ಪುಂಜಾಲಕಟ್ಟೆ : ಪಿಲಾತಬೆಟ್ಟು ಗ್ರಾಮದ ಧೈಕಿನಕಟ್ಟೆ – ನರ್ಸಿಕುಮೇರು ಮಾರ್ಗದ ಪೊರಿಮೇಲು ಎಂಬಲ್ಲಿ ಡಾಮರೀಕರಣದ ಮಾರ್ಗ ಹಾಳಾಗಿ ವಾಹನ ಸವಾರರು ಕಷ್ಟಪಟ್ಟು ಹೋಗಬೇಕಾದ ಪರಿಸ್ಥಿತಿಯಿದ್ದು, ಯಂ. ತುಂಗಪ್ಪ ಬಂಗೇರರವರು ಸೇವಾ ಮನೋಭಾವದ ಯುವಕರನ್ನು ಒಟ್ಟುಗೂಡಿಸಿ ಮಾರ್ಗಕ್ಕೆ ಕಾಂಕ್ರೀಟಿಕರಣದ ಮೂಲಕ ತೇಪೆ ಹಚ್ಚುವ ಕಾರ್ಯವನ್ನು ಮಾಡಿದ್ದಲ್ಲದೇ ಮಾರ್ಗದ ಎರಡೂ ಬದಿಗಳಲ್ಲಿ ಬೆಳೆದು ನಿಂತ ಪೊದೆ, ಕಳೆ ಗಿಡಗಳನ್ನು ಕಡಿದು ಸ್ವಚ್ಛ ಮಾಡಿಸುವ ಕ್ರಿಯೆಯಲ್ಲಿ ತಾನೂ ಸ್ವತಃ ಭಾಗಿಯಾದರು.
ರಾಜಕಾರಣಿಗಳು ಹೇಳಿಕೆಯಲ್ಲೇ ಮೆರೆಯುವ ಈ ಕಾಲದಲ್ಲಿ , ಕಾಯಕದಲ್ಲಿ ತೊಡಗಿಸಿಕೊಂಡ ನಿಜಾರ್ಥದ ಜನಸೇವಕನೊಡನೆ ಕೈ ಜೋಡಿಸಿದ ಕರ್ಮಿಗಳು.
ಸುಧಾಕರ ನಾಕುನಾಡು, ರಾಘವ ನಿರ್ಪಾರಿ, (ಮೇಸ್ತ್ರಿಗಳು) ಸುಂದರ ನಾಯ್ಕ , ದಯಾನಂದ ಶೆಟ್ಟಿಗಾರ , ಭೋಜ ಕುಲಾಲ್, ಪ್ರಭಾಕರ ಪಿ.ಯಂ., ರತ್ನಾಕರ, ಧನ್ಯರಾಜ್, ಕೃಷ್ಣಪ್ಪ ಪುಳಿಮಜಲು, ರುಕ್ಮಯ್ಯ ಕನಲ್ದಪಲ್ಕೆ, ಶ್ರೀಧರ್ ಪೂಜಾರಿ ರಿಕ್ಷಾ, ಪುರುಷೋತ್ತಮ ಅತ್ತಾಜೆ.