ಬೆಂಗಳೂರು: ಜೂನ್ 21ರಿಂದ ಜುಲೈ 5ರ ವರೆಗೆ ಎಸ್.ಎಸ್.ಎಲ್.ಸಿ. ಪರೀಕ್ಷೆ ಯಾವುದೇ ಬದಲಾವಣೆ ಇಲ್ಲದೆ ನಿಗದಿಯಂತೆ ನಡೆಯಲಿದ್ದು ಅದಕ್ಕೆ ಬೇಕಾದ ಎಲ್ಲಾ ಸಿದ್ಧತೆಗಳನ್ನು ಮಾಡುವಂತೆ ಶಿಕ್ಷಣ ಸಚಿವ ಸುರೇಶ್ ಕುಮಾರ್ ಹೇಳಿದ್ದಾರೆ.
ಜೂನ್ 1ರಿಂದ 14 ರವರೆಗೆ ಎಸ್.ಎಸ್.ಎಲ್.ಸಿ. ವಿದ್ಯಾರ್ಥಿಗಳಿಗಾಗಿ ಪುನರ್ಮನನ ತರಗತಿಗಳು ನಡೆಯಲಿವೆ. ಪ್ರೌಢಶಾಲಾ ಶಿಕ್ಷಕರು ರಜೆ ಅವಧಿಯಲ್ಲಿ ಎಸ್.ಎಸ್.ಎಲ್.ಸಿ. ಮಕ್ಕಳ ಪರೀಕ್ಷಾ ಸಿದ್ಧತೆಯ ಬಗ್ಗೆ ಗಮನ ಹರಿಸಬೇಕು. ದೂರವಾಣಿ ಮೂಲಕ ಸಂಪರ್ಕದಲ್ಲಿದ್ದು ಅವರ ಕಲಿಕೆಗೆ ಪ್ರೇರೇಪಿಸಬೇಕು ಎಂದಿದ್ದಾರೆ.
ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳಿಗೆ ಜೂನ್ 14ರ ವರೆಗೆ ರಜೆ ನೀಡಲಾಗಿದ್ದು ಜೂನ್ 15ರಿಂದ 2021-22ನೇ ಸಾಲಿನ ಶಾಲೆಗಳು ಆರಂಭವಾಗಲಿದೆ. ಪ್ರೌಢಶಾಲೆ ವಿದ್ಯಾರ್ಥಿಗಳಿಗೆ ಮೇ 31ರವರೆಗೆ ರಜೆ ನೀಡಲಾಗಿದೆ. ಜೂನ್ 1ರಿಂದ ತರಗತಿ ಆರಂಭಗೊಳ್ಳಲಿದೆ ಎಂದರು.