ಬಂಟ್ವಾಳ: ಸಾಮಾನ್ಯವಾಗಿ ನಾವು ಹೊಸ ಹೊಸ ನಿರ್ಮಾಣಗಳಿಗೆ ಬೇಡಿಕೆ ಸಲ್ಲಿಸುತ್ತೇವೆ. ಆದರೆ ಹಿಂದೆ ನೀಡಿರುವ ಸೌಕರ್ಯಗಳನ್ನು ನಿರ್ವಹಣೆ ಮಾಡುವಲ್ಲಿ ಎಡವುತ್ತೇವೆ. ನರಿಕೊಂಬು ಗ್ರಾಮದಲ್ಲಿ ಹಲವು ದಶಕಗಳ ಹಿಂದೆ ನಿರ್ಮಾಣಗೊಂಡ ಗ್ರಾ.ಪಂ.ನ ಕಾರ್ಯದರ್ಶಿಯವರ ವಸತಿಗೃಹ ಇದೀಗ ಪಾಳು ಬಿದಿದ್ದು, ಅದು ಪೂರ್ತಿ ಶಿಥಿಲಾವಸ್ಥೆಗೆ ತಲುಪುವ ಮುನ್ನ ದುರಸ್ತಿಯ ಕುರಿತು ಗ್ರಾ.ಪಂ. ಆಲೋಚಿಸಬೇಕಿದೆ.
ಗ್ರಾ.ಪಂ.ಗಳಲ್ಲಿ ಪಂಚಾಯತ್ ಅಭಿವೃದ್ಧಿ ಅಽಕಾರಿ ಹುದ್ದೆ ಸೃಷ್ಟಿಯಾಗುವ ಮುನ್ನ ಕಾರ್ಯದರ್ಶಿಗಳೇ ಪಂಚಾಯತ್‌ಗಳಿಗೆ ಮುಖ್ಯಸ್ಥರಾಗಿದ್ದರು. ಅಂತಹ ಕಾರ್ಯದರ್ಶಿಗಳಿಗೆ ಉಳಿದುಕೊಳ್ಳುವ ಉದ್ದೇಶದಿಂದ ಈ ಕಟ್ಟಡ ನಿರ್ಮಾಣಗೊಂಡಿರುವ ಕುರಿತು ಕಟ್ಟಡದ ಗೋಡೆಯಲ್ಲಿ ನಮೂದಿಸಲಾಗಿದೆ. ಪ್ರಸ್ತುತ ಕಳೆದ ಹಲವು ವರ್ಷಗಳಿಂದ ಈ ಕಟ್ಟಡ ಪಾಳು ಬಿದ್ದಿದ್ದು, ಶಿಥಿಲಗೊಳ್ಳುತ್ತಿದೆ.
ಕಟ್ಟಡದ ಗೋಡೆಗಳು ಗಟ್ಟಿಯಾಗಿದ್ದರೂ, ಮೇಲ್ಛಾವಣಿ, ನೆಲ ಸಂಪೂರ್ಣ ಶಿಥಿಲಗೊಂಡಿದೆ. ಕಟ್ಟಡದ ಹಂಚುಗಳು ಬಿದ್ದಿರುವ ಜತೆಗೆ ಮೇಲ್ಛಾವಣಿಯ ಮರದ ಸೊತ್ತುಗಳಿಗೂ ಹಾನಿಯಾಗಿದೆ. ಹೀಗಾಗಿ ಮಳೆಗಾಲದಲ್ಲಿ ನೀರು ಒಳಕ್ಕೆ ಬೀಳುತ್ತಿದೆ. ಸದ್ಯಕ್ಕೆ ಗ್ರಾ.ಪಂ.ನ ಹಳೆಯ ಸೊತ್ತುಗಳು ಕಟ್ಟಡದಲ್ಲಿವೆ.
ಇಂತಹ ಕಟ್ಟಡಗಳನ್ನು ನಿರ್ವಹಣೆ ಮಾಡದೇ ಇದ್ದರೆ ವರ್ಷ ಕಳೆದಂತೆ ಶಿಥಿಲಗೊಳ್ಳುತ್ತಲೇ ಸಾಗುತ್ತದೆ, ಹೀಗಾಗಿ ಸದ್ಯಕ್ಕೆ ಈ ಕಟ್ಟಡ ಪೂರ್ಣ ಶಿಥಿಲಗೊಳ್ಳುವ ಮುನ್ನ ದುರಸ್ತಿಯ ಕುರಿತು ಮನಸ್ಸು ಮಾಡಬೇಕಿದೆ.
೨೦೧೩ರ ಬಳಿಕ ಬಳಕೆಯಿಲ್ಲ
ಹಿಂದೆ ಗ್ರಾ.ಪಂ.ಕಾರ್ಯದರ್ಶಿಯವರ ವಸತಿ ಗೃಹವಾಗಿ ನಿರ್ಮಾಣಗೊಂಡ ಕಟ್ಟಡವು ೨೦೧೩ರ ವರೆಗೂ ಬಳಕೆಯಾಗಿತ್ತು ಎಂದು ಅಽಕಾರಿಗಳು ಹೇಳುತ್ತಾರೆ. ಆದರೆ ಬಳಿಕ ಅದನ್ನು ಹಾಗೇ ಬಿಟ್ಟಿರುವುದರಿಂದ ಕೊಂಚ ಶಿಥಿಲಗೊಂಡಿದೆ. ಕಟ್ಟಡದ ಮೇಲ್ಛಾವಣಿ, ನೆಲ, ಬಾಗಿಲುಗಳು, ವಯರಿಂಗ್ ದುರಸ್ತಿ ಮಾಡಿದರೆ ಈಗಲೂ ಅದನ್ನು ವಸತಿ ಕಟ್ಟಡವಾಗಿ ಬಳಕೆ ಮಾಡಬಹುದು ಎಂದು ಗ್ರಾ.ಪಂ.ಮೂಲಗಳು ತಿಳಿಸುತ್ತವೆ.
ಉದ್ದೇಶ ತಿಳಿದು ದುರಸ್ತಿ ಕಾರ್ಯ ನರಿಕೊಂಬಿನಲ್ಲಿ ಗ್ರಾ.ಪಂ.ನ 5 ಸೆಂಟ್ಸ್ ನಿವೇಶನದಲ್ಲಿ ಈ ಕಟ್ಟಡವಿದ್ದು, ಸುಮಾರು 4-5 ಲಕ್ಷ ರೂ. ವೆಚ್ಚದಲ್ಲಿ ಮುಂದಿನ ಸಾಲಿನ 15ನೇ ಸಾಲಿನ ಹಣಕಾಸು ಯೋಜನೆಯ ಅನುದಾನವನ್ನು ಬಳಕೆ ಮಾಡಿಕೊಂಡು ಕಟ್ಟಡವನ್ನು ದುರಸ್ತಿ ಮಾಡುವ ಕುರಿತು ಅಧಿಕಾರಿಯವರು ತಿಳಿಸುತ್ತಾರೆ.
ಆದರೆ ದುರಸ್ತಿ ಮಾಡುವ ಮುನ್ನ ಯಾವ ಉದ್ದೇಶಕ್ಕೆ ಕಟ್ಟಡವನ್ನು ಬಳಕೆ ಮಾಡಬಹುದು ಎಂಬುದನ್ನು ತಿಳಿದುಕೊಂಡು, ಅದಕ್ಕೆ ತಕ್ಕುದಾದ ವ್ಯವಸ್ಥೆಗಳನ್ನು ಕಲ್ಪಿಸಿಯೇ ದುರಸ್ತಿ ಮಾಡಬೇಕಿದೆ. ಕಟ್ಟಡವನ್ನು ಪಿಡಿಒ ಅವರ ವಸತಿ ಗೃಹವಾಗಿ ಅಭಿವೃದ್ಧಿ ಪಡಿಸುವುದು, ಗೋದಾಮು ಕಟ್ಟಡವಾಗಿ ಮಾರ್ಪಟು, ಘನ ತ್ಯಾಜ್ಯ ಘಟಕವಾಗಿ ಪರಿವರ್ತನೆ ಹೀಗೆ ಯಾವುದಾದರೊಂದು ಉದ್ದೇಶದೊಂದಿಗೆ ಕಟ್ಟಡ ದುರಸ್ತಿಯ ಕುರಿತು ತೀರ್ಮಾನಿಸಬೇಕಿದೆ.
15ನೇ ಹ.ಯೋ.ಯಲ್ಲಿ ದುರಸ್ತಿ ಕಳೆದ ಹಲವು ವರ್ಷಗಳಿಂದ ನಿರ್ವಹಣೆಯಿಲ್ಲದೆ ಕಟ್ಟಡ ಪಾಳು ಬಿದ್ದಿರುವುದು ಗಮನಕ್ಕೆ ಬಂದಿದೆ. ಮುಂದೆ ಈ ಕಟ್ಟಡವನ್ನು ಯಾವ ಉದ್ದೇಶಕ್ಕೆ ಬಳಕೆ ಮಾಡುವುದಾಗಿ ಆಲೋಚಿಸಿ ಮುಂದಿನ ೧೫ನೇ ಹಣಕಾಸು ಯೋಜನೆಯ ಅನುದಾನದ ಮೂಲಕ ದುರಸ್ತಿ ಮಾಡಲಾಗುವುದು. ಇಂತಹ ಕಟ್ಟಡಗಳು ಯಾವುದಾದರೊಂದು ಉದ್ದೇಶಕ್ಕೆ ಬಳಕೆಯಾಗುತ್ತದೆ.
ಶಿವಪ್ಪ ಜನಗೊಂಡ
ಅಭಿವೃದ್ಧಿ ಅಽಕಾರಿ, ನರಿಕೊಂಬು ಗ್ರಾ.ಪಂ.