ಬಂಟ್ವಾಳ: ನಾವೂರು ಗ್ರಾ.ಪಂ. ವ್ಯಾಪ್ತಿಯಲ್ಲಿನ ಕೋವಿಡ್ ಪ್ರಕರಣಗಳ ಬಗ್ಗೆ ಮಾಹಿತಿ ಪಡೆಯುವ ಸಲುವಾಗಿ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಅವರು ಟಾಸ್ಕ್ ಫೋರ್ಸ್ ಸಮಿತಿ ಸಭೆ ನಡೆಸಿದರು.
ಕೊರೊನಾ ಬಗ್ಗೆ ಅನಾವಶ್ಯಕ ಗಾಬರಿ, ಭಯ ಬೇಡ. ರೋಗ ಲಕ್ಷಣಗಳು ಕಂಡು ಬಂದರೆ ಪರೀಕ್ಷೆ ಮಾಡಿ ಚಿಕಿತ್ಸೆ ಪಡೆಯುವ ಮೂಲಕ ಜನರ ಜೀವ ಉಳಿಸುವ ಕೆಲಸ ಮಾಡಲು ಎಲ್ಲರ ಸಹಕಾರ ಅಗತ್ಯ ಎಂದು ಅವರು ಹೇಳಿದರು.
ಕೋವಿಡ್ ನಿಯಂತ್ರಣ ಸಾಧಿಸಲು ಎಲ್ಲರೂ ಜತೆಯಾಗಿ ಕೆಲಸ ಮಾಡೋಣ. ಕೋವಿಡ್ ಬಗ್ಗೆ ಕಠಿಣ ಪರಿಸ್ಥಿತಿಯಲ್ಲಿ ನಾವು ನಿಮ್ಮ ಜೊತೆ ಸದಾಕಾಲವೂ ಇರುತ್ತೇವೆ. ಕೋವಿಡ್ ವ್ಯಾಕ್ಸಿನೇಷನ್ ಕೂಡ ಬೇಡಿಕೆಗೆ ಬೇಕಾಗುವಷ್ಟು ಕೊಡುವ ಕೆಲಸ ಆಗುತ್ತಿದೆ ಅನಾವಶ್ಯಕ ಆತಂಕ ಬೇಡ ಎಂದು ಅವರು ಹೇಳಿದರು.
ನಾವೂರು ಗ್ರಾಮದಲ್ಲಿ ಪ್ರಸ್ತುತ 101 ಸೊಂಕಿತರು ಇದ್ದು 7 ಜನ ಗುಣಮುಖರಾಗಿದ್ದು 94 ಸಕ್ರಿಯ ಪ್ರಕರಣಗಳಿವೆ.
ಸಭೆಯಲ್ಲಿ ನಾವೂರು ಗ್ರಾ.ಪಂ. ಅಧ್ಯಕ್ಷರಾದ ಉಮೇಶ್ ಕುಲಾಲ್, ಗ್ರಾಮ ಪಂಚಾಯತ್ ಉಪಾಧ್ಯಕ್ಷೆ ವಿಲ್ಮಾ, ತಹಶಿಲ್ದಾರ್ ರಶ್ಮಿ ಎಸ್.ಆರ್., ತಾ.ಪಂ. ಇ.ಒ ರಾಜಣ್ಣ, ಗ್ರಾ.ಪಂ. ಪಿ.ಡಿ.ಒ. ರಚನ್ ಕುಮಾರ್, ಸಿಡಿಪಿಓ ಗಾಯತ್ರಿ ಕಂಬಳಿ, ಕಂದಾಯ ವೃತ್ತ ನಿರೀಕ್ಷಕ ನವೀನ್ ಕುಮಾರ್, ಗ್ರಾಮ ಕರಣೀಕ ಕುಮಾರ್ ಹಾಗೂ ಟಾಸ್ಕ್ ಫೋರ್ಸ್ ಸಮಿತಿ ಸದಸ್ಯರು ಹಾಗೂ ಅಧಿಕಾರಿಗಳು ಉಪಸ್ಥಿತರಿದ್ದರು.