ಬಂಟ್ವಾಳ: ಶಾಸಕರ ವೈಯಕ್ತಿಕ ನೆಲೆಯಲ್ಲಿ ಒಟ್ಟು 10 ಲಕ್ಷ ಮೌಲ್ಯದ 25 ಆಕ್ಸಿಜನ್ ಸಿಲಿಂಡರ್ ಹಾಗೂ ಐಸಿಯು ಗೆ ಜನಕ್ ಬ್ರಾಂಡ್ ನ ಪೈ ಪಂಕ್ಸನ್ ಅತ್ಯಾಧುನಿಕ ಸೌಲಭ್ಯವಿರುವ 5 ಬೆಡ್ ಗಳನ್ನು ಬುಧವಾರ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಅವರು ಬಂಟ್ವಾಳ ಸರಕಾರಿ ಆಸ್ಪತ್ರೆಗೆ ಹಸ್ತಾಂತರಿಸಿದರು.
ಇದೇ ಸಂದರ್ಭದಲ್ಲಿ ಕೋವಿಡ್ ಸೊಂಕಿತರಿಗೆ ಜಿಲ್ಲಾಡಳಿದಿಂದ ನೀಡಲ್ಪಡುವ ಮೆಡಿಕಲ್ ಕಿಟ್ ಗಳನ್ನು ಆಶಾಕಾರ್ಯಕರ್ತೆಯರಿಗೆ ನೀಡಿದರು.
ಬಳಿಕ ಮಾತನಾಡಿದ ಅವರು ಜಿಲ್ಲಾಡಳಿತವು ಕೊರೊನಾ ಸೊಂಕಿತರಿಗೆ, ಒಂದೇ ಕಿಟ್ ನೊಳಗೆ ಎಲ್ಲಾ ಸೌಕರ್ಯ ನೀಡುವ 10 ಸಾವಿರ ಕಿಟ್ ಗಳನ್ನು ಸಿದ್ದಪಡಿಸಿದೆ.
ಅದರಲ್ಲಿ 349 ಆಕ್ಸೀಮೀಟರ, ಬಂಟ್ವಾಳ ಕ್ಕೆ 1ಸಾವಿರ ಸೊಂಕಿತರ ಕಿಟ್ ಗಳು ಬಂಟ್ವಾಳ ಕ್ಕೆ ಬಂದಿವೆ.
ಸದ್ಯ ದಲ್ಲೆ ಅದನ್ನು ಆಶಾಕಾರ್ಯಕರ್ತೆಯರು ಮನೆಮನೆಗೆ ತಲುಪಿಸಲಿದ್ದಾರೆ.
ಈಗಾಗಲೇ ಬಂಟ್ವಾಳ ತಾಲೂಕಿನಲ್ಲಿ ಎರಡು ಆಕ್ಸಿಜನ್ ಘಟಕಗಳ ಕೆಲಸ ಪ್ರಗತಿಯಲ್ಲಿದ್ದು, ಬಂಟ್ವಾಳ ಸರಕಾರಿ ಆಸ್ಪ ತ್ರೆಗೆ ಕೊಯಮುತ್ತೂರಿನಿಂದ ಆಕ್ಸಿಜನ್ ಘಟಕ ಆಗಮಿಸುತ್ತಿದೆ.
ಬಂಟ್ವಾಳ ಸಮುದಾಯ ಆರೊಗ್ಯ ಕೇಂದ್ರದಲ್ಲಿ ಆಕ್ಸಿಜನ್ ಘಟಕ ನಿರ್ಮಾಣದ ಕಾಮಗಾರಿ ವೀಕ್ಷಣೆ ನಡೆಸಿದರು.
ಈ ಸಂದರ್ಭದಲ್ಲಿ ಜಿ.ಪಂ.ಸಿ.ಒ.ಕುಮಾರ್, ತಹಶಿಲ್ದಾರ್ ರಶ್ಮಿ. ಎಸ್.ಆರ್, ಬಂಟ್ವಾಳ ತಾಲೂಕು ಆರೋಗ್ಯ ಅಧಿಕಾರಿ ದೀಪಾ ಪ್ರಭು, ಸಮುದಾಯ ಆರೋಗ್ಯ ಕೇಂದ್ರ ದ ಪ್ರಭಾರ ವೈದ್ಯಾಧಿಕಾರಿ ಡಾ! ಸೌಮ್ಯ, ತಾ.ಪಂ.ಇ.ಒ.ರಾಜಣ್ಣ, ಬೂಡ ಆಧ್ಯಕ್ಷ ದೇವದಾಸ್ ಶೆಟ್ಟಿ, ಶಾಸಕರ ವಾರ್ ರೂಮ್ ಪ್ರಮುಖರಾದ ದೇವಪ್ಪ ಪೂಜಾರಿ, ಡೊಂಬಯ್ಯ ಅರಳ, ಕೇಶವ ದೈಪಲ ಉಪಸ್ಥಿತರಿದ್ದರು.