ಬೆಳ್ತಂಗಡಿ: ತಾಲೂಕಿನ ಚಾರ್ಮಾಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಚಿಬಿದ್ರೆ ಗ್ರಾಮದಲ್ಲಿಉರ್ಪೆಲ್ ಗುಡ್ಡೆ ಎಂಬಲ್ಲಿ ಮಂಗಳವಾರ ಸಂಜೆ ಮೃತ್ಯುಂಜಯ ನದಿಯಲ್ಲಿ ಏಕಾಏಕಿ ನೀರಿನ ಏರಿಕೆ ಉಂಟಾಗಿ ಪಿಕಪ್ ವಾಹನ ನೀರಲ್ಲಿ ಮುಳುಗಿದ ಘಟನೆ ನಡೆದಿದೆ.
ಅಳದಂಗಡಿ ಕಡೆಯ ಪಿಕಪ್ ವಾಹನದಲ್ಲಿ ಇಲ್ಲಿನ ಎಂಕೆ ದಯಾನಂದ ಎಂಬವರ ಮನೆಗೆ ನದಿ ಹಾದಿಯ ಮೂಲಕ ಸೆಂಟ್ರಿಂಗ್ ಸಾಮಗ್ರಿಗಳನ್ನು ಸಾಗಿಸಿ ವಾಪಸಾಗುತ್ತಿದ್ದ ಸಂದರ್ಭದಲ್ಲಿ ಪಿಕಪ್ ವಾಹನ ನದಿಯ ಮಧ್ಯಭಾಗಕ್ಕೆ ಬರುತ್ತಿದ್ದಂತೆಯೇ ಭಾರಿ ಪ್ರಮಾಣದ ನೀರು ಹರಿದು ಬಂದಿದೆ. ಪಿಕಪ್ ಚಲಾಯಿಸಲು ಸಾಧ್ಯವಾಗದಿದ್ದಾಗ ಅಪಾಯ ಅರಿತು ಕಂಗಾಲಾದ ಪಿಕಪ್ ಚಾಲಕ ಹಾಗೂ ಪಿಕಪ್ ನಲ್ಲಿದ್ದ ಇನ್ನೋರ್ವ ಸೈಡ್ ಗ್ಲಾಸ್ ಹಾಕಿ ಗಾಡಿಯಿಂದ ಇಳಿದು ನದಿಯಿಂದ ಮೇಲೆ ಬಂದಿದ್ದಾರೆ.
ಪಿಕಪ್ ಅಲ್ಲಿಯೇ ಸಿಲುಕೊಕೊಂಡಿದೆ. ಚಾಲಕ ಮೊಬೈಲ್ ನಲ್ಲಿ ಕರೆಮಾಡಿ ಇತರರಿಗೆ ಮಾಹಿತಿ ನೀಡಿದ್ದಾರೆ.
ತಕ್ಷಣವೇ ಸ್ಥಳಕ್ಕೆ ಧಾವಿಸಿದ ಸ್ಥಳೀಯ ಯುವಕರು ಸಹಾಸಮಾಡಿ ನೀರಿಗೆ ಇಳಿದು ಪಿಕಪಿಗೆ ಹಗ್ಗ ಹಾಕಿ ಮರಕ್ಕೆ ಕಟ್ಟಿದ್ದಾರೆ. ನೀರಿನ ಮಟ್ಟ ಪಿಕನ ಮೇಲೇರಿದ್ದು ಪಿಕಪ್ ಮಗುಚಿ ಬಿದ್ದಿದೆ. ಎರಡು ಮೂರು ಪಲ್ಟಿಯಾಗಿ ಹಗ್ಗದ ಬಲದಲ್ಕಿ ನಿಂತಿದೆ.
ಎಸ್ಕೆ ಎಸ್.ಎಸ್ ಏಫ್ ನ ವಿಖಾಯ ತಂಡದವರು ಹಗ್ಗ ಹಾಗೂ ರೋಪ್ ತಂದು ಉಕ್ಕಿ ಹರಿಯುತ್ತಿದ್ದ ನದಿಗೆ ಧುಮುಕಿ ಪಿಕಪನ್ನು ಸಾಹಸಪಟ್ಟು ಎಳೆದು ನದಿಯಿಂದ ಮೇಲೆತ್ತಿದ್ದಾರೆ. ಪಿಕಪ್ ಸಂಪೂರ್ಣ ನುಜ್ಜುಗಿಜ್ಜಾಗಿದೆ.
ಸ್ಥಳೀಯ ವಿಖಾಯ ತಂಡದ ಸಿರಾಜ್ ಚಿಬಿದ್ರೆ, ರಫೀಕ್, ನಝೀರ್ ಬಿಕೆ,ಇಕ್ಬಾಲ್ ಕೋನ, ಇಮ್ರಾನ್,ಆಸಿಫ್,ಅದ್ದು, ಉಸ್ಮಾನ್ ಹಾಗೂ ಇತರರು ಪಿಕಪ್ ಅನ್ನು ಮೇಲೆತ್ತಲು ಸಹಕರಿಸಿದರು.