Saturday, April 6, 2024

*ವಿದ್ಯಾರ್ಥಿ ನಾಯಕರು 250 ದಿನಗಳು ಅನ್ಯಾಯವಾಗಿ ಜೈಲಿನಲ್ಲಿ ; ಕ್ಯಾಂಪಸ್ ಫ್ರಂಟ್ ವಿಟ್ಲ ಜಿಲ್ಲಾದ್ಯಂತ ಪ್ರತಿಭಟನೆ*

ವಿಟ್ಲ : ಉತ್ತರಪ್ರದೇಶದಲ್ಲಿ ನಡೆದ ಮನಿಷಾ ಎಂಬ ದಲಿತ ಬಾಲಕಿಯ ಅತ್ಯಾಚಾರ ಹಾಗೂ ಕೊಲೆ ಪ್ರಕರಣವು ದೇಶಾದ್ಯಂತ ಸುದ್ದಿಯಾಗಿತ್ತು, ಬಾಲಕಿಯ ಮನೆಗೆ ಭೇಟಿ ನೀಡಲು ತೆರಳಿದ ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ರಾಷ್ಟ್ರೀಯ ನಾಯಕರಾದ ಆತಿಕುರ್ರಹ್ಮಾನ್,ಮಸೂದ್ ಹಾಗೂ ಪತ್ರಕರ್ತ ಸಿದ್ದೀಕ್ ಕಪ್ಪನ್ , ಆಲಂ ಅದೇ ರೀತಿ ಇದೇ ಪ್ರಕರಣವನ್ನು ನೆಪವಾಗಿರಿಸಿ ಕ್ಯಾಂಪಸ್ ಫ್ರಂಟ್ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ರವೂಫ್ ಶರೀಫ್ ನ್ನು ಕೂಡ ಅನ್ಯಾಯವಾಗಿ ಬಂಧಿಸಿ ಇಂದಿಗೆ 250 ದಿನಗಳಾಗಿದ್ದು, ಇದನ್ನು ಖಂಡಿಸಿ ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ರಾಷ್ಟ್ರಾದ್ಯಂತ ಕರೆ ನೀಡಿದ ಪ್ರತಿಭಟನೆಯ ಭಾಗವಾಗಿ ಕ್ಯಾಂಪಸ್ ಫ್ರಂಟ್ ವಿಟ್ಲ ಜಿಲ್ಲಾ ಸಮಿತಿ ವತಿಯಿಂದ ಜಿಲ್ಲೆಯ ಕಲ್ಲಡ್ಕ, ವಿಟ್ಲ, ಸಾಲೆತ್ತೂರು, ಸಜಿಪ, ಅಡ್ಯನಡ್ಕ ಹಾಗೂ ಇತರೆ ಸ್ಥಳಗಳಲ್ಲಿ ಪ್ರತಿಭಟನೆ ನಡೆಯಿತು.

ಮೋದಿಯ ಸರ್ವಾಧಿಕಾರದ ದೇಶದಲ್ಲಿ ಇವರ ವಿರುಧ್ದ ಯಾರೆಲ್ಲಾ ಧ್ವನಿಯೆತ್ತುತ್ತಾರೋ ಅವರನ್ನು ಇಂದು ಭೇಟೆಯಾಡುತ್ತಿದ್ದಾರೆ , ಅತ್ಯಾಚಾರಕ್ಕೊಳಪಟ್ಟು ಕೊಲೆಗೈಯಲ್ಪಟ್ಟ ಬಾಲಕಿಯ ಮನೆಗೆ ಭೇಟಿ ನೀಡುವುದು ಕೂಡ ಈ ದೇಶದಲ್ಲಿ ದೇಶದ್ರೋಹವಾಗುತ್ತಿದೆ , ಈ ಸರ್ವಾಧಿಕಾರಿ ಧೋರಣೆಯನ್ನು ಪ್ರತಿಯೊಂದು ಜಾತ್ಯಾತೀತ ಮೌಲ್ಯದ ಮೇಲೆ ನಂಬಿಕೆಯಿರಿಸಿದ ವ್ಯಕ್ತಿಯು ಖಂಡಿಸಬೇಕಾಗಿದೆ ಎಂದು ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ವಿಟ್ಲ ಜಿಲ್ಲಾಧ್ಯಕ್ಷರಾದ ಫಯಾಝ್ ಕಲ್ಲಡ್ಕ ಹೇಳಿದರು.

ಈ ಅಕ್ರಮ ಬಂಧನದಿಂದ ವಿದ್ಯಾರ್ಥಿ ನಾಯಕರನ್ನು,ಪತ್ರಕರ್ತರನ್ನು ಬಿಡುಗಡೆಗೊಳಿಸಿ ಎಂದು ಪ್ರತಿಭಟನಾಕಾರರು ಆಗ್ರಹಿಸಿದರು. ಈ ಸಂದರ್ಭದಲ್ಲಿ ಉಪಾಧ್ಯಕ್ಷ ಸಂಶುದ್ದೀನ್, ಉಪ ಕಾರ್ಯದರ್ಶಿ ಇರ್ಶಾದ್ ಮತ್ತು ಸಮಿತಿ ಸದಸ್ಯರಾದ ಮುಕ್ತಾರ್, ಹಕಮ್, ನಿಸಾರ್, ಫಯಝ್ ಹಾಗೂ ಯುನಿಟ್ ನಾಯಕರು ಕೂಡ ಉಪಸ್ಥಿತರಿದ್ದರು.

More from the blog

ನೀತಿ ಸಂಹಿತೆ ಉಲ್ಲಂಘನೆ : ಕೋಟಾ ಶ್ರೀನಿವಾಸ್‌ ಪೂಜಾರಿಗೆ ಕೋರ್ಟ್‌ ಸಮನ್ಸ್‌

ಬೆಂಗಳೂರು: ಬಿಜೆಪಿ ಅಭ್ಯರ್ಥಿ ಕೋಟಾ ಶ್ರೀನಿವಾಸ್‌ ಪೂಜಾರಿ ಅವರಿಗೆ ಕೋರ್ಟ್‌ ಸಮನ್ಸ್‌ ಜಾರಿ ಮಾಡಿದೆ. ಕೋಟಾ ಶ್ರೀನಿವಾಸ ಪೂಜಾರಿ, ಗುರ್ಮೆ ಸುರೇಶ್ ಶೆಟ್ಟಿ, ಲಾಲಾಜಿ ಮೆಂಡನ್ ಹಾಗೂ ಶಾಲಾ ಆಡಳಿತ ಮಂಡಳಿಗೆ ಜನಪ್ರತಿನಿಧಿಗಳ ವಿಶೇಷ...

ಸರ್ಕಾರದ ಕೋವಿ ಠೇವಣಿ ಕ್ರಮ: ಪರವಾನಿಗೆ ಪಡೆದ ರೈತರಿಂದ ಚುನಾವಣೆ ಬಹಿಷ್ಕಾರ 

ವಿಟ್ಲ: ಕರ್ನಾಟಕ ರಾಜ್ಯ ರೈತ ಸಂಘ ಹಸಿರುಸೇನೆಯ ದ.ಕ.ಜಿಲ್ಲಾ ಸಮಿತಿ ಮತ್ತು ಕೋವಿ ಪರವಾನಿಗೆ ಪಡೆದ ರೈತ ಬಳಕೆದಾರರ ಸಂಘವು ಈ ಬಾರಿ ಚುನಾವಣೆ ಬಹಿಷ್ಕರಿಸುತ್ತದೆ ಎಂದು ರೈತ ಸಂಘದ ಜಿಲ್ಲಾಧ್ಯಕ್ಷ ಶ್ರೀಧರ...

ಟ್ರಾಫಿಕ್ ಪೊಲೀಸ್ ಠಾಣೆಯ ಕಾಮಗಾರಿಯನ್ನು ಪೊಲೀಸ್ ಹೌಸಿಂಗ್ ಕಾರ್ಪೋರೇಸನ್ ಎಡಿಜಿಪಿ ರಾಮಚಂದ್ರರಾವ್ ವೀಕ್ಷಣೆ

ಬಂಟ್ವಾಳ; ಬಿಸಿರೋಡಿನ ಪಾಣೆಮಂಗಳೂರಿನಲ್ಲಿ ಅಂದಾಜು ರೂ.3.18 ಕೋಟಿ ವೆಚ್ಚದಲ್ಲಿ ನೂತನವಾಗಿ ನಿರ್ಮಾಣವಾಗುತ್ತಿರುವ ಟ್ರಾಫಿಕ್ ಪೋಲೀಸ್ ಠಾಣೆಯ ಕಾಮಗಾರಿಯನ್ನು ಪೋಲಿಸ್ ಹೌಸಿಂಗ್ ಕಾರ್ಪೋರೇಸನ್ ಎಡಿಜಿಪಿ ರಾಮಚಂದ್ರರಾವ್ ವೀಕ್ಷಣೆ ನಡೆಸಿದರು. ಉತ್ತಮ ಗುಣಮಟ್ಟದಲ್ಲಿ ಠಾಣೆಯ ಕೆಲಸವನ್ನು ಮಾಡುವ...

ಸೌಜನ್ಯ ಹೋರಾಟ ಸಮಿತಿಯಿಂದ ನೋಟ ಅಭಿಯಾನ

ಮಂಗಳೂರು: ರಾಜಕೀಯ ಪಕ್ಷಗಳು ಮತ್ತು ನ್ಯಾಯಾಂಗ ವ್ಯವಸ್ಥೆಯ ಗಮನ ಸೆಳೆಯುವ ಉದ್ದೇಶದಿಂದ ಸೌಜನ್ಯ ಪರ ಹೋರಾಟ ಸಮಿತಿ ವತಿಯಿಂದ ಮುಂಬರುವ‌ ಲೋಕಸಭಾ ಚುನಾವಣೆಯಲ್ಲಿ ನೋಟಕ್ಕೆ ಮತ ಚಲಾಯಿಸಲು ಜನ ಸಾಮಾನ್ಯರನ್ನು ಪ್ರೇರೇಪಿಸಲು ನೋಟ...