ಬಂಟ್ವಾಳ : ಸರ್ವ ಪಕ್ಷ ಮತ್ತು ಸಂಘಟನೆಗಳು ಕರೆ ನೀಡಿರುವ ಜನಾಗ್ರಹ ಆಂದೋಲನಕ್ಕೆ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ-SDPI ಬಿ.ಸಿ ರೋಡು ತಲಪಾಡಿ ಘಟಕದ ವತಿಯಿಂದ ಬೆಂಬಲ ವ್ಯಕ್ತಪಡಿಸುವ ಮೂಲಕ ಪ್ರತಿಭಟಿಸಲಾಯಿತು. ಪ್ರತಿಭಟನಾ ಕಾರರು ಜನವಿರೋಧಿ ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. ಈ ಸಂದರ್ಭ SDPI ತಲಪಾಡಿ ಘಟಕ ಅಧ್ಯಕ್ಷ ಶಾಹುಲ್ ತಲಪಾಡಿ, ಪಾಪ್ಯುಲರ್ ಫ್ರಂಟ್ ಬಿ.ಸಿರೋಡು ಅಧ್ಯಕ್ಷ ಶರೀಫ್ ವಳವೂರು, ಅಕ್ಬರ್ ಅಲಿ ಪೊನ್ನೋಡಿ, ಅಶ್ರಫ್ ಬಿ.ಎಮ್.ಟಿ ಹಾಗೂ ಮತ್ತಿತರರು ಉಪಸ್ಥಿತರಿದ್ದರು.