*ಕ್ಯಾಂಪ್ಕೊ ನಿಯಮಿತ ಮಂಗಳೂರು*
*ಸದಸ್ಯ ಬೆಳೆಗಾರರಿಗೆ ಸೂಚನೆ*
ದಿನಾಂಕ *24.05.2021* ನೇ ಸೋಮವಾರದಿಂದ ಮಾಣಿ ಶಾಖೆಯಲ್ಲಿ ವಾರದಲ್ಲಿ ಮೂರು ದಿನ ಖರೀದಿ ಮಾಡಲಾಗುವುದು *ಸೋಮವಾರ, ಬುಧವಾರ* ಮತ್ತು *ಶುಕ್ರವಾರ*
1.ಒಬ್ಬ ಸದಸ್ಯರಿಗೆ ವಾರಕ್ಕೆ ಗರಿಷ್ಠ 2 ಕ್ವಿಂಟಾಲ್ ಅಡಿಕೆ ಮಾರಾಟಕ್ಕೆ ಅವಕಾಶ.
2. ಪ್ರತಿದಿನ 20 ಸದಸ್ಯರಿಗೆ ಮಾತ್ರ ಅವಕಾಶ, ಕೆಳಗೆ ನೀಡಿದ ಸಂಪರ್ಕ ಸಂಖ್ಯೆಗೆ ಕರೆ ಮಾಡಿ ಟೋಕನ್ ಪಡೆದುಕೊಳ್ಳತಕ್ಕದ್ದು.
3. ಖರೀದಿ ಸಮಯ : ಬೆಳಿಗ್ಗೆ ಗಂಟೆ 7.30ರಿಂದ 9.00 ರ ವರೆಗೆ.
4. *~ಕೊಕ್ಕೊ ಖರೀದಿ ಪ್ರತಿ ಶುಕ್ರವಾರ ಮಾತ್ರ.*~
ಸಂಪರ್ಕ ಸಂಖ್ಯೆ :6366 875 032
ಸದಸ್ಯರು ಶಾಖೆಗೆ ಬರುವಾಗ ಕ್ಯಾಂಪ್ಕೊ ಸದಸ್ಯತ್ವದ ಗುರುತು ಚೀಟಿ, ಕ್ಯಾಂಪ್ಕೊ ಕಾರ್ಡು, ಪಹಣಿ ಪತ್ರವನ್ನು ತಮ್ಮೊಂದಿಗೆ ಇಟ್ಟುಕೊಳ್ಳುವುದರ ಜತೆಗೆ ಕಡ್ಡಾಯವಾಗಿ ಮುಖಗವುಸು ( ಮಾಸ್ಕ್ ) ಹಾಕಿಕೊಂಡು ಕನಿಷ್ಠ 3 ಅಡಿಗಳ ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳತಕ್ಕದ್ದು.
*ಸರಕಾರದ ಸೂಚನೆಗಳನ್ನು ಪಾಲಿಸುವುದು ನಮ್ಮೆಲ್ಲರ ಕರ್ತವ್ಯ. ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು , ಕೋವಿಡ್ ಮಾನದಂಡಗಳನ್ನು ಅನುಸರಿಸುವುದು ಪ್ರತಿಯೊಬ್ಬರ ಜವಾಬ್ದಾರಿ.