ಬಂಟ್ವಾಳ: ಪುದು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಕೊರೋನಾ ಪೀಡಿತ ಮನೆಗಳಿಗೆ ಸೋಮವಾರ ಮಂಗಳೂರು ವಿಧಾನಸಭಾ ಕ್ಷೇತ್ರದ ಶಾಸಕ ಯು.ಟಿ.ಖಾದರ್ ಹಾಗೂ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಉಮರ್ ಫಾರೂಕ್ ಫರಂಗಿಪೇಟೆ ಅವರ ನಿರ್ದೇಶನದಂತೆ ಯು.ಟಿ.ಕೆ ಕೋವಿಡ್-19 ಹೆಲ್ಪ್ ಲೈನ್ 24×7 ಹಾಗೂ ಪುದು ಯುವ ಕಾಂಗ್ರೆಸ್ ವತಿಯಿಂದ ರೇಶನ್ ಕಿಟ್ ವಿತರಿಸಲಾಯಿತು.
ಈ ಸಂದರ್ಭದಲ್ಲಿ ಪುದು ಗ್ರಾಮ ಪಂಚಾಯತ್ ಅಧ್ಯಕ್ಷ ರಮ್ಲಾನ್ ಮಾರಿಪಳ್ಳ, ಉಪಾಧ್ಯಕ್ಷ ಲೀಡಿಯ ಪಿಂಟೋ, ಪುದು ವಲಯ ಕಾಂಗ್ರೆಸ್ ಅಧ್ಯಕ್ಷ ರಫೀಕ್ ಪೇರಿಮಾರ್, ಮುಡಿಪು ಬ್ಲಾಕ್ ಯುವ ಕಾಂಗ್ರೆಸ್ ಉಪಾಧ್ಯಕ್ಷ ಮಜೀದ್ ಪೇರಿಮಾರ್, ಮಂಗಳೂರು ವಿಧಾನಸಭಾ ಕ್ಷೇತ್ರದ ಯುವ ಕಾಂಗ್ರೆಸ್ ಮುಖಂಡ ಹಿಶಾಮ್ ಫರಂಗಿಪೇಟೆ, ಪುದು ಯುವ ಕಾಂಗ್ರೆಸ್ ಅಧ್ಯಕ್ಷ ನಿಜಾಮ್ ಕುಂಜತ್ತಕಲ್, ಪುದು ಗ್ರಾಮ ಪಂಚಾಯತ್ ಸದಸ್ಯ ಇಕ್ಬಲ್ ಸುಜೀರ್, ಕಿಶೋರ್ ಸುಜೀರ್, ಮುಮ್ತಾಜ್ ಸುಜೀರ್ ಹಾಗೂ ಪುದು ಯುವ ಕಾಂಗ್ರೆಸ್ ಸದಸ್ಯ ಇನ್ಷದ್ ಮಾರಿಪಳ್ಳ, ರಿಲ್ವಾನ್ ಅಮೆಮರ್, ಪಶ್ವತ್ ಫರಂಗಿಪೇಟೆ, ಹಕೀಂ ಉರ್ವ, ಅಬ್ದುಲ್ ಘನಿ ಮಾರಿಪಳ್ಳ ಹಾಗೂ ಇನ್ನಿತರರು ಉಪಸ್ಥಿತರಿದ್ದರು.
·