ಬಂಟ್ವಾಳ: ತಾಲೂಕಿನ ಸಂಗಬೆಟ್ಟು ಗ್ರಾಮ ಪಂಚಾಯತ್ ವ್ಯಾಪ್ತಿಯ ಕೆರೆಕೋಡಿ ಎಂಬಲ್ಲಿ ನರೇಗಾ ಯೋಜನೆಯ ಅಡಿಯಲ್ಲಿ ತೋಡಿನ ಹೂಳೆತ್ತುವ ಕಾಮಗಾರಿಗೆ ಪಂಚಾಯತ್ ಅಧ್ಯಕ್ಷ ಸತೀಶ್ ಪೂಜಾರಿ ಹಲಕ್ಕೆ ಅವರು ಚಾಲನೆ ನೀಡಿದರು.
ಈ ಸಂದರ್ಭ ದಲ್ಲಿ ಪಂಚಾಯತ್ ವತಿಯಿಂದ ಕಾರ್ಮಿ ಕರಿಗೆ ಮಾಸ್ಕ್, ಸ್ಯಾನಿಟೈಝೆರ್ ವಿತರಿಸಲಾಯಿತು. ಪಿ ಡಿ ಓ ಪದ್ಮಾ ನಾಯ್ಕ್, ಪಂಚಾಯತ್ ಸದಸ್ಯ ಸುನಿಲ್ ಶೆಟ್ಟಿಗಾರ್, ಸಿಬಂದಿ ರಾಜೇಶ್, ಮಹಮ್ಮದ್ ಶಾಫಿ ಉಪಸ್ಥಿತರಿದ್ದರು.