ಬಂಟ್ವಾಳ: ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ವಿಡಿಯೋ ಒಂದರಲ್ಲಿ ಹಸಿವನ್ನು ತಾಳಲಾರದೆ ಹೊರಲಾಡುತ್ತಿರುವ ಮಂಗಗಳನ್ನು ನೋಡುತ್ತಿರುವಾಗ ನಿಜಕ್ಕೂ ಅಯ್ಯೋ ಎನಿಸಿದೆ ಇರದು.
ಇದು ಎಲ್ಲಿಯದೊ ದೃಶ್ಯ ವಲ್ಲ…ಬಂಟ್ವಾಳ ತಾಲೂಕಿನ ಇತಿಹಾಸ ಪ್ರಸಿದ್ಧ ದೇವಾಲಯ ಶ್ರೀ ಕ್ಷೇತ್ರ ಕಾರಿಂಜದಲ್ಲಿರುವ ದೇವ ಸ್ವರೂಪ ಕಾರಿಂಜ ಮಂಗಗಳ ಅವಸ್ಥೆ.
ಕೊರೊನಾ ಲಾಕ್ ಡೌನ್ ನ ಹಿನ್ನಲೆಯಲ್ಲಿ ದೇವಸ್ಥಾನಗಳಿಗೆ ಭಕ್ತರಿಲ್ಲದೆ ಸೊರಗುತ್ತಿರುವ ಪರಿಣಾಮ ಪ್ರಾಣಿಗಳಿಗೂ ಅದರ ಬಿಸಿ ತಟ್ಟಿದೆ ಎಂಬುದು ಕಾರಿಂಜದ ವಾನರರ ಸ್ಥಿತಿ ನೋಡಿದಾಗ ಗೊತ್ತಾಗುತ್ತದೆ.
ದೇವಸ್ಥಾನ ಗಳು ಎಲ್ಲವೂ ಬಂದ್ ಅಗಿವೆ ಹಾಗಾಗಿ ಭಕ್ತರಿಗೂ ಪ್ರವೇಶ ನಿರ್ಬಂಧ ಹೇರಿದೆ.
ಜನರಿಲ್ಲದೆ ಬಿಕೋ ಎನ್ನುತ್ತಿರುವ ಕಾರಿಂಜ ದೇವಾಲಯದ ಲ್ಲಿರು ನೂರಾರು ಮಂಗಗಳ ಅವಸ್ಥೆ ಹೇಳತೀರದಷ್ಟು ಶೋಚನೀಯ ಸ್ಥಿತಿಗೆ ತಲುಪಿದೆ ಎಂಬುದು ವಿಡಿಯೋ ದಲ್ಲಿ ಕಾಣುತ್ತಿದೆ.
ಹಸಿವನ್ನು ತಾಳಲಾರದೆ ದೇವಸ್ಥಾನ ದ ಅಂಗದಲ್ಲಿ ಹೊರಲಾಡುತ್ತಿರುವ ಮಂಗವೊಂದಾದರೆ , ದೊಡ್ಡ ಪ್ರಾಯದ ಮಂಗಗಳು ತಿಂದು ಉಳಿದ ಅನ್ನದ ಕಾಳುಗಳನ್ನು ತಿನ್ನುವ ದೃಶ್ಯ ನಿಜಕ್ಕೂ ಬೇಸರ ಉಂಟಾಗುತ್ತದೆ.
ಈಶ್ವರ ದೇವಾಲಯದ ಲ್ಲಿ ದೇವರ ನೈವೇದ್ಯ ಮಾಡಲು ಉಪಯೋಗಿಸುವ ಮೂರು ಕೆ.ಜಿ.ಅಕ್ಕಿಯ ಅನ್ನವನ್ನು ಮಂಗಗಳಿಗೆ ಆಹಾರದ ರೂಪದಲ್ಲಿ ಹಾಗೂ ಪಾರ್ವತಿ ದೇವಾಲಯ ದಲ್ಲಿ ಎರಡು ಕೆ.ಜಿ.ಅಕ್ಕಿಯ ನೈವೇದ್ಯ ಪ್ರಸಾದವನ್ನು ಇಲ್ಲಿರುವ ಮಂಗಗಳಿಗೆ ನೀಡುತ್ತಾರೆ.
ಆದರೆ ಕೆಳಗೆ ತೀರ್ಥಬಾವಿಯ ಬಳಿ ಇರುವ ಮಂಗಗಳಿಗೆ ಈ ಪ್ರಸಾದ ಸಿಗುವುದಿಲ್ಲ… ಭಕ್ತರು ನೀಡಿದ ಅಹಾರವೇ ಮಂಗಗಳಿಗೆ ಜೀವನಾಧಾರ…
ಪ್ರಸ್ತುತ ಲಾಕ್ ಡೌನ್ ನಿಂದ ಭಕ್ತರಿಲ್ಲದೆ ಮಂಗಗಳ ಹೊಟ್ಟೆಗೆ ಹಿಟ್ಟಿಲ್ಲದ ಕೊರುಗುತ್ತಿದೆ.
ದೇವಾಲಯದ ಬಳಿಯಲ್ಲಿ ಇರುವ ಮಂಗಗಳಿಗೆ ದೇವಾಲಯದ ಲ್ಲಿ ನೀಡುವ ನೈವೇದ್ಯ ಪ್ರಸಾದ ಸಾಕಾಗದೆ ಭಕ್ತರು ನೀಡುವ ಆಹಾರಕ್ಕೆ ಹಾತೊರೆಯುತ್ತಿತ್ತು.
*ಮೂರು ಕುಟುಂಬ*
ದೇವಾಲಯಕ್ಕೆ ಇತಿಹಾಸವಿದ್ದಂತೆ ಇಲ್ಲಿನ ವಾನರರಿಗೂ ಅನೇಕ ವರ್ಷಗಳ ಇತಿಹಾಸವಿದೆ.
ಇಲ್ಲಿ ನೂರಾರು ಮಂಗಗಳಿದ್ದರೂ ಕೂಡ ಮೂರು ಕುಟುಂಬ ಗಳಿವೆ.
ಈಶ್ವರ ದೇವಾಲಯ ದಲ್ಲಿ ಸುಮಾರು 150 ರಿಂದ 200 ಮಂಗಗಳಿದ್ದರೆ, ಪಾರ್ವತಿ ದೇವಾಲಯ ದಲ್ಲಿ 100 ರಿಂದ 150 ಮಂಗಗಳು ಮತ್ತು ಕೆಳಗೆ ಕಾರಿಂಜ ತೀರ್ಥ ಬಾವಿಯ ಸಮೀಪ 50 ರಿಂದ 100ಮಂಗಗಳು ವಾಸಮಾಡುತ್ತಿವೆ.
ಈ ಮೂರು ಕುಟುಂಬಗಳು ಅದರ ಗಡಿ ದಾಟಿ ಮುಂದೆ ಹೋಗುವಂತಿಲ್ಲ, ಹೋದರೆ ಗಲಾಟೆ ಅಗುತ್ತದೆ.
ಇಲ್ಲಿನ ದೇವಾಲಯ ಮಂಗಗಳು ದೇವಾಲಯ ಬಿಟ್ಟು ತೋಟಕ್ಕೆ ಅಥವಾ ಕಾಡಿನಲ್ಲಿ ಹೋಗಿ ಹೊಟ್ಟೆ ತುಂಬಿಸಲು ಹೋಗುವುದಿಲ್ಲ ಎಂಬುದನ್ನು ಇಲ್ಲಿನ ಸ್ಥಳೀಯ ರು ಹೇಳುತ್ತಾರೆ.
ದಾನಿಗಳು ಅಥವಾ ಕಿಟ್ ನೀಡುವ ಸಂಘಸಂಸ್ಥೆಗಳು ಕಾರಿಂಜ ದ ವಾನರರ ಸ್ಥಿತಿ ಗತಿ ನೋಡಿ ಅದಕ್ಕೂ ಆಹಾರ ನೀಡಬೇಕಾದ ಅನಿವಾರ್ಯತೆ ಇದೆ ಎಂಬುದು ಸ್ಥಳೀಯರ ವಿನಂತಿ.