ಬಂಟ್ವಾಳ: ಮಾಣಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಶಂಭುಗ ಬಳಿಯ ಬಂಗುಲೆ ರಸ್ತೆಗೆ ಕಾಂಕ್ರೀಟೀಕರಣ ಕಾಮಗಾರಿ ಪಂಚಾಯತ್ ಅನುದಾನದಿಂದ ಸುಮಾರು ರೂ: 3.50 ಲಕ್ಷ ವೆಚ್ಚದಲ್ಲಿ ನಡೆದಿದ್ದು ಈ ಕಾಮಗಾರಿಯನ್ನು ಗ್ರಾಮ ಪಂಚಾಯತ್ ಅಧ್ಯಕ್ಷ ಬಾಲಕೃಷ್ಣ ಆಳ್ವ ಕೊಡಾಜೆ, ಸದಸ್ಯರುಗಳಾದ ಸುದೀಪ್ ಕುಮಾರ್ ಶೆಟ್ಟಿ, ಇಬ್ರಾಹಿಂ.ಕೆ.ಮಾಣಿ, ಮೆಲ್ವಿನ್ ಕಿಶೋರ್ ಮಾರ್ಟಿಸ್ ವೀಕ್ಷಿಸಿದರು.
ಮಾಣಿ ಗ್ರಾಮ ಪಂಚಾಯತ್ ವ್ಯಾಪ್ತಿಯ *ಸೂರಿಕುಮೇರು ಬದ್ರಿಯಾ ಗ್ರೌಂಡ್ ರಸ್ತೆ*(5 ಲಕ್ಷ) ಮತ್ತು *ಅಂಗನವಾಡಿ ಬಳಿಯ ರಸ್ತೆ*(1.5 ಲಕ್ಷ) ಗಳನ್ನು ಕೂಡಾ ಕಾಂಕ್ರೀಟೀಕರಣಗೊಳಿಸಲಾಗಿದ್ದು ಎರಡು ಕಾಮಗಾರಿಗಳ ವೀಕ್ಷಣೆ ಕಾರ್ಯನಡೆಸಿದರು.