ಬಂಟ್ವಾಳ: ಕೊರೋನ ಸೋಂಕು ಕಡಿವಾಣಕ್ಕೆ ರಾಜ್ಯದಲ್ಲಿ ಲಾಕ್ ಡೌನ್ ಜಾರಿಯಲ್ಲಿರುವ ಈ ಸಮಯದಲ್ಲಿ ಅಪರಿಚಿತ ವ್ಯಕ್ತಿಗಳಿಬ್ಬರು ಅನುಮಾನಾಸ್ಪದವಾಗಿ ಅಕ್ಟಿವಾ ಸ್ಕೂಟರ್ ನಲ್ಲಿ ತಿರುಗಾಡಿ ಕಳ್ಳತನಕ್ಕೆ ಹೊಂಚು ಹಾಕುತ್ತಿದ್ದ ಘಟನೆ ನಿನ್ನೆ ರಾತ್ರಿ ವೇಳೆ ಬಂಟ್ವಾಳ ತಾಲೂಕಿನ ಮಾಣಿ ಗ್ರಾಮದ ಕಾಪಿಕಾಡುವಿನಲ್ಲಿ ನಡೆದಿದೆ.
ವಿಟ್ಲ ಪೋಲೀಸ್ ಠಾಣೆಯ ಸರಹದ್ದಿನಲ್ಲಿ ಬರುವ ಮಾಣಿಯಲ್ಲಿ ಪೋಲೀಸ್ ಹೊರಠಾಣೆ ನಿರ್ಮಾಣ ಮಾಡಲು ಸಾರ್ವಜನಿಕರು ಒತ್ತಾಯ ಮಾಡಿದ್ದಾರೆ.
ಎರಡು ಹೆದ್ದಾರಿಗಳು ಸೇರುವ ಮಾಣಿ ಜಂಕ್ಷನ್ ನಲ್ಲಿ ಇತ್ತೀಚಿನ ದಿನಗಳಲ್ಲಿ ಕಳ್ಳ ಕಾಕರ ಕಾಟ ಜಾಸ್ತಿ ಆಗಿದೆ. ಗೂಡಂಗಡಿಗಳಲ್ಲಿ ಸಣ್ಣ ಪುಟ್ಟ ಕಳ್ಳತನ, ವಂಚನೆ ಪ್ರಕರಣ ಈ ಹಿಂದಿನಿಂದಲೂ ಆಗುತ್ತಿರುತ್ತದೆ. ಆದರೆ ಸಣ್ಣ ಪುಟ್ಟ ಕಳ್ಳತನ ಪೋಲೀಸ್ ಠಾಣೆಯ ಮೆಟ್ಟಲು ಹತ್ತುವುದೇ ಇಲ್ಲ. ಈ ಒಂದು ಸಾರ್ವಜನಿಕರ ದೌರ್ಬಲ್ಯವೇ ಕಳ್ಳಕಾಕರಿಗೆ ವರದಾನವಾಗಿದೆ ಎಂದು ತಿಳಿದು ಬಂದಿದೆ.
ಇನ್ನು ಮುಂದೆ ಈ ಬಗ್ಗೆ ಪೋಲೀಸರು ಯಾವ ರೀತಿಯಲ್ಲಿ ಕಾರ್ಯನಿರ್ವಹಿಸುತ್ತಾರೆ ಎಂಬುದು ಸದ್ಯದ ಕುತೂಹಲ. ಆದರೂ ಸಾರ್ವಜನಿಕರು ಬಹಳ ಎಚ್ಚರಿಕೆಯಿಂದ ಇರುವುದು ಉತ್ತಮ ಎನ್ನಲಾಗಿದೆ.
ಸ್ವಾತಂತ್ರ್ಯ ಪೂರ್ವದಲ್ಲಿ ಮಾಣಿಯಲ್ಲಿ ಪೋಲಿಸ್ ಚೌಕಿ ಇತ್ತು. ಕೆಲವು ದಶಕಗಳ ಹಿಂದೆ ಕೂಡ ಇತ್ತು. ಆದರೆ ಈಗ ಇಲ್ಲ. ಕಾರಣ ಯಾವುದೆಂದು ತಿಳಿದು ಬಂದಿಲ್ಲ. ರಾಜಕೀಯ ನಾಯಕರ ಇಚ್ಚಾ ಶಕ್ತಿಯ ಕೊರತೆಯಿಂದ ಮಾಣಿಯಲ್ಲಿ ಪೋಲಿಸ್ ಔಟ್ ಪೋಸ್ಟ್ ನಡೆಯಲಿಲ್ಲ ಎಂದು ಸಾರ್ವಜನಿಕರು ದೂರಿಕೊಂಡಿದ್ದಾರೆ.