನಾ ವಾರಿಯರ್ಸ್ ಗಳ ಮೂಲಕ ಹೆಚ್ಚು ಹೆಚ್ಚು ನಡೆಯಬೇಕಾಗಿದೆ ಎಂದು ಮಾಜಿ ಜಿ.ಪಂ.ಸದಸ್ಯರಾದ ಚೆನ್ನಪ್ಪ ಕೋಟ್ಯಾನ್ ಹೇಳಿದರು.
ಬಾಳ್ತಿಲ ಗ್ರಾಮದ ಪೂರ್ಲಿಪ್ಪಾಡಿ ಮರಾಠಿ ಭವನದ ಆವರಣದಲ್ಲಿ ಮಂಗಳವಾರ ಸಂಜೆ ಬಾಳ್ತಿಲ ಗ್ರಾ.ಪಂ.ಸದಸ್ಯ ಬಿ.ಕೆ.ಅಣ್ಣು ಪೂಜಾರಿ ಅವರ ನೇತೃತ್ವದಲ್ಲಿ ಕೊರೊನಾ ವಾರಿಯರ್ಸ್ ಗಳಿಗೆ ಆಹಾರ ಸಾಮಾಗ್ರಿಗಳ ಕಿಟ್ ವಿತರಿಸಿ ಮಾತನಾಡಿದರು.
ಸನ್ಮಾನ್ಯ ಪ್ರಧಾನಮಂತ್ರಿಯವರ ಮಾರ್ಗದರ್ಶನದಲ್ಲಿ ಕೊರೊನಾ ವಿರುದ್ಧದ ಹೋರಾಟ ಉತ್ತಮ ರೀತಿಯಲ್ಲಿ ನಡೆಯುತ್ತಿದ್ದು, ನಾವೆಲ್ಲರೂ ಈ ನಿಟ್ಟಿನಲ್ಲಿ ಸಹಕಾರ ನೀಡಬೇಕು, ಲಸಿಕೆ ಕುರಿತಾದ ವದಂತಿಗಳನ್ನು ದೂರ ಮಾಡಿ, ಪ್ರತಿಯೊಬ್ಬರೂ ಲಸಿಕೆ ಪಡೆಯುವಂತೆ
ಪ್ರೇರಣೆ ನೀಡಬೇಕೆಂದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಬಾಳ್ತಿಲ ಗ್ರಾ.ಪಂ. ಸದಸ್ಯ ಬಿ.ಕೆ.ಅಣ್ಣು ಪೂಜಾರಿಯವರು ಮಾತನಾಡಿ, ಕೊರೋನಾ ನಿಗ್ರಹ ಸಹಿತ ಆರೋಗ್ಯ ಸುಧಾರಣೆಯ ಕಾರ್ಯದಲ್ಲಿ ಆಶಾ ಹಾಗೂ ಅಂಗನವಾಡಿ ಕಾರ್ಯಕರ್ತೆಯರ ಮತ್ತು ಸಹಾಯಕಿಯರ ಶ್ರಮ ಬೆಲೆಕಟ್ಟಲು ಸಾಧ್ಯವಿಲ್ಲ.. ಅವರನ್ನು ಗುರುತಿಸಿ ಪ್ರೋತ್ಸಾಹಿಸಬೇಕಾದ್ದು ಪ್ರತಿಯೊಬ್ಬರ ಕರ್ತವ್ಯ ಈ ಹಿನ್ನೆಲೆಯಲ್ಲಿ ಈ ಬಾರಿಯೂ
ಕೊರೋನಾ ವಾರಿಯರ್ಸ್ ಗಳನ್ನು ಪ್ರೋತ್ಸಾಹಿಸಲು ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು.
ವಿ.ಹಿಂ.ಪ ದ ಕಲ್ಲಡ್ಕ ವಲಯ ಸಂಚಾಲಕ ಮೋಹನದಾಸ್ ಮುಲಾರ್ , ಕಲ್ಲಡ್ಕ ವಲಯ ಭಜರಂಗ ದಳದ ಕಾರ್ಯದರ್ಶಿ ನವೀನ್ ಮಾಪಲ, ದಾನಿಗಳಾದ ಸಂಜೀವ ಪೂಜಾರಿ, ನಾಗರತ್ನ, ಗ್ರಾ.ಪಂ.ಮಾಜಿ ಸದಸ್ಯ ವೆಂಕಟ್ರಾಯ ಪ್ರಭು, ಗ್ರಾ.ಪಂ.ಸದಸ್ಯರಾದ ರಾಜೀವ್ ಮೊದಲಾದವರು ಉಪಸ್ಥಿತರಿದ್ದರು. ಬಾಳ್ತಿಲಗ್ರಾ.ಪಂ. ಮಾಜಿ ಅಧ್ಯಕ್ಷ ವಿಠಲನಾಯ್ಕ್ ಸ್ವಾಗತಿಸಿ, ವಂದಿಸಿದರು.