ಮಂಗಳೂರು: ಕೊರೋನ ಸೋಂಕು ತಡೆಗಟ್ಟಲು ಅಧಿಕ ಸಂಖ್ಯೆಯಲ್ಲಿ ಜನರು ಸೇರ್ಪಡೆಗೊಳ್ಳುವುದನ್ನು ತಡೆಯುವ ಭಾಗವಾಗಿ ದ.ಕ.ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ.ವಿ. ಹೊಸ ಆದೇಶವೊಂದನ್ನು ಹೊರಡಿಸಿದ್ದಾರೆ. ಅದರಂತೆ ಮೈಕ್ರೋ ಫೈನಾನ್ಸ್‌ಗಳು, ಸಹಕಾರಿ ಸಂಘಗಳು, ಇತರೆ ಹಣಕಾಸು ಸಂಸ್ಥೆಗಳು ಸಾಲ ಮರುಪಾವತಿಗಾಗಿ ಸಾಲಗಾರರನ್ನು ಒತ್ತಾಯಿಸುವಂತಿಲ್ಲ ಎಂದು ತಿಳಿಸಿದ್ದಾರೆ. ಅಲ್ಲದೆ ಅದರ ಮೇಲ್ವಿಚಾರಣೆಗಾಗಿ ಇಬ್ಬರು ನೋಡಲ್ ಅಧಿಕಾರಿಗಳನ್ನೂ ಕೂಡ ಜಿಲ್ಲಾಧಿಕಾರಿ ನೇಮಿಸಿದ್ದಾರೆ.
ಯಾವುದೇ ಮೈಕ್ರೋ ಫೈನಾನ್ಸ್, ಸಹಕಾರಿ ಸಂಘಗಳು, ಇತರೆ ಹಣಕಾಸು ಸಂಸ್ಥೆಗಳವರು ಸಾಲ ಮರುಪಾವತಿಸಲು ಒತ್ತಡ ಹಾಕಿದರೆ ಲೀಡ್ ಬ್ಯಾಂಕ್ ಮ್ಯಾನೇಜರ್ ಪ್ರವೀಣ್ (9449860916), ಸಹಕಾರಿ ಸಂಘಗಳ ಉಪನಿಬಂಧಕ ಪ್ರವೀಣ್ ಬಿ.ನಾಯಕ್ (9448633338)ಅವರನ್ನು ಸಂಪರ್ಕಿಸಿ ದೂರು ನೀಡಬಹುದಾಗಿದೆ.