ಬಂಟ್ವಾಳ : ದ ಕ ಜಿ ಪಂ ಹಿರಿಯ ಪ್ರಾಥಮಿಕ ಶಾಲೆ ಬ್ರಹ್ಮರಕೂಟ್ಲು ಇಲ್ಲಿನ ಎಲ್ಲಾ ಮಕ್ಕಳ ಕುಟುಂಬಕ್ಕೆ ಹಾಗೂ ಕಳ್ಳಿಗೆ ಗ್ರಾಮದ ಆಶಾಕಾರ್ಯಕರ್ತೆಯರಿಗೆ ಅಂದಾಜು ಒಂದು ಲಕ್ಷ ಮೌಲ್ಯದ 100 ಕ್ಕಿಂತಲೂ ಮೇಲ್ಪಟ್ಟು ಆಹಾರ ಸಾಮಾಗ್ರಿ ಕಿಟ್, ಸಾನಿಟೈಜರ್ ಹಾಗೂ ಮಾಸ್ಕಗಳನ್ನು ಮಾಜಿ ಕಳ್ಳಿಗೆ ಗ್ರಾಮ ಪಂಚಾಯತು ಸದಸ್ಯ ಮಧುಸೂಧನ ಶೆಣೈ ಹಾಗೂ ಶಾಲಾ ಶಿಕ್ಷಕಿ ಭಾರತಿ ಶೇಷಪ್ಪ ಇವರ ಪೂರ್ಣ ಸಹಕಾರ ಹಾಗೂ ನೇತೃತ್ವದಲ್ಲಿ ಉದಾರ ದಾನಿಗಳ ನೆರವಿನಿಂದ ವಿತರಿಸಲಾಯಿತು. ಈ ಸಂದರ್ಭ ದಲ್ಲಿ ಗ್ರಾಮ ಪಂಚಾಯತು ಸದಸ್ಯರಾದ ರವಿ ಜೈನ್, ಎಸ್ ಡಿ ಎಂ ಸಿ ಅಧ್ಯಕ್ಷೆ ರತ್ನ ಮುಖ್ಯ ಶಿಕ್ಷಕಿ ಶ್ರೀಮತಿ ಫ್ಲೋರಿನ್ ರೆಬೆಲ್ಲೊ ಉಪಸ್ಥಿತರಿದ್ದರು.
ವಿಜಯಲಕ್ಷ್ಮಿ ಮಧುಸೂಧನ್ ಶೆಣೈ ಸಹಕರಿಸಿದರು. ನಿವೃತ್ತ ಶಿಕ್ಷಕ ಶೇಷಪ್ಪ ಮಾಸ್ಟರ್ ಕಾರ್ಯಕ್ರಮ ನಿರ್ವಹಿಸಿದರು.