ಬಂಟ್ವಾಳ: ಮೋದಿ ಸರಕಾರದ ಸಂಭ್ರಮ ಪ್ರಯುಕ್ತ ಬಿ.ಜೆ.ಪಿ.ಬಂಟ್ವಾಳ ಮಂಡಲ ಅಸಂಘಟಿತ ಕಾರ್ಮಿಕರ ಪ್ರಕೋಷ್ಟದ ವತಿಯಿಂದ ಸೇವಾಹಿ ಸಂಘಟನೆಯ ಪ್ರಯುಕ್ತ ಬಂಟ್ವಾಳ ಸೇವಾ ಭಾರತಿ ಸಂಘಟನೆಯ ಕಾರ್ಯಕರ್ತರಿಗೆ ಮಾಸ್ಕ್ ಮತ್ತು ಸ್ಯಾನಿಟೈಸರ್ ವಿತರಿಸಲಾಯಿತು.
ಈ ಕಾರ್ಯಕ್ರಮದಲ್ಲಿ ಜಿಲ್ಲಾ ಪ್ರಕೋಷ್ಠದ ಸಂಚಾಲಕರಾದ ಜಯಂತ ಸಾಲ್ಯಾನ್, ಸಹ ಸಂಚಾಲಕರಾದ ಹರೀಶ್ ಆಚಾರ್ಯ, ಬಂಟ್ವಾಳ ಮಂಡಲದ ಪ್ರಕೋಷ್ಠದ ಸಂಚಾಲಕರಾದ ಜಯಪ್ರಕಾಶ್ ಸಜೀಪ, ಸಹ ಸಂಚಾಲಕರಾದ ಮಹೇಶ್ ಶೆಟ್ಟಿ ಜುಮಾದಿಗುಡ್ಡೆ, ಎಸ್ಸಿ ಮೋರ್ಚಾದ ಅಧ್ಯಕ್ಷರಾದ ಕೇಶವ ದೈಪಲ, ಪ್ರಣಾಮ್ ಅಜ್ಜಿಬೆಟ್ಟು ಹಾಗೂ ಪಕ್ಷದ ಪ್ರಮುಖರು ಹಾಜರಿದ್ದರು .