ಮಂಗಳೂರು: ಕೊರೋನ ಸೋಂಕು ದೃಢಪಟ್ಟಿದ್ದ ಮಹಿಳಾ ಪ್ರೊಬೆಷನರಿ ಪಿಎಸ್‌ಐ ಒಬ್ಬರು ಮೃತಪಟ್ಟಿದ್ದಾರೆ.
ಕೋಲಾರ ನಿವಾಸಿ, ಪ್ರಸ್ತುತ ದಕ್ಷಿಣ ಕನ್ನಡ ಜಿಲ್ಲೆಯ ಎಸ್ಪಿ ಕಚೇರಿಯಲ್ಲಿ ಪ್ರೊಬೆಷನರಿ ಪಿ.ಎಸ್.ಐ. ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ಶಾಮಿಲಿ ಎಂಬವರು ಕೊರೋನದಿಂದ ಮೃತಪಟ್ಟವರು.
ಶಾಮಿಲಿ 7 ತಿಂಗಳ ಗರ್ಭಿಣಿಯಾಗಿದ್ದು ಕೋಲಾರದ ಆರ್‌ಎಂ ಜಾಲಪ್ಪ ಆಸ್ಪತ್ರೆಯಲ್ಲಿ ಇಂದು ಬೆಳಗ್ಗೆ 4:30ಕ್ಕೆ ನಿಧನರಾಗಿದ್ದಾರೆ. ಅವರಿಗೆ ಮೇ 2ರಂದು ಕೊರೋನ ದೃಢಪಟ್ಟಿತ್ತು. ಗರ್ಭಿಣಿಯಾಗಿದ್ದ ಹಿನ್ನೆಲೆಯಲ್ಲಿ ಸುಮಾರು ಒಂದು ತಿಂಗಳ ಹಿಂದೆ ಅವರು ರಜೆಯ ಮೇಲೆ ತಮ್ಮ ಊರಿಗೆ ತೆರಳಿದ್ದರು. ಅಲ್ಲದೆ ಗರ್ಭಿಣಿಯಾದ ಹಿನ್ನೆಲೆಯಲ್ಲಿ ಅವರು ಕೋವಿಡ್ ವ್ಯಾಕ್ಸಿನ್ ಪಡೆದಿರಲಿಲ್ಲ.