Wednesday, October 18, 2023

ಯಾವುದೇ ಪ್ರಚಾರ ಬಯಸದೆ ತನ್ನ ವಠಾರದ 78 ಮನೆಗಳಿಗೆ ಅಕ್ಕಿ ವಿತರಿಸಿದ ಶ್ರೀ ಉದಯ ಪೂಜಾರಿ

Must read

ಬಂಟ್ವಾಳ: ಜಗದ್ಗುರು ಶ್ರೀ ನಾರಾಯಣಗುರುಗಳ ತತ್ವಾದರ್ಶದಂತೆ ಮಾರ್ನಬೈಲು ಧರ್ಮ ಚಾವಡಿಯ ಶ್ರೀ ಉದಯ ಪೂಜಾರಿ ಅವರು ತನ್ನ ಮನೆಯ ವಠಾರದ ಎಲ್ಲಾ 78 ಮನೆಗಳಿಗೂ ಲಾಕ್ ಡೌನ್ ಸಂಕಷ್ಟದ ಸಂದರ್ಭದಲ್ಲಿ ಅಕ್ಕಿ ವಿತರಿಸಿದರು.

ರಾಜಕಾರಣಿಗಳು ಚುನಾವಣಾ ಸ್ವಾರ್ಥವನ್ನಿಟ್ಟುಕೊಂಡು ಐದತ್ತು ಕೆ.ಜಿ ಅಕ್ಕಿಯನ್ನು ನೂರೈವತ್ತು ಜನರೊಂದಿಗೆ ಸೇರಿ ಬಡವರಿಗೆ ನೀಡಿ ಅದನ್ನು ಫೋಟೋ ತೆಗೆದು ಸಾಮಾಜಿಕ ಜಾಲತಾಣಗಳಲ್ಲಿ ಹಾಕಿ ಪಡಕೊಂಡವರ ಮಾನ ಹರಾಜಿಗಿಟ್ಟು ತಾವು ಪ್ರಚಾರ ಗಿಟ್ಟಿಸಿಕೊಳ್ಳವುದನ್ನು ನಾವೆಲ್ಲರೂ ನೋಡುತ್ತೇವೆ.

ಆದರೆ ದೈವ ಚಾಕರಿಯಿಂದ ಸಂಪಾದಿಸಿದ ತನ್ನ ಸ್ವಲ್ಪ ಸಂಪಾದನೆಯಲ್ಲಿ ತನ್ನ ಮನೆಯ ಸುತ್ತ ಮುತ್ತ ಇರುವ ಎಲ್ಲಾ 78 ಮನೆಗಳಿಗೂ ಕೊರೋನ ಸಂಕಷ್ಟದ ಸಂದರ್ಭದಲ್ಲಿ ತಲಾ 25 ಕೆ.ಜಿ.ಯಂತೆ ಸುಮಾರು 19 ಕ್ವಿಂಟಾಲ್ ಅಕ್ಕಿಯನ್ನು ಯಾವುದೇ ಫಲಾಪೇಕ್ಷೆ ಇಲ್ಲದೆ, ಯಾವುದೇ ಫೋಟೋ ಇಲ್ಲದೆ ಶ್ರೀ ಉದಯ ಪೂಜಾರಿ ಅವರು ಪ್ರಾಮಾಣಿಕವಾಗಿ ವಿತರಿಸಿದ್ದಾರೆ.

ಪ್ರತಿಯೊಂದು ಮನೆಗೂ 25 ಕೆ.ಜಿ. ಅಕ್ಕಿಯನ್ನು ನೀಡುವ ಮೂಲಕ ಜಾತಿ ಮತ ಭೇದವಿಲ್ಲದೆ ಮಾಡಿದ ಮಾರ್ನಬೈಲು ಶ್ರೀ ಉದಯ ಪೂಜಾರಿ ಅವರ ಧರ್ಮ ಕಾರ್ಯಕ್ಕೆ ಎಲ್ಲೆಡೆ ಪ್ರಶಂಸೆ ವ್ಯಕ್ತವಾಗಿದೆ.

ಅದರೆ ಅದೇನಿದ್ದರೂ ಮಹಾತಾಯಿಯ ಅನುಗ್ರಹದಿಂದ ವಿತರಿಸಿದ್ದೇನೆ. ಕೆರೆಯ ನೀರನ್ನು ಕೆರೆಗೆ ಚೆಲ್ಲು ಎಂಬುದರಲ್ಲೆ ತೃಪ್ತಿ ಎನ್ನುತ್ತಾರೆ ಧರ್ಮ ಚಾವಡಿಯ ಉದಯ ಪೂಜಾರಿಯವರು.

ಜಗದ್ಗುರು ಬ್ರಹ್ಮ ಶ್ರೀ ನಾರಾಯಣ ಗುರು ಸ್ವಾಮಿಗಳ ಒಂದೇ ಜಾತಿ ಒಂದೇ ಮತ ಒಂದೇ ದೇವರು ಎಂಬ ಸಿದ್ಧಾಂತವನ್ನು ಅಕ್ಷರಶಃ ಪಾಲಿಸಿದ ಪುಣ್ಯಾತ್ಮ ಮಾರ್ನಬೈಲು ಧರ್ಮ ಚಾವಡಿಯ ಶ್ರೀಯುತ ಉದಯ ಪೂಜಾರಿ ಅವರು ಎಲ್ಲರಿಗೂ ಮಾದರಿಯಾಗಿದ್ದಾರೆ.

More articles

Latest article