Friday, April 5, 2024

*ಹಡೀಲು ಗದ್ದೆಗಳಲ್ಲಿ ಭತ್ತದ ಕೃಷಿ ಉತ್ತೇಜನಕ್ಕೆ ಸಿದ್ದಕಟ್ಟೆ ಸಹಕಾರಿ ಸಂಘದಿಂದ ನೆರವು :ಪ್ರಭಾಕರ ಪ್ರಭು* ಸಂಘದ ವ್ಯಾಪ್ತಿಯ 49 ಎಕರೆ ಹಡೀಲು ಜಮೀನು ಪರಿವರ್ತನೆಗೆ ಯೋಜನೆ  

ಬಂಟ್ವಾಳ: ಹಡೀಲು ಗದ್ದೆಗಳಲ್ಲಿ ಭತ್ತದ ಕೃಷಿ ಉತ್ತೇಜನಕ್ಕೆ ಸಿದ್ದಕಟ್ಟೆ ಸಹಕಾರಿ ಸಂಘದಿಂದ ಸಕಲ ರೀತಿಯ ನೆರವು ನೀಡುವುದಾಗಿ ಸಂಘದ ಅಧ್ಯಕ್ಷ ಪ್ರಭಾಕರ ಪ್ರಭು ಅವರು ಹೇಳಿದ್ದಾರೆ.

ಅವರು ಸಿದ್ದಕಟ್ಟೆ ಸಹಕಾರಿ ವ್ಯವಸಾಯಿಕ ಸಂಘದ ಆಡಳಿತ ಮಂಡಳಿ ಸಭೆಯಲ್ಲಿ ನಿರ್ಣಯ ಕೈಗೊಂಡಿರುವುದಾಗಿ ತಿಳಿಸಿದ್ದಾರೆ.

ಬಂಟ್ವಾಳ  ಶಾಸಕ ರಾಜೇಶ್ ನಾಕ್ ಉಳಿಪಾಡಿಗುತ್ತು ಅವರ ಪರಿಕಲ್ಪನೆ ಮೇರೆಗೆ ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವರು, ಸಂಸದರು ಹಾಗೂ ಕರಾವಳಿ ಜಿಲ್ಲೆಗಳ ಎಲ್ಲ ಶಾಸಕರ ಮಹತ್ವಾಕಾಂಕ್ಷೆಯ ಯೋಜನೆಯಾದ ಹಡಿಲು ಬಿಟ್ಟ ಗದ್ದೆಗಳಿಗೆ  ಕಾಯಕಲ್ಪ ನೀಡುವ  ಯೋಜನೆ ಈಗಾಗಲೇ  ಕರಾವಳಿ ಜಿಲ್ಲೆಗಳಲ್ಲಿ ಸಮೀಕ್ಷೆ ಕಾರ್ಯವನ್ನು  ಕೃಷಿ ಇಲಾಖೆ, ಕಂದಾಯ ಇಲಾಖೆ, ಗ್ರಾಮ ಪಂಚಾಯತ್ ಇಲಾಖೆಗಳ  ಮೂಲಕ  ಮುಗಿದಿದ್ದು ಪ್ರಗತಿ ಪ್ರಾರಂಭವಾಗಿದ್ದು ದಕ್ಷಿಣ ಕನ್ನಡ ಜಿಲ್ಲೆಯಲ್ಲಿಯೂ ವ್ಯಾಪಕ ಮೆಚ್ಚುಗೆಯೊಂದಿಗೆ ಬೆಂಬಲ ವ್ಯಕ್ತವಾಗಿದೆ.

*ಸಂಘದ ಯೋಜನೆ*: ಈ  ಹಿನ್ನೆಲೆಯಲ್ಲಿ ಭತ್ತ ಬೆಳೆಗೆ  ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಸಿದ್ದಕಟ್ಟೆ ಸಹಕಾರಿ  ವ್ಯವಸಾಯಿಕ  ಸಂಘದ  ಆಡಳಿತ ಮಂಡಳಿ ಮುಂದೆ ಬಂದಿದ್ದು,  ಸಂಘವು ತನ್ನ ಕಾರ್ಯವ್ಯಾಪ್ತಿಯ  8 ಗ್ರಾಮಗಳಲ್ಲಿನ   ಹಡೀಲು ಬಿದ್ದ ಒಟ್ಟು  ಸುಮಾರು 49  ಎಕರೆ ಜಮೀನುಗಳ ಗದ್ದೆಗಳನ್ನು   ಭತ್ತದ ಕೃಷಿ ಮಾಡುವ ಮೂಲಕ ಕೃಷಿ  ಜಮೀನುಗಳನ್ನಾಗಿ ಪರಿವರ್ತನೆ ಮಾಡುವವರಿಗೆ    ಸಂಪೂರ್ಣ ನೆರವು ನೀಡಲಿದೆ. ಈ ಜಮೀನುದಾರರಿಗೆ, ಭತ್ತ  ಕೃಷಿ  ಕೈಗೊಳ್ಳುವವರಿಗೆ ಕೃಷಿ  ಇಲಾಖೆಯಿಂದ  ರಾಷ್ಟ್ರೀಯ  ಆಹಾರ  ಭದ್ರತಾ ಯೋಜನೆಯಡಿ  ನೇರ  ನಗದು ಪ್ರೋತ್ಸಾಹ ಧನ ವರ್ಗಾವಣೆ, ಸಹಾಯಧನದಲ್ಲಿ  ಬಿತ್ತನೆ ಬೀಜ ವಿತರಣೆ,ಸಂಘದ  ವತಿಯಿಂದ ಬಾಡಿಗೆ ಸೇವಾ ಕೇಂದ್ರದ ಮೂಲಕ ಉಳುಮೆ ಯಂತ್ರದ ರಿಯಾಯಿತಿ ದರದಲ್ಲಿ ಸಹಕಾರ, ಕೃಷಿ  ಪರಿಣಿತರಿಂದ  ಆಧುನಿಕ ಭತ್ತ ಕೃಷಿ ಬಗ್ಗೆ ಮಾರ್ಗದರ್ಶನ ನೀಡಲು ನಿವೃತ್ತ ಕೃಷಿ  ಅಧಿಕಾರಿ  ನಾರಾಯಣ ನಾಯ್ಕ್ ಅವರನ್ನು ಗೌರವ ಸಲಹೆಗಾರರಾಗಿ ನೇಮಿಸಿದ್ದು,ದಿಶಾ ಟ್ರಸ್ಟ್. ಬಿ.ಸಿರೋಡ್, ಕೈಕಂಬ ಇವರ ಸಹಯೋಗದೊಂದಿಗೆ ರೈತರಿಗೆ ಸಹಕಾರ ನೀಡಲು  ಸಂಘ ಯೋಜನೆ ಹೊಂದಿದೆ.

*ರೈತರ ಮನವೊಲಿಕೆ*

ಹಡಿಲು ಬಿಟ್ಟ ಜಮೀನುದಾರರು ಆಸಕ್ತಿ  ತೋರದಿದ್ದಲ್ಲಿ ಅವರ ಮನವೊಲಿಸಿ, ಆಸಕ್ತ ರಿಂದ  ಗೇಣಿ ರೂಪದಲ್ಲಿ  ಸಾಗುವಳಿ ಮಾಡಲು  ಪ್ರೇರೇಪಿಸಿ ಆರ್ಥಿಕವಾಗಿ ಸಹಾಯ ಒದಗಿಸಲಾಗುವುದು. ಉಳಿದಂತೆ  ರಸಗೊಬ್ಬರ ಪೂರೈಕೆ, ಇನ್ನಿತರ ಎಲ್ಲ ರೀತಿಯಲ್ಲಿ  ಆರ್ಥಿಕ ಮತ್ತು ಇತರನೆರವು ನೀಡಲು  ಸಂಘವು  ತೀರ್ಮಾನಿಸಿದೆ.

ಸಭೆಯಲ್ಲಿ  ಸಂಘದ  ಉಪಾಧ್ಯಕ್ಷ ಸತೀಶ್  ಪೂಜಾರಿ  ಹಲಕ್ಕೆ, ನಿರ್ದೇಶಕರಾದ  ಸಂದೇಶ್  ಶೆಟ್ಟಿ, ರಾಜೇಶ್ ಶೆಟ್ಟಿ ಕೊನೆರಬೆಟ್ಟು, ಹರೀಶ್ ಆಚಾರ್ಯ  ರಾಯಿ, ದಿನೇಶ್ ಪೂಜಾರಿ, ಉಮೇಶ್  ಗೌಡ, ದೇವರಾಜ್  ಸಾಲ್ಯಾನ್, ವೀರಪ್ಪ  ಪರವ, ಜಾರಪ್ಪ  ನಾಯ್ಕ, ಮಂದಾರತಿ  ಶೆಟ್ಟಿ, ಮಾಧವ ಶೆಟ್ಟಿಗಾರ್,ಮುಖ್ಯ ಕಾರ್ಯನಿರ್ವಾಹಣಾಧಿಕಾರಿ  ಆರತಿ  ಶೆಟ್ಟಿ ಅವರು  ಉಪಸ್ಥಿತರಿದ್ದರು.

More from the blog

ಸರ್ಕಾರದ ಕೋವಿ ಠೇವಣಿ ಕ್ರಮ: ಪರವಾನಿಗೆ ಪಡೆದ ರೈತರಿಂದ ಚುನಾವಣೆ ಬಹಿಷ್ಕಾರ 

ವಿಟ್ಲ: ಕರ್ನಾಟಕ ರಾಜ್ಯ ರೈತ ಸಂಘ ಹಸಿರುಸೇನೆಯ ದ.ಕ.ಜಿಲ್ಲಾ ಸಮಿತಿ ಮತ್ತು ಕೋವಿ ಪರವಾನಿಗೆ ಪಡೆದ ರೈತ ಬಳಕೆದಾರರ ಸಂಘವು ಈ ಬಾರಿ ಚುನಾವಣೆ ಬಹಿಷ್ಕರಿಸುತ್ತದೆ ಎಂದು ರೈತ ಸಂಘದ ಜಿಲ್ಲಾಧ್ಯಕ್ಷ ಶ್ರೀಧರ...

ಟ್ರಾಫಿಕ್ ಪೊಲೀಸ್ ಠಾಣೆಯ ಕಾಮಗಾರಿಯನ್ನು ಪೊಲೀಸ್ ಹೌಸಿಂಗ್ ಕಾರ್ಪೋರೇಸನ್ ಎಡಿಜಿಪಿ ರಾಮಚಂದ್ರರಾವ್ ವೀಕ್ಷಣೆ

ಬಂಟ್ವಾಳ; ಬಿಸಿರೋಡಿನ ಪಾಣೆಮಂಗಳೂರಿನಲ್ಲಿ ಅಂದಾಜು ರೂ.3.18 ಕೋಟಿ ವೆಚ್ಚದಲ್ಲಿ ನೂತನವಾಗಿ ನಿರ್ಮಾಣವಾಗುತ್ತಿರುವ ಟ್ರಾಫಿಕ್ ಪೋಲೀಸ್ ಠಾಣೆಯ ಕಾಮಗಾರಿಯನ್ನು ಪೋಲಿಸ್ ಹೌಸಿಂಗ್ ಕಾರ್ಪೋರೇಸನ್ ಎಡಿಜಿಪಿ ರಾಮಚಂದ್ರರಾವ್ ವೀಕ್ಷಣೆ ನಡೆಸಿದರು. ಉತ್ತಮ ಗುಣಮಟ್ಟದಲ್ಲಿ ಠಾಣೆಯ ಕೆಲಸವನ್ನು ಮಾಡುವ...

ಸೌಜನ್ಯ ಹೋರಾಟ ಸಮಿತಿಯಿಂದ ನೋಟ ಅಭಿಯಾನ

ಮಂಗಳೂರು: ರಾಜಕೀಯ ಪಕ್ಷಗಳು ಮತ್ತು ನ್ಯಾಯಾಂಗ ವ್ಯವಸ್ಥೆಯ ಗಮನ ಸೆಳೆಯುವ ಉದ್ದೇಶದಿಂದ ಸೌಜನ್ಯ ಪರ ಹೋರಾಟ ಸಮಿತಿ ವತಿಯಿಂದ ಮುಂಬರುವ‌ ಲೋಕಸಭಾ ಚುನಾವಣೆಯಲ್ಲಿ ನೋಟಕ್ಕೆ ಮತ ಚಲಾಯಿಸಲು ಜನ ಸಾಮಾನ್ಯರನ್ನು ಪ್ರೇರೇಪಿಸಲು ನೋಟ...

ಕಲ್ಲಡ್ಕ ಶ್ರೀರಾಮ ಭಜನಾ ಮಂದಿರಕ್ಕೆ ಲೋಕಸಭಾ ಬಿಜೆಪಿ ಅಭ್ಯರ್ಥಿ ಕ್ಯಾ.ಬ್ರಿಜೇಶ್ ಚೌಟ ಭೇಟಿ

ಬಂಟ್ವಾಳ ತಾಲೂಕಿನ ಶಕ್ತಿಕೇಂದ್ರವಾದ ಕಲ್ಲಡ್ಕ ಶ್ರೀರಾಮ ಭಜನಾ ಮಂದಿರಕ್ಕೆ ಲೋಕಸಭಾ ಬಿಜೆಪಿ ಅಭ್ಯರ್ಥಿ ಕ್ಯಾ.ಬ್ರಿಜೇಶ್ ಚೌಟ ಆಗಮಿಸಿ ಪ್ರಾರ್ಥನೆ ಸಲ್ಲಿಸಿ ಪ್ರಸಾದ ಸ್ವೀಕರಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಕಲ್ಲಡ್ಕ ಡಾ| ಪ್ರಭಾಕರ್ ಭಟ್ ಬಿಜೆಪಿ...