ಬಂಟ್ವಾಳ: ಬಿ.ಸಿ.ರೋಡ್ ಅಜ್ಜಿಬೆಟ್ಟು ಎಂಬಲ್ಲಿ ಎ.4ರಂದು ಯುವಕನೋರ್ವನಿಗೆ ಚೂರಿ ಇರಿದ ಪ್ರಕರಣಕ್ಕೆ ಸಂಬಂಧಿಸಿ ಇಬ್ಬರು ಆರೋಪಿಗಳನ್ನು ಬಂಧಿಸಿರುವ ಬಂಟ್ವಾಳ ನಗರ ಠಾಣಾ ಪೊಲೀಸರು ತನಿಖೆ ಮುಂದುವರಿಸಿ ಇದೀಗ ಮತ್ತೆ ನಾಲ್ವರು ಆರೋಪಿಗಳಿಗಾಗಿ ಶೋಧ ಕಾರ್ಯ ಮುಂದುವರಿಸಿದ್ದಾರೆ.
ಪಿ.ಎಪ್.ಐ. ಸಂಘಟನೆಯ ಮುಖಂಡ ಪರ್ಲಿಯಾ ನಿವಾಸಿ ಇಸಾಕ್ ಅದ್ದೇರಿ, ಪಿ.ಎಫ್.ಐ. ಸದಸ್ಯ ಪರ್ಲಿಯಾ ನಿವಾಸಿ ತೌಸಿಫ್ ಯಾನೆ ತಾಚಿ ಪರ್ಲಿಯಾ, ಪಿ.ಎಫ್.ಐ. ಸಂಘಟನೆಯ ಕಾನೂನು ಸಲಹೆಗಾರ ತಲಪಾಡಿ ಕುಮೇರು ನಿವಾಸಿ ಶಾಕೀರ್ ಪರ್ಲಿಯಾ ಹಾಗೂ ಎಸ್.ಡಿ.ಪಿ.ಐ ಜಿಲ್ಲಾ ಮುಖಂಡ ರಿಯಾಝ್ ಫರಂಗಿಪೇಟೆ ಅವರ ಭಾವ ಪಿ.ಎಫ್.ಐ. ಸಂಘಟನೆಯ ಕಾರ್ಯದರ್ಶಿ ಮುಲ್ಕಿ ನಿವಾಸಿ ಇಕ್ಬಾಲ್ ಮುಲ್ಕಿ ಅವರ ಬಂಧನಕ್ಕೆ ಬಂಟ್ವಾಳ ಪೊಲೀಸರು ಬಲೆ ಬೀಸಿದ್ದಾರೆ.
ನಾಲ್ವರು ಆರೋಪಿಗಳು ಪ್ರಸ್ತುತ ತಲೆ ಮರೆಸಿಕೊಂಡಿದ್ದು ಪೊಲೀಸರು ಶೀಘ್ರವಾಗಿ ಬಂಧನ ಮಾಡುವುದಾಗಿ ತಿಳಿಸಿದ್ದಾರೆ. ಜೊತೆಗೆ ಪತ್ತೆ ಕಾರ್ಯಕ್ಕಾಗಿ ವಿಶೇಷ ಪೊಲೀಸ್ ತಂಡದ ರಚನೆಯಾಗಿದೆ ಎಂದು ಪೋಲೀಸರು ತಿಳಿಸಿದ್ದಾರೆ.
ಮನೋಜ್ ಅವರ ಮೇಲೆ ಚೂರಿ ಇರಿತ ಮಾಡುವುದಕ್ಕೆ ಸಂಚು ರೂಪಿಸಿದಲ್ಲದೆ ಸಹಾಯ ಮಾಡಿರುವ ಆರೋಪ ಈ ನಾಲ್ವರ ಮೇಲೆ ಇದ್ದು ಆರೋಪಿಗಳ ಬಂಧನಕ್ಕೆ ಪೊಲೀಸರು ಮುಂದಾಗಿದ್ದಾರೆ.
ಬಿ.ಸಿ.ರೋಡ್ ಪರ್ಲಿಯಾ ನಿವಾಸಿಗಳಾದ ಎಸ್.ಡಿ.ಪಿ.ಐ. ಮುಖಂಡ ಎಸ್.ಎಚ್. ಶಾಹುಲ್ ಹಮೀದ್ ಆತನ ಪುತ್ರ ಸಫ್ವಾನ್ ಮತ್ತು ಸ್ನೇಹಿತ ಇಮ್ರಾನ್ ಸದ್ಯ ಪೊಲೀಸರು ಬಂಧಿಸಿದ ಆರೋಪಿಗಳು.
ಬ್ರಹ್ಮರಕೋಟ್ಲು ನಿವಾಸಿ ಮನೋಜ್ ಸಪಲ್ಯ ಎಪ್ರಿಲ್ 4ರಂದು ರಾತ್ರಿ ಬಿ.ಸಿ.ರೋಡ್ ಬಳಿಯ ಅಜ್ಜಿಬೆಟ್ಟು ಕ್ರಾಸ್ ನಲ್ಲಿ ಸ್ಕೂಟರ್ ನಲ್ಲಿ ಬಂದ ಇಬ್ಬರು ಚೂರಿಯಿಂದ ಇರಿದು ಪರಾರಿಯಾಗಿದ್ದರು.
ಚೂರಿ ಇರಿತ ಪ್ರಕರಣದ ತನಿಖೆಗೆ ಪೊಲೀಸರು ಮೂರು ತಂಡಗಳನ್ನು ರಚಿಸಿ ತನಿಖೆ ನಡೆಸಿದ್ದರು. ತನಿಖೆಯ ವೇಳೆ ಹಾದಿ ತಪ್ಪಿಸುವ ಸಲುವಾಗಿ ಸಾಮಾಜಿಕ ಜಾಲತಾಣದಲ್ಲಿ ಮನೋಜ್ ಅವರ ತೇಜೋವದೆ ಮಾಡಿ ಇಲ್ಲಸಲ್ಲದ ಆರೋಪ ಮಾಡಿ ಆತನೇ ಅಣ್ಣನ ಕೈವಾಡವಿದೆ ಎಂಬ ಸುಳ್ಳು ಸುದ್ದಿ ಪ್ರಸರಿಸಿದ್ದರು.
ಅತ್ಯಂತ ಕ್ಲಿಷ್ಟಕತವಾದ ಪ್ರಕರಣವಾಗಿದ್ದರಿಂದ ಮತ್ತು
ತನಿಖೆಯ ಹಾದಿ ತಪ್ಪದಂತೆ ಎಚ್ಚರ ವಹಿಸಿ ಆರೋಪಿಗಳ ವಶಕ್ಕೆ ಪಡೆಯುವಲ್ಲಿ ಬಂಟ್ವಾಳ ಪೋಲೀಸ್ ತಂಡ ಯಶಸ್ವಿಯಾಗಿದೆ.
ಮಾಹಿತಿಯ ಆಧಾರದಲ್ಲಿ ಆರೋಪಿ ಇಮ್ರಾನ್ ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ ಪೊಲೀಸರಿಗೆ ಎಸ್.ಡಿ.ಪಿ.ಐ. ಮುಖಂಡ ಶಾಹುಲ್ ಹಮೀದ್ ಅವರ ಪುತ್ರ ಸಫ್ವಾನ್ ಆತ ಭಾಗಿಯಾಗಿರುವ ಮಾಹಿತಿ ಪಡೆದು ಆತನನ್ನು ಬಂಧನ ನಡೆಸಿದ್ದರು. ಇದೀಗ ತನಿಖೆಯ ವೇಳೆ ಇಮ್ರಾನ್ ಹಾಗೂ ಸಪ್ವಾನ್ ಇವರ ಜೊತೆ ಮನೋಜ್ ಅವರಿಗೆ ಚೂರಿ ಇರಿತ ಮಾಡುವ ಸಂಚನ್ನು ರೂಪಿಸಿದ ಮತ್ತು ಸಹಾಯ ಮಾಡಿದವರು
ಪಿ.ಎಫ್.ಐ. ಸಂಘಟನೆಯ ಮುಖಂಡ ಪರ್ಲಿಯಾ ನಿವಾಸಿ ಇಸಾಕ್ ಅದ್ದೇರಿ, ಪಿ.ಎಫ್.ಐ. ಸದಸ್ಯ ಪರ್ಲಿಯಾ ನಿವಾಸಿ ತೌಸಿಫ್ ಯಾನೆ ತಾಚಿ ಪರ್ಲಿಯಾ, ಪಿ.ಎಫ್.ಐ. ಸಂಘಟನೆಯ ಕಾನೂನು ಸಲಹೆಗರಾ ತಲಪಾಡಿ ಕುಮೇರು ನಿವಾಸಿ ಶಾಕೀರ್ ಪರ್ಲಿಯಾ ಹಾಗೂ ಎಸ್.ಡಿ.ಪಿ.ಐ ಜಿಲ್ಲಾ ಮುಖಂಡ ರಿಯಾಜ್ ಫರಂಗಿಪೇಟೆ ಅವರ ಭಾವ ಪಿ.ಎಫ್.ಐ. ಸಂಘಟನೆಯ ಕಾರ್ಯದರ್ಶಿ ಮುಲ್ಕಿ ನಿವಾಸಿ ಇಕ್ಬಾಲ್ ಮುಲ್ಕಿ ಎಂಬ ವಿಚಾರ ತನಿಖೆಯ ವೇಳೆ ಮಾಹಿತಿ ಲಭ್ಯವಾಗರುವ ಹಿನ್ನೆಲೆಯಲ್ಲಿ ಬಂಧನಕ್ಕೆ ಬಲೆ ಬೀಸಿದ್ದಾರೆ.
ಘಟನೆ ನಡೆದಂತ ಸ್ಥಳದಲ್ಲಿ ಸಿ.ಸಿ. ಕ್ಯಾಮರಾ ಇತ್ತಾದರೂ ಅದು ವರ್ಕ್ ಆಗುತ್ತಿರಲಿಲ್ಲ. ಹಾಗಾಗಿ ರಾತ್ರಿ ಹಗಲು ಕಷ್ಟ ಪಟ್ಟು ಪೋಲೀಸರು ಈ ಪ್ರಕರಣದ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.