Wednesday, April 10, 2024

ನರೇಂದ್ರ ಮೋದಿ ಆಡಳಿತಕ್ಕೆ ಏಳುವರ್ಷ! ಕೊರೊನಾ ಸಂಕಷ್ಟಕ್ಕೀಡದ ಬಂಟ್ವಾಳ ವಿಧಾನಸಭಾ ಕ್ಷೇತ್ರದ ಬಡ ಕುಟುಂಬಗಳ ಮಕ್ಕಳ ಭವಿಷ್ಯಕ್ಕೆ ಬಂಟ್ವಾಳ ಬಿಜೆಪಿಯಿಂದ ಕ್ಷೇಮ ನಿಧಿ! ಶಾಸಕ ರಾಜೇಶ್ ನಾಯ್ಕ್ ರಿಂದ ಹತ್ತು ಲಕ್ಷ ಘೋಷಣೆ!

ಬಂಟ್ವಾಳ: ಕೊರೊನಾ ಸೊಂಕಿನಿಂದ ಪೋಷಕರು ಮೃತಪಟ್ಟ ಸರ್ವ ಧರ್ಮದ ಬಡ ಕುಟುಂಬ ಗಳಿದ್ದರೆ ಗುರುತಿಸಿ ಅಂತಹ ಮನೆಯಲ್ಲಿರುವ ಮಕ್ಕಳ ವಿದ್ಯಾಭ್ಯಾಸ ಹಾಗೂ ಪೋಷಣೆಯ ಜವಬ್ದಾರಿ ಯನ್ನು ಬಂಟ್ವಾಳ ಶಾಸಕರು ಹಾಗೂ ಬಿಜೆಪಿ ಪಕ್ಷದ ಕ್ಷೇಮ ನಿಧಿ ಯೋಜನೆಯ ಮೂಲಕ ವಹಿಸಿಕೊಳ್ಳಲು ನಿಶ್ಚಯ ಮಾಡಿದ್ದೇವೆ ಎಂದು ಬಂಟ್ವಾಳ ಬಿಜೆಪಿ ಕ್ಷೇತ್ರ ಅಧ್ಯಕ್ಷ ದೇವಪ್ಪ ಪೂಜಾರಿ ತಿಳಿಸಿದರು.

ನರೇಂದ್ರ ಮೋದಿಯವರ ಆಡಳಿತದ ಏಳನೇ ವರ್ಷದ ಸಂಭ್ರಾಮಾಚರಣೆಯನ್ನು ಸೇವೆಯ ಮೂಲಕ ಆಚರಿಸಲು ನಿರ್ಧರಿಸಿದ್ದು ಈ ಕ್ಷೇಮ ನಿಧಿಗೆ ಶಾಸಕರು ಹತ್ತುಲಕ್ಷ ಘೋಷಣೆ ಮಾಡಿದ್ದು , ಬೆಜೆಪಿ ಪ್ರಮುಖ ರಿಂದ ಧನಸಂಗ್ರಾಹ ಮಾಡಿ ಒಟ್ಟು 25 ಲಕ್ಷ ರೂಗಳನ್ನು ನಿಧಿಯ ಪ್ರತ್ಯೇಕ ಖಾತೆಯಲ್ಲಿ ಜಮೆ ಮಾಡಿ ಬಂಟ್ವಾಳ ಬಿಜೆಪಿ ಕ್ಷೇಮ ನಿಧಿ ಸ್ಥಾಪಿಸಲಾಗುವುದು ಎಂದರು.

ಬಂಟ್ವಾಳ ಬಿಜೆಪಿ ಸೇವಾ ನಿಧಿಯ ಮೂಲಕ ಮುಂದಿನ ಸೇವೆ ಕಾರ್ಯಕ್ರಮಗಳು ಆರಂಭವಾಗಲಿದೆ

ನಾಳೆ.ಮೇ.30_ರಂದು ಸಂಸದ ನಳಿನ್ ಕುಮಾರ್ ಕಟೀಲು ಹಾಗೂ ಶಾಸಕರ ಉಪಸ್ಥಿತಿಯಲ್ಲಿ ಕ್ಷೇಮ ನಿಧಿ ಸಂಗ್ರಹಣೆ ಗೆ ಚಾಲನೆ ನೀಡಲಾಗುತ್ತದೆ.

ಇದು ಕೊರೊನಾ ಕ್ಕೆ ಸೀಮಿತವಾಗದೆ ಮುಂದಿನ ದಿನಗಳಲ್ಲಿ ಬಡ ಕುಟುಂಬಕ್ಕೆ ಸಹಾಯವಾಗುವ ನಿಟ್ಟಿನಲ್ಲಿ ಈ ಯೋಜನೆಗೆ ಯೋಚನೆ ಮಾಡಿ ಕಾರ್ಯರೂಪಕ್ಕೆ ತರಲು ಯತ್ನಿಸಿದ್ದೇವೆ.

ನರೇಂದ್ರ ಮೋದಿಯವರ ಏಳನೇ ವರ್ಷದ ಆಡಳಿತ ಪೂರೈಸಿದ ಸಂದರ್ಭ ಸೇವಾ ಚಟುವಟಿಕೆ ಹಾಗೂ ಬಂಟ್ವಾಳ ಶಾಸಕರ ಅಭಿವೃದ್ಧಿ ಕಾರ್ಯ ಜೊತೆಗೆ ಕೊರೊನಾ ಸಂದರ್ಭದಲ್ಲಿ ಅವರ ಸೇವಾ ಕಾರ್ಯದ ಬಗ್ಗೆ ಮಾಹಿತಿ ನೀಡುವ ಉದ್ದೇಶದಿಂದ ನಡೆದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು.

ನಾಳೆಮೇ.30 ರಂದು 59 ಗ್ರಾಮದ ಬೂತ್ ಗಳಲ್ಲಿ ಸೇವಾ ಚಟುವಟಿಕೆಗಳಿಗೆ ಚಾಲನೆ ನೀಡಲಾಗುತ್ತದೆ.

ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಅವರು ಅನಂತಾಡಿ, ನೆಟ್ಲಮೂಡ್ನೂರು ಎರಡು ಗ್ರಾಮದಲ್ಲಿ ನಡೆಯುವ ಸೇವಾ ಕಾರ್ಯಕ್ರಮದಲ್ಲಿ ಭಾಗಿಯಾಗುತ್ತಾರೆ.

ಮೇ.30 ರಿಂದ ಮೂರು ದಿನಗಳ ಕಾಲ ಸೇವೆ ಕಾರ್ಯಕ್ರಮ ನಡೆಯಲಿದೆ.

ಎಲ್ಲಾ ಬೂತ್ ಗಳಲ್ಲಿ 22 ಕಾರ್ಯಕ್ರಮ ಗಳನ್ನು ಮಾಡಲು ನಿಶ್ಚಯಿಸಲಾಗಿದೆ.

ಕೊರೊನಾ ವಿರುದ್ದ ಹೊರಾಡಿದ ಅಧಿಕಾರಿಗಳು, ಆಶಾಕಾರ್ಯಕರ್ತೆಯರ ಗುರುತಿಸುವಿಕೆ, ಕೊರೊನಾ ಸೊಂಕಿತರ ಮನೆ ಬೇಟಿ ಜೊತೆಗೆ ಅವರಿಗೆ ಸೌಲಭ್ಯವಿತರಣೆ ಮಾಡುವ ಕಾರ್ಯಕ್ರಮ ಆಯೋಜನೆ ಮಾಡಲಾಗಿದೆ.

ಸ್ವಚ್ಚತೆ, ಬಡಕುಟುಂಬದ ಮನೆ ದುರಸ್ತಿಗೆ ಸಹಕಾರ, ರಸ್ತೆ ದುರಸ್ತಿ ಹೀಗೆ ಸಾರ್ವಜನಿಕ ಸಮಸ್ಯೆಗಳಿಗೆ ಸೂಕ್ತ ಸ್ಪಂದನೆ ನೀಡುವ ಕಾರ್ಯಕ್ರಮಗಳಿಗೆ ಹೆಚ್ಚಿನ‌ ಉತ್ತೇಜನ ನೀಡಲಾಗುತ್ತದೆ ಎಂದರು

ಪಕ್ಷದ ಜವಬ್ದಾರಿ ಯಿರುವ ಪ್ರತಿಯೊಬ್ಬರೂ ಗ್ರಾಮದಲ್ಲಿ ನಡೆಯುವ ಸೇವಾ ಕಾರ್ಯ ಚಟುವಟಿಕೆ ಯಲ್ಲಿ ಪಾಲ್ಗೊಳ್ಳಲು ಸೂಚಿಸಲಾಗಿದೆ.

ಕೊರೊನಾ ಮುಕ್ತ, ಗ್ರಾಮ ಹಾಗೂ ಪ್ರತಿಯೊಬ್ಬರಿಗೂ ಲಸಿಕೆ ಪಡೆಯುವ ಸಲುವಾಗಿ ಬಿಜೆಪಿ ಸಂಘಟನಾತ್ಮಕ ರೀತಿಯಲ್ಲಿ ಕೆಲಸ ಮಾಡುತ್ತಿದೆ.

ಬಂಟ್ವಾಳವನ್ನು ಮಾದರಿ ಕ್ಷೇತ್ರವಾಗಿ ರೂಪಿಸಲು ವಿಶೇಷ ಪ್ರಯತ್ನಗಳನ್ನು ಮಾಡುತ್ತಿರುವ ಶಾಸಕರಿಗೆ ಕ್ಷೇತ್ರದ ಜನರ ಸಹಕಾರ , ಬೆಂಬಲ ಉತ್ತಮವಾಗಿದೆ.

ಕೊರೊನಾ ನಿಯಂತ್ರಣಕ್ಕೆ ಶಾಸಕರು 24ಗಂಟೆಗಳ ಕಾಲ ನಿರಂತರವಾಗಿ ಕೆಲಸ ಮಾಡುತ್ತಿದ್ದು ಜೊತೆಯಲ್ಲಿ ಅವರಿಗೆ ಸಾಥ್ ನೀಡುವ ಶಾಸಕರ ವಾರ್ ರೂಮ್, ಮತ್ತು ಬಿಜೆಪಿ ಪಕ್ಷದ ಕಾರ್ಯಕರ್ತರು ಕೊರೊನಾ ನಿಯಂತ್ರಣಕ್ಕೆ ಹಗಲಿರುಳು ಶ್ರಮಿಸಿದ್ದಾರೆ.

ಯಾವುದೇ ಪ್ರಚಾರವಿಲ್ಲದೆ ಬಡ ಹಾಗೂ ಕೊರೊನಾ ಸೊಂಕಿತರ ಮನೆಗೆ ಶಾಸಕರು ವೈಯಕ್ತಿಕವಾಗಿ ದಿನ ಬಳಕೆಯ ಕಿಟ್ ಗಳನ್ನು ನೀಡಿದ್ದಾರೆ ಎಂದು ಅವರು ತಿಳಿಸಿದರು.

ವಿಶೇಷ ವಾಗಿ ಬಂಟ್ವಾಳ ಶಾಸಕರ ಮುತುವರ್ಜಿಯಿಂದ ಬಂಟ್ವಾಳ ಸರಕಾರಿ ಆಸ್ಪತ್ರೆಯ ನ್ನು ಅತ್ಯುನ್ನತ ಮಟ್ಟಕ್ಕೆ ತಂದ ಹೆಗ್ಗಳಿಕೆ ಇವರದು ಅತ್ಯಾಧುನಿಕ ಸೌಕರ್ಯಗಳನ್ನು ಒದಗಿಸುವ ಮೂಲಕ ಬಂಟ್ವಾಳ ತಾಲೂಕಿನ ಜನತೆಯ ಆರೋಗ್ಯ ರಕ್ಷಣೆ ಗೆ ಬೇಕಾದ ಸಂಪೂರ್ಣ ವ್ಯವಸ್ಥೆ ಗಳನ್ನು ಸರಕಾರದ ಅನುದಾನ ಹಾಗೂ‌ ವೈಯಕ್ತಿಕ ನೆರವಿನಿಂದ ಮಾಡಿದ್ದಾರೆ ಎಂಬುದು ಅತ್ಯಂತ ಖುಷಿಯ ವಿಚಾರ ಎಂದು ಅವರು ತಿಳಿಸಿದರು.

*ಕಾಂಗ್ರೇಸ್ ಕೀಳು ಮಟ್ಟದ ರಾಜಕೀಯ*

ಸಂದಿಗ್ಧ ಪರಿಸ್ಥಿತಿಯಲ್ಲಿ ಜನರಿಗೆ ಧೈರ್ಯ ತುಂಬುವ ಜೊತೆಗೆ ಶಾಸಕರ ಜೊತೆ ಸೇರಿಕೊಂಡು ಕೆಲಸ ಮಾಡುವುದನ್ನು ಬಿಟ್ಟು ಕಾಂಗ್ರೇಸ್ ಕೇವಲ ರಾಜಕೀಯ ಮಾಡುತ್ತಾ ಕಾಲಹರಣ ಮಾಡುವುದರಲ್ಲೇ ಇದೆ ಎಂದು ಆರೋಪ ವ್ಯಕ್ತಪಡಿಸಿದರು.

ಕೊರೊನಾ ನಿಯಂತ್ರಣ ಮಾಡುವಲ್ಲಿ ರಾಜ್ಯ ಸರಕಾರ ವಿಫಲ ಎಂದು ಆರೋಪ ಮಾಡುವ ಬದಲು ಕ್ಷೇತ್ರದ ಜನರ ಹಿತಕಾಯುವ ಕೆಲಸ ಮಾಡಿ ಎಂದು ಅವರು ಹೇಳಿದರು.

ಈ ಸಂದರ್ಭದಲ್ಲಿ ವೇದಿಕೆಯಲ್ಲಿ ಬಿಜೆಪಿ ಪ್ರಮುಖರಾದ ಡೊಂಬಯ್ಯ ಅರಳ, ರವೀಶ್ ಶೆಟ್ಟ ಕರ್ಕಳ, ಮೋನಪ್ಪ ದೇವಸ್ಯ, ಸುದರ್ಶನ ಬಜ, ಪ್ರದೀಪ್ ಅಜ್ಜಿಬೆಟ್ಟು ಉಪಸ್ಥಿತರಿದ್ದರು.

More from the blog

ಮರು ಮೌಲ್ಯಮಾಪನಕ್ಕೆ ಅರ್ಜಿ ಸಲ್ಲಿಸುವುದು ಹೇಗೆ….?​ ಇಲ್ಲಿದೆ ಮಾಹಿತಿ

ಬೆಂಗಳೂರು: ಈ ಬಾರಿಯ ದ್ವಿತೀಯ ಪಿಯುಸಿ ಪರೀಕ್ಷೆ ಫಲಿತಾಂಶ ಪ್ರಕಟಗೊಂಡಿದ್ದು, ಶೇ 81.15 ಮಂದಿ ಉತ್ತೀರ್ಣಗೊಂಡಿದ್ದಾರೆ. 2024ನೇ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಕಲಾ ವಿಭಾಗದಲ್ಲಿ 1,28,448 ವಿದ್ಯಾರ್ಥಿಗಳು ಪಾಸ್ ಆಗಿದ್ದಾರೆ. ವಾಣಿಜ್ಯ ವಿಭಾಗದಲ್ಲಿ...

ದ್ವಿತೀಯ ಪಿಯು ಫಲಿತಾಂಶ ಪ್ರಕಟ : ದಕ್ಷಿಣ ಕನ್ನಡ ಜಿಲ್ಲೆಗೆ ಮೊದಲ ಸ್ಥಾನ

ಬೆಂಗಳೂರು: ಮಾರ್ಚ್ 1ರಿಂದ ಮಾರ್ಚ್ 22ರವರೆಗೆ ನಡೆದಿದ್ದ ದ್ವಿತೀಯ ಪಿಯುಸಿ ಪರೀಕ್ಷೆ ಫಲಿತಾಂಶ ಬುಧವಾರ ಪ್ರಕಟಗೊಂಡಿದೆ. ಬೆಂಗಳೂರಿನಲ್ಲಿ ಶಿಕ್ಷಣ ಇಲಾಖೆ ಸುದ್ದಿಗೋಷ್ಠಿ ನಡೆಸಿ ಫಲಿತಾಂಶ ಪ್ರಕಟಿಸಿದೆ. ಈ ಬಾರಿ, ಶೇ 81.15 ಮಂದಿ ಉತ್ತೀರ್ಣರಾಗಿದ್ದಾರೆ....

ಶಾಲಾ ಸಮುದಾಯದತ್ತ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ

ಮಾಣಿ: ಶೈಕ್ಷಣಿಕ ವಿಚಾರಗಳ ಸಂಬಂಧಿತವಾದ ಒಳ್ಳೆಯ ಚಚೆ೯ಗಳು ಮೂಡಿಬಂದಾಗ ವಿದ್ಯಾರ್ಥಿಗಳ ಶೈಕ್ಷಣಿಕ ಅಭಿವೃದ್ಧಿಗೆ ಪೂರಕವಾದ ಕೆಲಸಗಳು ಮೂಡಲು ಸಾಧ್ಯ ‌. ಪ್ರತಿಯೊಬ್ಬ ವಿದ್ಯಾರ್ಥಿ, ಪೋಷಕರು,ತನ್ನ ಶಾಲೆಯ ಬಗ್ಗೆ ಒಳ್ಳೆಯ ಭಾವನೆ, ಸಂಬಂಧ ಇರಬೇಕು...

ಮೈಟ್ ಎಜುಕೇಶನ್ ಸಂಸ್ಥೆಯ ವತಿಯಿಂದ 2024ರ ಪ್ರಾಕ್ಟಿಕಲ್ ಪರೀಕ್ಷೆ

ಮಂಗಳೂರು ಹಾಗೂ ಬಿಸಿರೋಡ್ ನಲ್ಲಿ ಕಾರ್ಯನಿರ್ವಹಿಸುತ್ತಿರುವ ಮೈಟ್ ಎಜುಕೇಶನ್ ಸಂಸ್ಥೆಯ ವತಿಯಿಂದ 2024ರ ಪ್ರಾಕ್ಟಿಕಲ್ ಪರೀಕ್ಷೆ ಸೋಮವಾರ ಬಿಸಿರೋಡ್ ಶಾಖೆಯಲ್ಲಿ ನಡೆಯಿತು. ಟೀಚರ್ಸ್ ಟ್ರೈನಿಂಗ್ ವಿಭಾಗದ ವಿದ್ಯಾರ್ಥಿನಿಯರಿಂದ ಪ್ರಸ್ತುತ ವರ್ಷದಲ್ಲಿ ತಯಾರಿಸಿದ ಎಲ್ಲಾ ಕಲಿಕಾ...