ಬಂಟ್ವಾಳ: ಬಂಟ್ವಾಳ ತಾಲೂಕಿನ ನಾವೂರ ಗ್ರಾಮ ಪಂಚಾಯತಿಯಲ್ಲಿ ಕೊರೋಣ ಸೋಂಕಿನ ಬಗ್ಗೆ ಜನಜಾಗೃತಿ ಕಾರ್ಯಕ್ರಮ ಗ್ರಾ.ಪಂ. ಅಧ್ಯಕ್ಷ ಉಮೇಶ್ ಕುಲಾಲ್‌ರವರ ನೇತ್ರತ್ವದಲ್ಲಿ ನಡೆಯಿತು. ನಾವೂರ ಪಂಚಾಯತಿಯಲ್ಲಿ ಕೊರೋಣ ಸಾಂಕ್ರಾಮಿಕ ರೋಗ ಹತೋಟಿಯಲ್ಲಿದ್ದು ಸಾರ್ವಜನಿಕರು ಹೆಚ್ಚು ಮುಂಜಾಗೃತೆ ಕೈಗೊಳ್ಳುವಂತೆ ವಿನಂತಿಸಿದರು. ಆಶಾ ಕಾರ್ಯಕರ್ತೆಯರು ಉತ್ತಮ ಕೆಲಸ ಮಾಡುತ್ತಿದ್ದು ಜನತೆಯ ವಿಶ್ವಾಸಗಳಿಸುವಲ್ಲಿ ಯಶಸ್ವಿಯಾಗಿದ್ದಾರೆ ಎಂದರು. ಮಾಜಿ ಜಿಲ್ಲಾ ಉಸ್ತುವಾರಿ ಸಚಿವರಾದ ಬಿ ರಮಾನಾಥ ರೈಯವರು ಭೇಟಿ ನೀಡಿ ಪಂಚಾಯಾತ್ ಕಾರ್ಯ ವೈಖರಿಯನ್ನು ಶ್ಲಾಘಿಸಿ ಕೊರೋಣ ಮುಕ್ತ ಗ್ರಾಮ ಪಂಚಾಯಾತ್ ಆಗುವಂತೆ ಒಟ್ಟಾಗಿ ಶ್ರಮಿಸೋಣ ಹಾಗೂ ನಿಮ್ಮ ಕಷ್ಟ ಕಾಲದಲ್ಲಿ ಎಲ್ಲಾ ರೀತಿಯ ಸಹಕಾರ ನೀಡಲು ಸದಾ ಸಿದ್ಧನಿದ್ದೇನೆ ಎಂದರು. ಕೊರೋಣ ಸೋಂಕಿತರ ಮನೆಗೆ ಪಂಚಾಯತ್‌ನಿಂದಲೇ ಅಗತ್ಯ ವಸ್ತುಗಳು ಹಾಗೂ ವೈದ್ಯಕೀಯ ಕಿಟ್‌ಗಳನ್ನು ನೀಡುವಂತೆ ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ್ ಸದಸ್ಯರಾದ ಪದ್ಮಶೇಖರ್ ಜೈನ್, ಬಂಟ್ವಾಳ ಕ್ರೆಡಿಟ್ ಕೋ ಅಪರೇಟಿವ್ ಸೊಸೈಟಿ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಬೇಬಿ ಕುಂದರ್, ಪಂಚಾಯತ್ ಉಪಾಧ್ಯಕ್ಷರಾದ ಲವೀನಾ ಮೋರಸ್, ಸದಸ್ಯರಾದ ಫಾರೂಕ್ ನಾವೂರ, ಸುವರ್ಣ ಕುಮಾರ್ ಜೈನ್, ಎಮ್ ಮಹಮ್ಮದ್, ನಾರಯಣ್ ಕುಲಾಲ್, ಯೋಗಿಶ್ ಪೂಜಾರಿ, ಲವೀನಾ ಶಾಂತಿ ಡಿಸೋಜ, ಜ್ಯೋತಿ, ಸ್ಥಳಿಯರಾದ ಮೋಹನ್ ಗೌಡ ಕಲ್ಮಂಜ, ಪುಷ್ಪರಾಜ್ ನಾವೂರ, ಪದ್ಮಶೇಖರ್ ಜೈನ್ ಬೀದಿ, ಕರೀಂ ಬೀದಿ, ಹಿಲರಿ ಬ್ರಹ್ಮಗುಡ್ಡೆ, ಬೇಬಿ ಸುವರ್ಣ, ಗುಲಾಬಿ ಚಂದಪ್ಪ, ಕರೀಂ ಸುಲ್ತಾನ್‌ಕಟ್ಟೆ, ಚೆನ್ನಪ್ಪ ಮೂಲ್ಯ ವಿನ್ಸೆಂಟ್ ಮೈಂದಾಲ ಮತ್ತು ಆಶಾಕಾರ್ಯಕರ್ತೆಯರು ಉಪಸ್ಥಿತರಿದ್ದರು.