ಬಂಟ್ವಾಳ: ಬಂಟ್ವಾಳ ತಾಲೂಕಿನ ರಾಯಿ ಪೇಟೆಯಲ್ಲಿ ಸಿದ್ಧಕಟ್ಟೆ ವ್ಯವಸಾಯ ಸೇವಾ ಸಹಕಾರಿ ಸಂಘದ ವತಿಯಿಂದ ನಿಮಾ೯ಣಗೊಂಡ ಸ್ವಂತ ಕಟ್ಟಡ ಮತ್ತು ನೂತನ ಶಾಖೆಯನ್ನು ಆರ್ ಎಸ್ ಎಸ್ ಮುಖಂಡ ಡಾ.ಕೆ.ಪ್ರಭಾಕರ ಭಟ್ ಕಲ್ಲಡ್ಕ ಇವರು ಶುಕ್ರವಾರ ಲೋಕಾಪ೯ಣೆಗೊಳಿಸಿ ಶುಭ ಹಾರೈಸಿದರು. ಸೊಸೈಟಿ ಅಧ್ಯಕ್ಷ ಪ್ರಭಾಕರ ಪ್ರಭು, ಉಪಾಧ್ಯಕ್ಷ ಸತೀಶ ಪೂಜಾರಿ ಅಳಕೆ, ಮಾಜಿ ಅಧ್ಯಕ್ಷ ಎ.ಗೋಪಿನಾಥ ರೈ, ಮುಖ್ಯ ಕಾಯ೯ನಿವ೯ಹಣಾಧಿಕಾರಿ ಆರತಿ ಶೆಟ್ಟಿ, ಶಾಖಾಧಿಕಾರಿ ಸಚಿನ್, ಗ್ರಾ.ಪಂ.ಅಧ್ಯಕ್ಷೆ ರತ್ನ ಆನಂದ, ಉಪಾಧ್ಯಕ್ಷ ರಶ್ಮಿತ್ ಶೆಟ್ಟಿ ಕೈತ್ರೋಡಿ , ಪೂಂಜ ಕ್ಷೇತ್ರದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ರತ್ನ ಕುಮಾರ್ ಚೌಟ ಮತ್ತು ಸೊಸೈಟಿ ನಿದೇ೯ಶಕರು ಇದ್ದರು. ಕೋವಿಡ್ ನಿಯಮಾವಳಿಯಂತೆ ಸರಳ ರೀತಿಯಲ್ಲಿ ನಡೆದ ಈ ಕಾಯ೯ಕ್ರಮಕ್ಕೆ ಶಾಸಕ ರಾಜೇಶ ನಾಯ್ಕ್ ಉಳಿಪಾಡಿಗುತ್ತು, ಬಿಜೆಪಿ ಕ್ಷೇತ್ರಾಧ್ಯಕ್ಷ ದೇವಪ್ಪ ಪೂಜಾರಿ, ಪ್ರಧಾನ ಕಾಯ೯ದಶಿ೯ ಡೊಂಬಯ ಬಿ.ಅರಳ, ಕಾಯ೯ದಶಿ೯ ರಮಾನಾಥ ರಾಯಿ, ಹಾಲು ಉತ್ಪಾದಕರ ಸಹಕಾರಿ ಸಂಘದ ಅಧ್ಯಕ್ಷ ಸುಂದರ ಭಂಡಾರಿ ಮತ್ತಿತರ ಗಣ್ಯರು ಭೇಟಿ ನೀಡಿದರು.

LEAVE A REPLY

 Click this button or press Ctrl+G to toggle between Kannada and English

Please enter your comment!
Please enter your name here