Wednesday, October 18, 2023

ದ. ಕ. 7 ಆಸ್ಪತ್ರೆ ರಾಷ್ಟ್ರ ಮಟ್ಟಕ್ಕೆ ನಾಮ ನಿರ್ದೇಶನ

Must read

ಮಂಗಳೂರು: ಗುಣಮಟ್ಟದ ಸೇವೆಗಾಗಿ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳ ನಾಲ್ಕು ಪ್ರಾಥಮಿಕ ಆರೋಗ್ಯ ಕೇಂದ್ರಗಳ ಸಹಿತ ಒಟ್ಟು 13 ಸರಕಾರಿ ಆಸ್ಪತ್ರೆಗಳು ಕೇಂದ್ರ ಸರಕಾರವು ರಾಷ್ಟ್ರಮಟ್ಟದಲ್ಲಿ ನೀಡುವ “ಎನ್‌ಕ್ಯುಎಎಸ್‌’ ಪ್ರಮಾಣಪತ್ರಕ್ಕೆ ನಾಮನಿರ್ದೇಶನಗೊಂಡಿವೆ.

ಗುಣಮಟ್ಟದ ಸೇವೆ, ನೈರ್ಮಲ್ಯ, ದಾಖಲಾತಿಗಳ ನಿರ್ವಹಣೆ ಮೊದಲಾದ ರಾಷ್ಟ್ರೀಯ ಮಾನದಂಡಗಳ ಆಧಾರದಲ್ಲಿ ಮೊದಲು ರಾಜ್ಯ ಮಟ್ಟದಲ್ಲಿ ಆಯ್ಕೆ ನಡೆಯುತ್ತದೆ.

ಅನಂತರ ರಾಷ್ಟ್ರಮಟ್ಟಕ್ಕೆ ನಾಮನಿರ್ದೇಶನಗೊಂಡು ಆಯ್ಕೆಯಾಗುತ್ತವೆ.

ಏನಿದು ಎನ್‌ಕ್ಯುಎಎಸ್‌?

ಎನ್‌ಕ್ಯುಎಎಸ್‌ ಎಂಬುದು ಗುಣಮಟ್ಟ ಪ್ರಮಾಣೀಕರಣ ಮಾನದಂಡ. ಆರೋಗ್ಯ ಸೇವಾ ಸಂಸ್ಥಾಪನೆಗಳ ಗುಣಮಟ್ಟಕ್ಕಾಗಿ ವಿವಿಧ ಹಂತಗಳಲ್ಲಿ ನೀಡಲಾಗುತ್ತದೆ. “ಎನ್‌ಕ್ಯುಎಎಸ್‌’ಗೆ ನಾಮ ನಿರ್ದೇಶನ ಸಂದರ್ಭದಲ್ಲಿ ವಿವಿಧ ಹಂತಗಳಲ್ಲಿ ಒಟ್ಟು ಆರೋಗ್ಯ ಸೇವಾ ಕೇಂದ್ರಗಳ ಶೇ. 10ನ್ನು ನಾಮನಿರ್ದೇಶನ ಮಾಡಲಾಗುತ್ತದೆ. ನಾಮನಿರ್ದೇಶನಗೊಂಡ ಆಸ್ಪತ್ರೆ/ ಕೇಂದ್ರ ಗಳು ಒಮ್ಮೆ ಈ ಪ್ರಮಾಣೀಕರಣ ಪಡೆಯಲು ವಿಫ‌ಲವಾದರೆ ಗುಣಮಟ್ಟ ವೃದ್ಧಿಸಿಕೊಳ್ಳಲು ಸಮಯ ನೀಡಲಾಗುತ್ತದೆ. ಪ್ರಮಾಣೀಕರಣ ಪಡೆದಾಗ ಪ್ರಶಸ್ತಿನಿಧಿ ದೊರಕುತ್ತದೆ.

 

ಯಾವೆಲ್ಲ ಕೇಂದ್ರಗಳು?

ದಕ್ಷಿಣ ಕನ್ನಡ ಜಿಲ್ಲೆ

- ವೆನ್ಲಾಕ್ ಜಿಲ್ಲಾಸ್ಪತ್ರೆಯ 10 ವಿಭಾಗಗಳು

- ಲೇಡಿಗೋಶನ್‌ ಆಸ್ಪತ್ರೆಯ 6 ವಿಭಾಗಗಳು

- ಮೂಲ್ಕಿ ಸಮುದಾಯ ಆರೋಗ್ಯ ಕೇಂದ್ರ (ಸಿಎಚ್‌ಸಿ)

- ಮೂಡುಬಿದಿರೆ ಸಿಎಚ್‌ಸಿ

- ಶಿರ್ತಾಡಿ ಪ್ರಾಥಮಿಕ ಆರೋಗ್ಯ ಕೇಂದ್ರ (ಪಿಎಚ್‌ಸಿ)

- ಜೆಪ್ಪು ನಗರ ಪ್ರಾ.ಆ. ಕೇಂದ್ರ (ಯುಪಿಎಚ್‌ಸಿ)

- ನಾರಾವಿ ಪಿಎಚ್‌ಸಿ

 

ಉಡುಪಿ ಜಿಲ್ಲೆ

- ಉಡುಪಿ ಅಜ್ಜರಕಾಡು ಜಿಲ್ಲಾಸ್ಪತ್ರೆ

- ಮಹಿಳೆ ಮತ್ತು ಮಕ್ಕಳ ಆಸ್ಪತ್ರೆಯ ವಿಭಾಗಗಳು

- ಶಂಕರನಾರಾಯಣ ಪ್ರಾ.ಆ. ಕೇಂದ್ರ

- ಬ್ರಹ್ಮಾವರ ಸಿಎಚ್‌ಸಿ

- ಕೋಟ ಸಿಎಚ್‌ಸಿ

More articles

Latest article