ಬಂಟ್ವಾಳ: ಮಾಣಿ ಶ್ರಿ ಉಳ್ಳಾಲ್ತಿ ದೈವದ ಬಸವ ‘ಅರಸು’ ಕೆಲವು ದಿನಗಳ ಅನಾರೋಗ್ಯದ ಬಳಿಕ ಶುಕ್ರವಾರ ಬೆಳಗ್ಗೆ ಕೊನೆಯುಸಿರೆಳೆಯಿತು.
2012ರಲ್ಲಿ ಮಾಣಿ ಶ್ರೀ ಉಳ್ಳಾಲ್ತಿ ದೈವದ ಚಾಕರಿಗಾಗಿ ಅರಸು ನಿಯೋಜನೆಗೊಂಡಿತ್ತು. ಮಾಣಿ ಉಳ್ಳಾಲ್ತಿ ದೈವದ ಜೊತೆಯಲ್ಲಿ ಮಾಣಿ ಗ್ರಾಮದ ಒಟ್ಟು 7 ಕಡೆಗಳ ದೈವದ ಚಾಕರಿಯಲ್ಲಿ ಪಾಲ್ಗೊಳ್ಳುತ್ತಿತ್ತು.
ಅ ಬಳಿಕ ನಿರಂತರವಾಗಿ ಉಳ್ಳಾಲ್ತಿ ದೈವದ ನೇಮದ ಸೇವೆಯಲ್ಲಿ ಪಾಲ್ಗೊಂಡು ಎಲ್ಲರ ಅಚುಮೆಚ್ಚಿಗೆ ಪಾತ್ರವಾಗಿತ್ತು. ಕೆಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಅರಸು ಇಂದು ಕೊನೆಯುಸಿರೆಳೆದಿದೆ.