ಹವಾಮಾನ ಆಧಾರಿತ ಬೆಳೆ ವಿಮಾ ಯೋಜನೆ :
ಅಡಿಕೆ, ಕರಿಮೆಣಸು ಬೆಳೆಗಾರರಿಂದ ವಿಮಾ ಅರ್ಜಿ ನೋಂದಯಿಸಲು ವಿನಂತಿ.
ಸಿದ್ದಕಟ್ಟೆ ಸಹಕಾರಿ ವ್ಯವಸಾಯಿಕ ಸಂಘ, ನಿ. ಇದರ ವ್ಯಾಪ್ತಿಯಲ್ಲಿ ಬರುವ ಅಡಿಕೆ ಮತ್ತು ಕರಿ ಮೆಣಸು ಬೆಳೆಗಾರರಿಗೆ ಹವಾಮಾನ ಆಧಾರಿತ ಬೆಳೆ ವಿಮಾ ಯೋಜನೆಗೆ ಬೆಳೆಗಾರರ ಹೆಸರು ನೋಂದಾಯಿಸಲು ಮನವಿ.
ಕೇಂದ್ರ ಸರ್ಕಾರದ ಬೆಳೆ ವಿಮೆ ಯೋಜನೆ ಅನುಷ್ಠಾನ ಅಡಿಯಲ್ಲಿ ಹವಾಮಾನ ಆಧಾರಿತ ಬೆಳೆ ವಿಮಾ ಯೋಜನೆಗೆ ಅರ್ಜಿ ನೋಂದಣಿ ಜೂನ್ ತಿಂಗಳಿನಿಂದ ಪ್ರಾರಂಭವಾಗಿರುತ್ತದೆ.
2021–22 ನೇ ಸಾಲಿಗೆ ಸಂಬಂಧಿಸಿದಂತೆ ಮುಂಗಾರು ಹಂಗಾಮಿಗೆ ಅನುಮೋದಿಸಿದ ತೋಟಗಾರಿಕೆ ಬೆಳೆಗಳಲ್ಲಿ ಕರಾವಳಿ ಜಿಲ್ಲೆಗಳಿಗೆ ಅಡಿಕೆ ಮತ್ತು ಕರಿಮೆಣಸು ಅನ್ವಯಿಸುತ್ತದೆ.
ಸಂಘದ ವ್ಯಾಪ್ತಿಯ ಅಡಿಕೆ, ಕರಿಮೆಣಸು ಬೆಳೆಗಾರರು ಸಂಘದ ಕೇಂದ್ರ ಕಚೇರಿ ಸಿದ್ದಕಟ್ಟೆ ಮತ್ತು ರಾಯಿ ಹಾಗೂ ಆರಂಬೊಡಿ ಶಾಖಾ ಕಚೇರಿಗಳಿಗೆ ದಾಖಲೆಗಳೊಂದಿಗೆ ಅರ್ಜಿ ನೀಡುವುದು..
ಸದಸ್ಯರ ಆರ್. ಟಿ. ಸಿ. ಯಲ್ಲಿನ ಬೆಳೆ ನಮುದು ಆಧಾರದಲ್ಲಿ ವಿಮಾ ಕಂತು ಪಾವತಿಸುವುದು.
ಅರ್ಜಿಯೊಂದಿಗೆ ದಾಖಲಾತಿ ಸಲ್ಲಿಸಲು ಕೊನೆಯ ದಿನಾಂಕ
30–06–2021 ಆಗಿರುತ್ತದೆ.
ವಿಮಾ ಕಂತು ವಿವರ :
1).ಅಡಿಕೆ ಪ್ರತಿ ಎಕರೆಗೆ ವಿಮಾ ಕಂತು ₹ 2600-00
2). ಕಾಳುಮೆಣಸು ಪ್ರತಿ ಎಕರೆಗೆ :₹ 950-00.
*********************
ರೈತರು ಸಲ್ಲಿಸ ಬೇಕಾದ ದಾಖಲೆಗಳು.
1). ಅಡಿಕೆ, ಕರಿ ಮೆಣಸು ಬೆಳೆಗಳು ದಾಖಾಲಾಗಿರುವ ಆರ್. ಟಿ. ಸಿ. ಜೆರಾಕ್ಸ್.
2). ಆಧಾರ್ ಕಾರ್ಡ್ ಜೆರಾಕ್ಸ್.
3).ಎಸ್. ಸಿ. ಡಿ. ಸಿ. ಸಿ ಬ್ಯಾಂಕ್ ಪಾಸ್ ಪುಸ್ತಕ ಜೆರಾಕ್ಸ್..
ಈ ಎಲ್ಲಾ ಧಾಖಲೆಗಳೊಂದಿಗೆ ಅರ್ಜಿ ನೋಂದಣಿ ಮಾಡುವಂತೆ ಸಂಘದ ಅಧ್ಯಕ್ಷ ಪ್ರಭಾಕರ ಪ್ರಭು ಪ್ರಕಟಣೆಯ ಮುಲಕ ವಿನಂತಿಸಿದ್ದಾರೆ.