ಇತ್ತೀಚಿನ ದಿನಗಳಲ್ಲಿ *ದೈವಾರಾಧನೆಗೆ* ಸಂಬಂಧಿಸಿದಂತೆ ಕೆಲವು ವೀಡಿಯೋ ಎಡಿಟಿಂಗ್ ವೀಡಿಯೋ ತುಣುಕುಗಳನ್ನು ನಾವೆಲ್ಲರೂ ಗಮನಿಸುತ್ತಿದ್ದೇವೆ. ಮೊಬೈಲ್ ನಲ್ಲಿ ಇದಕ್ಕೆ ಸಂಬಂಧಿಸಿದ ಎಷ್ಟೋ ಆ್ಯಪ್ ಗಳು ಕೂಡ ಇವೆ.
ಹೆಚ್ಚಿನವರು ತಮ್ಮ ಕ್ರಿಯಾಶೀಲತೆಯ ಪ್ರದರ್ಶನಕ್ಕೆ ಅವುಗಳನ್ನು ಸಾಮಾಜಿಕ ಜಾಲತಾಣ ಗಳಲ್ಲಿ ಅಪ್ ಲೋಡ್ ಮಾಡುತ್ತಾರೆ. ಹೆಚ್ಚಿನವರು ಶೇರ್ ಮಾಡುತ್ತಾರೆ. ಮೂಲ ವೀಡಿಯೋ ವನ್ನು ಎಡಿಟ್ ಮಾಡಿ ಭಕ್ತಿ ಗೀತೆಗಳನ್ನು ಪೋಣಿಸುವ ಮೂಲಕ ಅವುಗಳನ್ನು ಎಡಿಟ್ ಮಾಡಲಾಗುತ್ತದೆ. ಇದು ಎಷ್ಟು ಮಟ್ಟಿಗೆ ಸರಿ?. *ದೈವಾರಾಧನೆಗೆ* ಸಂಬಂಧಿಸಿದಂತೆ ಅದರ ತಿರುಳು ಹುರುಳು ಗೊತ್ತಿಲ್ಲದವರು ಕೂಡ ವೀಡಿಯೋ ಎಡಿಟ್ ಮಾಡಲು ಶುರು ಮಾಡುತ್ತಿದ್ದಾರೆ. ಇವುಗಳಿಂದ ಕೆಲವು ಸಲ ಅವರಿಗೆ ಗೊತ್ತಿಲ್ಲದೆ ಕೆಲವು ತಪ್ಪು-ಅಪಚಾರಗಳು ಆಗುತ್ತದೆ. ಅದು ಶೇರ್ ಮಾಡುವವರಿಗೂ ಗೊತ್ತಿರುವುದಿಲ್ಲ. ಬೇರೆಯಾವುದೇ ವೀಡಿಯೋ ಎಡಿಟ್ ಮಾಡಲಿ ಪರವಾಗಿಲ್ಲ. *ದೈವಾರಾಧನೆಗೆ* ಸಂಬಂಧಿಸಿದಂತೆ ಯಾವುದೇ *ವೀಡಿಯೋ ಎಡಿಟ್* ಮಾಡುವಾಗ ಎಚ್ಚರವಿರಲಿ.
ಜನರ ಧಾರ್ಮಿಕ ಭಾವನೆಗಳನ್ನು ಕೆಣಕುವ ದುಸ್ಸಾಹಸ ಬೇಡ.
ತಾವು ಕ್ರಿಯೇಟಿವಿಟಿ ಪ್ರದರ್ಶಿಸಲು ಹೋಗಿ *ದೈವಕೋಪಕ್ಕೆ ತುತ್ತಾಗದಂತೆ ಎಚ್ಚರವಹಿಸಿ*.ನಾನು ಹೀಗೆ ಅನಿಸಿಕೆ ವ್ಯಕ್ತ ಪಡಿಸಿದ್ದಕ್ಕೆ ಯಾರೂ ಬೇಸರ ಮಾಡಬಾರದು.ಗೊತ್ತಿಲ್ಲದವರಿಗೆ ಇದು ನನ್ನ ಪ್ರೀತಿಯ ಆತ್ಮೀಯ ಸಲಹೆ. ಅದನ್ನು ಸ್ವೀಕರಿಸುವುದು ಬಿಡುವುದು ನಿಮ್ಮ ಇಚ್ಚೆ ಎಂದು ಅವರು ಸಾಮಾಜಿಕ ಜಾಲತಾಣದ ಮೂಲಕ ವಿನಂತಿಕೊಂಡಿದ್ದಾರೆ.