ಲೇ: ರಮೆಶ ಎಂ. ಬಾಯಾರು ಎಂ.ಎ, ಬಿ.ಇಡಿ

ಅಂಗೈ ನೋಡಿ ಬದುಕು ಹೇಗೆ ಎಂಬುದಾಗಿ ಹಸ್ತç ಸಾಮುದ್ರಿಕಾ ತಜ್ಞರು ಭವಿಷ್ಯ ಹೇಳುತ್ತಾರೆ. ಹಾಗೆಂದು ಕೈಯಲ್ಲಿ ರೇಖೆ ಇಲ್ಲದವರಿಗೂ ಭವಿಷ್ಯವಿಲ್ಲ ಎನ್ನುವಂತಿಲ್ಲ. ನಮ್ಮ ಕೈಗಳೇ ನಮ್ಮ ಮತ್ತು ದೇಶದ ಭವಿಷ್ಯವನ್ನು ರೂಪಿಸುವ ರೂವಾರಿಗಳು. ಮನುಷ್ಯನ ಪರಿಶ್ರಮ ಗೋಚರವಾಗುವುದು ಕೈಗಳಲ್ಲಿಯೇ ಅಲ್ಲವೇ. ಶ್ರಮಿಕನಾದರೆ ಆತನ ಭವಿಷ್ಯ ಎಂದೂ ಬರಡಾಗದು. ನಮ್ಮ ದೈಹಿಕ, ಮಾನಸಿಕ, ಆಧ್ಯಾತ್ಮಿಕ, ಬೌದ್ಧಿಕ ಹೀಗೆ ಎಲ್ಲದರ ಆರೋಗ್ಯಗಳು ನಮ್ಮ ಅಂಗೈಯಿAದಲೇ ನಿಯಂತ್ರಿತವಾಗಿವೆ. ಸೂಜಿ ಚಿಕಿತ್ಸೆ ಎಂದು ಕೇಳಿದ್ದೇವೆ. ಯೋಗ ಮತ್ತು ಪ್ರಾಣಾಯಾಮಗಳು, ಸುದರ್ಶನ ಕ್ರಿಯಾ ಮತ್ತು ರೇಖಿ ಚಿಕಿತ್ಸೆಗಳಿಗೂ ಕೈಯೇ ಮೂಲಾಧಾರ. ಆದರೆ ನಮ್ಮ ಕೈಗಳ ಮೇಲೆ ಅಥವಾ ಯಾರದೇ ಕೈಗಳ ಮೇಲೆ ನಮಗೆ ವಿಶ್ವಾಸವಿದ್ದಾಗ ಮಾತ್ರವೇ ಎಲ್ಲವೂ ಸರಿದೂಗುತ್ತದೆ. ಮಾರಣಾಂತಿಕ ಕಾಯಿಲೆಗೊಳಗಾದ ವ್ಯಕ್ತಿ ಹೆಸರುವಾಸಿ ವೈದ್ಯನನ್ನೇ ಹುಡುಕುತ್ತಾನೆ. ಆ ರೋಗಕ್ಕೆ ಎಲ್ಲ ವೈದ್ಯರೂ ಕೊಡುವ ಔಷಧ ಒಂದೇ ಗುಣವನ್ನು ಹೊಂದಿರುತ್ತದೆ. ಆದರೆ ಹೆಸರುವಾಸಿ ವೈದ್ಯ ನೀಡಿದ ಔಷಧದಿಂದ ಮಾತ್ರ ಕಾಯಿಲೆ ಗುಣವಾಗಿದೆಯೆಂದಾದರೆ ಅದು ಅವನ ಮೇಲೆ ರೋಗಿ ಇಡುವ ವಿಶ್ವಾಸದ ಕಾರಣವೇ ಆಗಿದೆ. ಹೆಸರುವಾಸಿ ವೈದ್ಯರ ಬಗ್ಗೆ ಹೇಳುವಾಗಲೂ ಜನ ಮಾತನಾಡುವುದು, ಅವರ ಕೈಗುಣ ಚೆನ್ನಾಗಿದೆ. ಎಂದಲ್ಲವೇ?

ಬೇರೆ ಬೇರೆ ವೈದ್ಯಕೀಯ ಪದ್ಧತಿಗಳಿವೆ. ಆದರೆ ರೋಗ ಗುಣವಾಗಲು ಆ ವೈದ್ಯಕೀಯ ಪದ್ಧತಿ ಮತ್ತು ಚಿಕಿತ್ಸಾ ಕ್ರಮದ ಮೇಲೆ ವಿಶ್ವಾಸವೇ ಅತೀ ಮುಖ್ಯವಾಗುತ್ತದೆ. ತನಗೆ ಕಾಯಲೆಯಿದೆಯೆಂದು ಗೊತ್ತಾದಾಗ ಮಾತ್ರವೇ ಆ ಕಾಯಿಲೆ ಬಹಳ ವೇಗವಾಗಿ ಉಲ್ಬಣವಾಗುತ್ತದೆ. ತನಗಿರುವ ಕಾಯಿಲೆಯ ಪರಿಜ್ಞಾನವೇ ಇಲ್ಲದವನಿಗೆ ಆತನ ಕಾಯಿಲೆ ಅವನಿಗೆ ಸಮಸ್ಯೆಗಳನ್ನು ಒಡ್ಡುವುದೇ ಇಲ್ಲ. ತನಗೆ ಕಾಯಿಲೆ ಇಲ್ಲ ಎಂಬ ದೃಢ ಆತ್ಮ ವಿಶ್ವಾಸವೇ ಅವನ ಕಾಯಿಲೆಯನ್ನು ಉಲ್ಬಣಿಸಲು ಬಿಡುವುದಿಲ್ಲ. ನಮ್ಮ ಅಂಗೈ ಮೇಲೆ ವಿಶ್ವಾಸವುಳ್ಳವನು ನಿರೋಗಿಯೇ ಆಗುತ್ತಾನೆ. ಕೈಗಳನ್ನು ಕಠಿಣ ದುಡಿಮೆಗಳಲ್ಲಿ ತೊಡಗಿಸುವವರಿಗೆ ಕಾಯಿಲೆ ಬಹಳ ಕಡಿಮೆ. ನಮ್ಮ ಕೈಗಳು ಸ್ವಚ್ಛವಾಗಿದ್ದರೆ ಅನಾರೋಗ್ಯ ಬಹಳ ಕಡಿಮೆ. ಸ್ವಚ್ಛ ಎನ್ನುವುದು ನೈತಿಕವಾಗಿಯೂ ಸ್ವಚ್ಛ ಎಂಬುದನ್ನೂ ಪುಷ್ಟೀಕರಿಸುತ್ತದೆ.

ಮನುಷ್ಯ ಎಲ್ಲ ವೈದ್ಯಕೀಯ ಪದ್ಧತಿಯಿಂದ ಹೊರಬಂದು ಆಧ್ಯಾತ್ಮಿಕ ಚಿಕಿತ್ಸೆಯ ಮೂಲಕವೂ ತನ್ನ ಆರೋಗ್ಯವನ್ನು ಕಾಪಾಡಬಹುದು ಎಂಬುದನ್ನು ಈಗಾಗಲೇ ಯೋಗ ಮತ್ತು ಪ್ರಾಣಾಯಾಮಗಳು ತೋರಿಸಿಕೊಟ್ಟಿವೆ. ಯೋಗ ಪರಿಣತನಿಗೆ ಮುಪ್ಪೇ ನಿಧಾನವಾಗುತ್ತದೆ ಎಂಬುದಕ್ಕೆ ನಮ್ಮ ಮುಂದೆ ಅನೇಕ ಮಾದರಿ ವ್ಯಕ್ತಿಗಳಿದ್ದಾರೆ. ಉಲ್ಬಣಿತ ಮಹಾ ಕಾಯಿಲೆಗಳು ಯೋಗದಿಂದಾಗಲೀ ಆಧ್ಯಾತ್ಮಿಕ ಚಿಕಿತ್ಸೆಗಳಿಂದಾಗಲೀ ಗುಣವಾಗದು. ಹಾಗೆಯೇ ವೈದ್ಯಕೀಯ ಚಿಕಿತ್ಸೆಯೂ ಎಲ್ಲ ಖಾಯಿಲೆಗಳನ್ನು ಗುಣ ಪಡಿಸಲಾರದು. ಕೇವಲ ರೋಗ ನಿಯಂತ್ರಣ ಮಾತ್ರವೇ ಸಾಧ್ಯವಾಗುತ್ತದೆ. ರೋಗ ಪೂರ್ವದ ದಿನಗಳಿಂದಲೇ ದೈಹಿಕ ಜಡತ್ವವನ್ನೋಡಿಸುವ ಪ್ರಯತ್ನಗಳು ನಡೆದರೆ ರೋಗ ನಮ್ಮಿಂದ ಬಹಳ ದೂರದಲ್ಲೇ ನಿಲ್ಲುತ್ತದೆ. ನಮ್ಮ ದೇಹದ ಪ್ರತಿಯೊಂದು ಅಂಗವೂ ಕೋಟಿ ಕೋಟಿ ನೀಡಿದರೂ ಸಿಗಲಾರದ ಅತ್ಯಂತ ಬೆಲೆಯುಳ್ಳ ಸಾಧನ. ಅವುಗಳ ಸದ್ಬಳಕೆ ಆದಾಗ ಮಾನವನು ಉನ್ನತಿಗೇರುತ್ತಾನೆ. ಕಾಯಿಲೆ ಬರದಂತೆ ತಡೆಯಲು ಮನಃಶಾಂತಿ, ಆತ್ಮಧೈರ್ಯ, ತನಗೆ ಕಾಯಿಲೆಯಿಲ್ಲ ಎಂಬ ಅಚಲ ಆತ್ಮವಿಶ್ವಾಸ ಹಾಗೂ ನಿರಂತರ ಯೋಗ, ಪ್ರಾಣಾಯಾಮ, ವ್ಯಾಯಾಮ, ಪ್ರಾರ್ಥನೆ, ಕೈತುಂಬ ಕೆಲಸ, ಪೌಷ್ಟಿಕಾಂಶಯುಕ್ತ ಮಿತ ಆಹಾರ, ಸ್ವಚ್ಛ ಪರಿಸರ, ಶುದ್ಧನೀರು ಇವಿದ್ದರೆ ಸಾಕು.

ರೇಖೀ ಚಿಕಿತ್ಸೆ ಅತ್ಯಂತ ಪರಿಣಾಮಕಾರಿಯಾಗಿ ಕಾಯಿಲೆಗಳನ್ನು ಶಮನ ಮಾಡುತ್ತದೆಂದು ಇತ್ತೀಚೆಗೆ ಹೇಳಲಾಗುತ್ತಿದೆ. ಇಲ್ಲಿ ಶಮನ ಎಂಬ ಪದವೇ ಹೊರತು ಗುಣ ಮೂಖವೆಂದು ಹೇಳಲಾಗಿಲ್ಲ. ಆದರೂ ಸಣ್ಣ ಪುಟ್ಟ ಕಾಯಿಲೆಗಳಿಗೆ ರೇಖಿ ಚಿಕಿತ್ಸೆಯು ಅತ್ಯಂತ ಉತ್ತಮ ಫಲಿತಾಂಶ ಕೊಡುತ್ತಿದೆಯೆಂಬುದು ನನಗೂ ಅನುಭವವಾಗಿದೆ. ವಿಶ್ವಾಸವಿರುವಲ್ಲಿ ವಿಶ್ವನಾಥನೆಂಬAತೆ, ಯಾವುದೇ ಚಿಕಿತ್ಸೆಯು ಪರಿಣಾಮಕಾರೀ ಫಲಿತಾಂಶವನ್ನು ನೀಡಬೇಕಾದರೆ ಅದರ ಬಗ್ಗೆ ಆಳವಾದ ನಂಬಿಕೆ ಅಗತ್ಯ. ರೇಖಿ ಚಿಕಿತ್ಸೆಯಲ್ಲಿ ಮಾತ್ರೆಗಳ ಸೇವನೆ ಬೇಡ, ಮುಲಾಮು ಮಸಾಜುಗಳಿಲ್ಲ. ಅವನವನ ದೇಹಕ್ಕೆ ಅವನವನೇ ಮಾಡಬಹುದಾದ ಅಥವಾ ಆತ್ಮೀಯರು ಮಾಡಬಹುದಾದ ಹಸ್ತಸ್ಪರ್ಷೀ ಆಧ್ಯಾತ್ಮಿಕ ಚಿಕಿತ್ಸೆಯಾಗಿದೆ. ರೇಖಿ ಚಿಕಿತ್ಸೆಯ ಫಲಾನುಭವಿಗಳು ಹೇಳುವಂತೆ ಅವರು ಅತ್ಯಂತ ಭೀಷಣ ರೂಪದ ಕಾಯಿಲೆಗಳನ್ನೂ ನಿಯಂತ್ರಿಸಲು ರೇಖೀ ವಿಧಾನ ಸಹಕರಿಸಿದೆ. ಅವರವರ ಭಾವಕ್ಕೆ ಅವರವರ ಭಕುತಿಗೆ ಭಗವಂತನೊಲಿಯುವAತೆ ರೇಖಿಯೂ ನಮ್ಮ ವಿಶ್ವಾಸದ ಅಡಿಗಲ್ಲಿನಲ್ಲೇ ನಿಂತಿದೆ.

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here