ದೇಶದ ಜನಮೆಚ್ಚಿದ ಪ್ರಧಾನಿ *ನರೇಂದ್ರ ಮೋದಿ* ಯವರ ನೇತೃತ್ವದ ಬಿಜೆಪಿ ಸರಕಾರವು ನಿರಂತರ 7 ವರ್ಷಗಳನ್ನು ಪೋರೈಸಿದ ಪ್ರಯುಕ್ತ ರಾಜ್ಯ ಬಿಜೆಪಿಯು ಕೊರೋನದ ಸಂಕಷ್ಟ ಕಾಲದಲ್ಲಿ ಈ ದಿನವನ್ನು *ಸೇವಾ ಹೀ ಸಂಘಟನ್* ಎಂಬ ದ್ಯೇಯವಾಕ್ಯದಡಿ ಸೇವಾದಿನವಾಗಿ ಆಚರಿಸುವಂತೆ ಕರೆ ನೀಡಿತ್ತು.
ಅ ಪ್ರಯುಕ್ತ *ಗೋಳ್ತಮಜಲು ಬಿಜೆಪಿ* ಕಾರ್ಯಕರ್ತರು ಮಾಜಿ ಶಾಸಕ ಪಧ್ಮನಾಭ ಕೊಟ್ಟಾರಿಯವರ ಮಾರ್ಗದರ್ಶನದಲ್ಲಿ ಕಲ್ಲಡ್ಕದ *ಮೋಕ್ಷದಾಮ* ಕ್ಕೆ ಅಂತ್ಯ ಸಂಸ್ಕಾರಕ್ಕೆ ಅನುಕೂಲವಾಗುವಂತೆ ಕಟ್ಟಿಗೆ ಕಡಿದು ರುದ್ರಭೂಮಿಗೆ ತಲುಪಿಸಿದರು.
ಈ ಸಮಯ ಕ್ಷೇತ್ರ ಬಿಜೆಪಿ ಉಪಾಧ್ಯಕ್ಷರಾದ ವಜ್ರನಾಥ ಕಲ್ಲಡ್ಕ, ಗೋಳ್ತಮಜಲು ಪಂಚಾಯತ್ ಅಧ್ಯಕ್ಷರಾದ ಅಭಿಷೇಕ್ ಶೆಟ್ಟಿ, ಮಹಿಳಾಮೋರ್ಚ ಉಪಾಧ್ಯಕ್ಷೆ ಲಖಿತ ಶೆಟ್ಟಿ, ಸಂಘಟನೆಯ ಪ್ರಮುಖರಾದ ರತ್ನಾಕರ ಶೆಟ್ಟಿ, ಗೋಪಾಲ ಪ್ರಭು ಉಪಸ್ಥಿತರಿದ್ದರು.