ಬಂಟ್ವಾಳ: ಲಾಕ್ ಡೌನ್ ಮಾರ್ಗಸೂಚಿಯನ್ನು ಉಲ್ಲಂಘಿಸಿ ಅನಗತ್ಯವಾಗಿ ಸಂಚಾರ ಮಾಡುವ ಕುರಿತು ದೂರುಗಳು ಬಂದಿದ್ದು, ಅನಗತ್ಯ ಸಂಚಾರ ಮಾಡುವವರಿಗೆ ಮುಲಾಜಿಲ್ಲದೆ ದಂಡ ವಿಧಿಸಬೇಕು ಎಂದು ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿ ಪೊಲೀಸರಿಗೆ ಸೂಚಿಸಿದ್ದಾರೆ.
ಈ ಕುರಿತು ಮಾತನಾಡಿದ ಶಾಸಕರು, ಲಾಕ್ ಡೌನ್ ಸಂದರ್ಭದಲ್ಲಿ ಅಗತ್ಯ ವಸ್ತುಗಳು ಅಲ್ಲದ ಇತರ ಅಂಗಡಿಗಳು ತೆರೆದ ಬಗ್ಗೆಯೂ ದೂರುಗಳು ಬಂದಿವೆ. ಇನ್ನು ಇದೇ ರೀತಿ ತೆರೆದಿದ್ದರೆ ಅವುಗಳ ವೀಡಿಯೋ ರೆಕಾರ್ಡ್ ಮಾಡಿ ದಂಡ ವಿಧಿಸುವ ಕ್ರಮ ಜರುಗಿಸಿ ಎಂದಿದ್ದಾರೆ.
ಅನಗತ್ಯ ವಾಹನ ಸಂಚಾರಿಗಳಿಗೂ ಕಠಿಣ ಕ್ರಮ ಜರುಗಿಸಿ. ಲಾಕ್ ಡೌನ್ ನಿಯಮ ಪಾಲನೆಯನ್ನು ಕಟ್ಟುನಿಟ್ಟಾಗಿ ಮಾಡುವಂತೆ ಅಧಿಕಾರಿಗಳಿಗೆ ಶಾಸಕರು ಸೂಚಿಸಿದ್ದಾರೆ.