ಹೈದರಾಬಾದ್: ಕಳೆದ ಬಾರಿಗಿಂತ ಈ ಬಾರಿ ಕರೊನಾ ತೀವ್ರತೆ ಹೆಚ್ಚಾಗಿದ್ದು ಮಹಾಮಾರಿ ಕರೊನಾ ಎರಡನೇ ಅಲೆಯಲ್ಲಿ ಹೆಚ್ಚಾಗಿ ಯುವ ಸಮೂಹವೇ ಬಲಿಯಾಗುತ್ತಿದ್ದಾರೆ.
ಹೈದರಾಬಾದ್ನ ಗುಡಿ ಮಲ್ಕಾಪುರ್ ಕ್ಷೇತ್ರದ ಬಿಜೆಪಿ ಕಾರ್ಪೊರೇಟರ್ ದೇವ್ ಕರುಣಾಕರ್ ಅವರ ಮಗಳು ಭವಾನಿ ಕೊರೋನ ಸೋಂಕಿನಿಂದ ಮೃತಪಟ್ಟಿದ್ದಾರೆ.
ಕಳೆದ ವರ್ಷ ಮದುವೆ ಆಗಿರುವ ಭವಾನಿ ಏಪ್ರಿಲ್ 20ರಂದು ಗಂಡು ಮಗುವಿಗೆ ಜನ್ಮ ನೀಡಿದ್ದು ಇದೀಗ ಕರೊನಾಗೆ ಬಲಿಯಾಗಿದ್ದಾರೆ. 5 ದಿನಗಳಿಂದ ಭವಾನಿ ವೆಂಟಿಲೇಟರ್ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಳು. ಆದರೆ ಚಿಕಿತ್ಸೆ ಫಲಿಸದೆ ಇಂದು ಬೆಳಗ್ಗೆ ಕೊನೆಯುಸಿರೆಳೆದಿದ್ದಾರೆ.