ಬಂಟ್ವಾಳ : ಕಥೊಲಿಕ್ ಸಭಾ ಮೊಗರ್ನಾಡ್ ಘಟಕದ ವತಿಯಿಂದ ಮೊಗರ್ನಾಡ್ ಚರ್ಚ್ ವ್ಯಾಪ್ತಿಗೆ ಒಳಪಟ್ಟ ಸುಮಾರು 63 ಕುಟುಂಬಗಳಿಗೆ ಆಹಾರ ಸಾಮಾಗ್ರಿಗಳ ಕಿಟ್ ಅನ್ನು ಭಾನುವಾರ ವಿತರಿಸಲಾಯಿತು.
ಕಿಟ್ ಗಳನ್ನು ವಿತರಿಸಿದ ಮೊಗರ್ನಾಡ್ ಚರ್ಚ್ ನ ಪ್ರಧಾನ ಧರ್ಮ ಗುರುಗಳಾದ ಅತೀ ವಂದನೀಯ ಡಾ|| ಮಾರ್ಕ್ ಕ್ಯಾಸ್ತೆಲಿನೊ ಅವರು ಮಾತನಾಡಿ,ಲಾಕ್ ಡೌನ್ ನಿಂದ ಸಂಕಷ್ಟ ಎದುರಿಸುತ್ತಿರುವ ಜನರಿಗೆ ಅಗತ್ಯ ವಸ್ತುಗಳ ವಿತರಿಸುವ ಮೂಲಕ ಕಥೋಲಿಕ ಸಭಾದ ಉತ್ತಮ ಕಾರ್ಯ ನಡೆಸಿದೆ, ಎನ್ನುತ್ತಾ ಘಟಕದ ಅಧ್ಯಕ್ಷರನ್ನು ಅಭಿನಂದಿಸಿದರು.
ಈ ಸಂದರ್ಭದಲ್ಲಿ ಕಥೊಲಿಕ್ ಸಭೆಯ ಘಟಕದ ಅಧ್ಯಕ್ಷರಾದ ಸ್ಟ್ಯಾನಿ ಪಿಂಟೊ, ಉಪಾಧ್ಯಕ್ಷರಾದ ಎಲಿಯಾಸ್ ಡಿಸೋಜ, ಕಥೊಲಿಕ್ ಸಭಾ ಮೊಗರ್ನಾಡ್ ವಲಯದ ಮಾಜಿ ಅಧ್ಯಕ್ಷರಾದ ಆಂಟೊನಿ ಡಿಸೋಜ, ಅಜಯ್ ಪಾಯ್ಸ್, ಶ್ರೀಮತಿ ಪೆಟ್ರಿಶಿಯಾ ಲೂಯಿಸ್, ಆಲ್ಫೊನ್ಸ್ ಪಸನ್ಹಾ ಉಪಸ್ಥಿತರಿದ್ದು, ಆಹಾರ ಸಾಮಾಗ್ರಿಗಳ ಕಿಟ್ ಗೆ ನೆರವುನೀಡಿದವರನ್ನು ಸ್ಮರಿಸಿದರು.