ಬಂಟ್ವಾಳ: ಕೋವಿಡ್ ನಿಯಂತ್ರಣ ಹಿನ್ನೆಲೆಯಲ್ಲಿ ಮನೆ ಮನೆಗೆ ಮೊಬೈಲ್ ತಂಡಗಳು ತೆರಳಿ ಸ್ವಾಬ್ ಕಲೆಕ್ಷನ್‌ಗೆ ಸಿದ್ಧತೆ ಮಾಡುತ್ತಿದ್ದು, ಈ ನಿಟ್ಟಿನಲ್ಲಿ ೬ ತಂಡಗಳು ಕೆಲಸ ಮಾಡುತ್ತಿದೆ. ನಾಲ್ಕೈದು ಗ್ರಾ.ಪಂ.ಗಳನ್ನು ಸೇರಿಸಿಕೊಂಡು ವಾಹನದ ವ್ಯವಸ್ಥೆ ಮಾಡುವುದಕ್ಕೆ ಸೂಚನೆ ನೀಡಲಾಗಿದೆ. ಜಿಲ್ಲಾ ಲ್ಯಾಬ್‌ಗೆ ದಿನಕ್ಕೆ ೨ ಬಾರಿ ಸ್ವಾಬ್ ತಲುಪುವ ನಿಟ್ಟಿನಲ್ಲೂ ವ್ಯವಸ್ಥೆಗಳನ್ನು ಮಾಡಲಾಗಿದೆ ಎಂದು ಜಿ.ಪಂ.ಸಿಇಒ ಡಾ| ಕುಮಾರ್ ಹೇಳಿದರು.
ಅವರು ಬಂಟ್ವಾಳ ನಿರೀಕ್ಷಣಾ ಮಂದಿರದಲ್ಲಿ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿ ಅವರ ನೇತೃತ್ವದಲ್ಲಿ ನಡೆದ ಅಽಕಾರಿಗಳ ಸಭೆಯ ಬಳಿಕ ಮಾಧ್ಯಮದವರಿಗೆ ಮಾಹಿತಿ ನೀಡಿದರು. ಪರೀಕ್ಷಾ ವರದಿ ಶೀಘ್ರ ನೀಡಲು ಲ್ಯಾಬ್‌ನಲ್ಲಿ ದಿನದ ಮೂರು ಶಿಪ್ಟ್ ಗಳಲ್ಲಿ ಕೆಲಸ ಮಾಡುತ್ತಿದ್ದಾರೆ. ಮಂಗಳೂರು, ಬಂಟ್ವಾಳ, ಮೂಡಬಿದಿರೆ, ಬೆಳ್ತಂಗಡಿ ತಾಲೂಕಿನ ಸ್ವಾಬ್‌ಗಳನ್ನು ಜಿಲ್ಲಾ ಲ್ಯಾಬ್‌ನಲ್ಲಿ ಪರೀಕ್ಷಿಸಿ ಕಡಬ, ಪುತ್ತೂರು, ಸುಳ್ಯ ತಾಲೂಕಿನ ಸ್ವಾಬ್‌ಗಳನ್ನು ಕೆವಿಜಿ ಲ್ಯಾಬ್‌ಗೆ ಟ್ಯಾಗ್ ಮಾಡಿದ್ದು, ಅಲ್ಲೇ ಪರೀಕ್ಷೆ ಮಾಡಲಾಗುತ್ತದೆ.
ಪರೀಕ್ಷಾ ವರದಿಯ ಮಾಹಿ ಜನರಿಗೆ ಶೀಘ್ರ ತಲುಪುವ ನಿಟ್ಟಿನಲ್ಲಿ ಪೋರ್ಟಲ್‌ನಲ್ಲಿ ಡಾಟಾ ಅಪ್‌ಲೋಡ್ ಆದ ತಕ್ಷಣ ಎಸ್‌ಎಂಎಸ್ ಹೋಗುವ ವ್ಯವಸ್ಥೆಯನ್ನೂ ಮಾಡಿದ್ದೇವೆ. ಬೆಡ್ ಮ್ಯಾನೇಜ್‌ಮೆಂಟ್‌ಗೆ ಸಂಬಂಧಿಸಿ ಮೈಸೂರು ಹಾಗೂ ದ.ಕ.ಜಿಲ್ಲೆಯಲ್ಲಿ ಮಾತ್ರ ಸಾಪ್ಟ್ ವೇರ್ ಸಿಸ್ಟಂ ಕೆಲಸ ಮಾಡುತ್ತಿದೆ.
ಬ್ಯಾಂಕ್ ಆಫ್ ಬರೋಡದ ಸಹಯೋಗದೊಂದಿಗೆ ಸುಮಾರು ೧೫ ಲಕ್ಷ ರೂ.ವೆಚ್ಚದಲ್ಲಿ ಜಿಲ್ಲೆಯ ಎಲ್ಲಾ ೨೨೩ ಗ್ರಾ.ಪಂ.ಗಳಿಗೆ ಒಂದು ಗ್ಲುಕೋಮೀಟರ್, ಬಿಪಿ ಟೆಸ್ಟ್, ೫೦೦ ಮಾಸ್ಕ್ ಗಳು ಹಾಗೂ ೫ ಲೀ.ಸ್ಯಾನಿಟೈಸರ್ ನೀಡುವ ವ್ಯವಸ್ಥೆಯಾಗಿದೆ ಎಂದರು.
ತಹಶೀಲ್ದಾರ್ ರಶ್ಮಿ ಎಸ್.ಆರ್, ತಾ.ಪಂ.ಇಒ ರಾಜಣ್ಣ, ಟಿಎಚ್‌ಒ ಡಾ| ದೀಪಾ ಪ್ರಭು, ಕ್ಷೇತ್ರ ಶಿಕ್ಷಣಾಧಿಕಾರಿ ಜ್ಞಾನೇಶ್, ಸಿಡಿಪಿಒ ಗಾಯತ್ರಿ ಕಂಬಳಿ, ತಾ.ಪಂ.ಸಹಾಯಕ ನಿರ್ದೇಶಕ ಶಿವಾನಂದ ಪೂಜಾರಿ ಉಪಸ್ಥಿತರಿದ್ದರು.