ಬಂಟ್ವಾಳ: ಪಿಲಾತಬೆಟ್ಟು ಗ್ರಾಮದ ಪುಂಜಾಲಕಟ್ಟೆ ಶ್ರೀರಾಮನಗರ ದಿಂದ ನಾಕುನಾಡು ಮಜಲೋಡಿ ಯನ್ನು ಸಂಪರ್ಕಿಸುವ ರಸ್ತೆಯ ಚರಂಡಿಯಲ್ಲಿ ಮಳೆಯ ನೀರು ಸರಾಗವಾಗಿ ಹರಿಯದೆ ರಸ್ತೆ ಯ ಮೇಲೆ ಹರಿಯುತ್ತಿದ್ದು, ಸಮಸ್ಯೆಯನ್ನು ಅರಿತ ಪಿಲಾತಬೆಟ್ಟು ಗ್ರಾ.ಪಂ.ಸದಸ್ಯೆ ತನ್ನ ಪತಿಯ ಜತೆಗೂಡಿ ಚರಂಡಿ ದುರಸ್ತಿಗೊಳಿಸಿ ಸಾರ್ವಜನಿಕರ ಪ್ರಶಂಸೆ ಪಡೆದಿದ್ದಾರೆ.
ಇಲ್ಲಿನ ಗ್ರಾ.ಪಂ.ಸದಸ್ಯೆ ಪುಷ್ಪಲತಾ ಮೋಹನ್ ಅವರು ಪತಿ ಮೋಹನ ಸಾಲ್ಯಾನ್ ಹೆಗ್ಡೆಬೆಟ್ಟು ಅವರ ಜತೆಗೂಡಿ ಚರಂಡಿಯ ಹೂಳು ತೆಗೆದು ನೀರು ಸರಾಗವಾಗಿ ಹರಿದು ಹೋಗಲು ಅನುವು ಮಾಡಿದರು. ಇದರಿಂದ ರಸ್ತೆ ಮೇಲೆ ನೀರು ಹರಿಯದೆ ವಾಹನಗಳ ಸುಗಮ ಸಂಚಾರಕ್ಕೆ ಅನುವಾಗಿದೆ
ಸ್ಥಳೀಯ ಸ್ವರ್ಣೊದ್ಯಮಿ ಲೋಕೇಶ್ ಆಚಾರ್ಯ, ಪಿಲಾತಬೆಟ್ಟು ಗ್ರಾಮಪಂಚಾಯತ್ ಸಿಬ್ಬಂದಿ ಶಿವರಾಮ್ ; ಉದ್ಯಮಿಗಳಾದ ಭಾಸ್ಕರ್ ಶೆಟ್ಟಿ ಕೊರಗಟ್ಟೆ ಹಾಗು ಪುಂಜಾಲಕಟ್ಟೆ ಪ್ರಾಥಮಿಕ ಆರೊಗ್ಯ ಕೇಂದ್ರ ದ 108 ಮಹಳಾ ಸಿಬ್ಬಂದಿ ಸಹಕರಿಸಿದ್ದರು.